ಬರಗಾಲ ಘೋಷಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿದ್ದು, ಅವುಗಳನ್ನು ಸಡಿಲಗೊಳಿಸಲು ಪತ್ರ ಬರೆದಿದ್ದೇನೆ. ಆದರೆ, ಅಲ್ಲಿಂದ ವಾಪಸ್‌ ಉತ್ತರವೇ ಬಂದಿಲ್ಲ. ಹೀಗಾಗಿ ಬರಘೋಷಣೆ ವಿಳಂಬವಾಗಿದೆ. ಇಷ್ಟಾಗಿಯೂ ಮುಂದಿನ ಸಚಿವ ಸಂಪುಟದಲ್ಲಿ ನಿಶ್ಚಿತವಾಗಿ ಬರಗಾಲ ಘೋಷಣೆ ಮಾಡಲಾಗುವುದು ಎಂದ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ

CM Siddaramaiah Talks Over Declaration of Drought in Karnataka grg

ಧಾರವಾಡ(ಸೆ.10): ಮುಂಗಾರು ಮಳೆ​ ಕೈ​ಕೊಟ್ಟು ರೈತರು ಸಂಕ​ಷ್ಟ​ದ​ಲ್ಲಿ​ದ್ದರೂ ಬರ​ಗಾಲ ಪೀಡಿತ ಪ್ರದೇಶ ಘೋಷ​ಣೆಗೆ ರಾಜ್ಯ ಸರ್ಕಾ​ರದ ವಿಳಂಬ ಧೋರಣೆ ಕುರಿತು ಪ್ರತಿ​ಪ​ಕ್ಷ​ಗ​ಳಿಂದ ತೀವ್ರ ಟೀಕೆ ವ್ಯಕ್ತ​ವಾದ ಬೆನ್ನಲ್ಲೇ ಇದೀಗ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಈ ಕುರಿತು ಸ್ಪಷ್ಟಭರ​ವಸೆ ನೀಡಿ​ದ್ದಾ​ರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂರಕ್ಕೆ ನೂರರಷ್ಟುಬರಗಾಲ ಪೀಡಿತ ತಾಲೂಕುಗಳ ಘೋಷಣೆ ಮಾಡಲಾಗುವುದು ಎಂದು ಹೇಳಿ​ದ್ದಾ​ರೆ.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಶನಿವಾರ ಚಾಲನೆ ನೀಡಿ, ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿದ್ದು, ಅವುಗಳನ್ನು ಸಡಿಲಗೊಳಿಸಲು ಪತ್ರ ಬರೆದಿದ್ದೇನೆ. ಆದರೆ, ಅಲ್ಲಿಂದ ವಾಪಸ್‌ ಉತ್ತರವೇ ಬಂದಿಲ್ಲ. ಹೀಗಾಗಿ ಬರಘೋಷಣೆ ವಿಳಂಬವಾಗಿದೆ. ಇಷ್ಟಾಗಿಯೂ ಮುಂದಿನ ಸಚಿವ ಸಂಪುಟದಲ್ಲಿ ನಿಶ್ಚಿತವಾಗಿ ಬರಗಾಲ ಘೋಷಣೆ ಮಾಡಲಾಗುವುದು ಎಂದರು.

ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!

ಇದಕ್ಕೂ ಮುನ್ನ ಮಾತನಾಡಿದ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಅಸಮರ್ಪಕ ಮಳೆಯಿಂದ ರಾಜ್ಯದ ಬಹುತೇಕ ಕಡೆ ಬರದ ಛಾಯೆ ಇದೆ. ಕೇಂದ್ರದ ಮರ್ಗಸೂಚಿ ಅನ್ವಯ 62 ತಾಲೂಕುಗಳಲ್ಲಿ ಮಾತ್ರ ಬರ ಘೋಷಣೆ ಮಾಡಬಹುದು. ಆದ್ದರಿಂದಲೇ ನಿಯಮಾವಳಿ ಸಡಿಲ ಮಾಡಲು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸ್ಪಂದನೆ ಇಲ್ಲದ್ದರಿಂದ ಸಚಿವ ಸಂಪುಟದ ಉಪ ಸಮಿತಿ ಬರ ಎದುರಿಸುತ್ತಿರುವ 62 ತಾಲೂಕು ಸೇರಿ ರಾಜ್ಯದ 130 ಹೆಚ್ಚುವರಿ ತಾಲೂಕುಗಳನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ. ಒಟ್ಟು 196 ತಾಲೂಕುಗಳಲ್ಲಿ ಬರ ಘೋಷಣೆಗೆ ಸಚಿವ ಸಂಪುಟದ ಉಪ ಸಮಿತಿ ತಿರ್ಮಾನಿಸಿದೆ. ಇನ್ನೊಂದು ವಾರದಲ್ಲಿ ಈ ತಾಲೂಕುಗಳಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ಸಚಿವ ಸಂಪುಟದಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

196 ತಾಲೂಕಲ್ಲಿ ಬರ

ಸಚಿವ ಸಂಪುಟದ ಉಪ ಸಮಿತಿ ಬರ ಎದುರಿಸುತ್ತಿರುವ 62 ತಾಲೂಕು ಸೇರಿದಂತೆ 130 ಹೆಚ್ಚುವರಿ ತಾಲೂಕುಗಳನ್ನೂ ಈ ಪಟ್ಟಿಗೆ ಸೇರಿಸಲು ತೀರ್ಮಾನಿಸಿದೆ. ಒಟ್ಟು 196 ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios