Asianet Suvarna News Asianet Suvarna News

ಡಿಸಿಗಳು ಮಹಾರಾಜರ ಥರ ಆಡಬೇಡಿ: ಸಿದ್ದರಾಮಯ್ಯ ಗರಂ..!

ಅತಿವೃಷ್ಟಿಯಿಂದ ಉಂಟಾಗಬಹುದಾದ ನೆರೆ ಸಮಸ್ಯೆಗಳ ನಿಯಂತ್ರಣಕ್ಕೆ ಕ್ರಮ, ಆರ್ಥಿಕ ಪರಿಹಾರ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

CM siddaramaiah Slams district collectors in karnataka grg
Author
First Published Jul 9, 2024, 5:35 AM IST

ಬೆಂಗಳೂರು(ಜು.09): 'ಜಿಲ್ಲಾಧಿಕಾರಿಗಳಿಗೆ ನಾವೇ ಮಹಾರಾಜರು ಎನ್ನುವ ಭಾವನೆ ಬೇಡ. ರಾಜಕಾರಣಿ ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎಂಬುದನ್ನು ಅರಿತು ಜನರ ಸಮಸ್ಯೆ ಪರಿಹರಿಸಿ. ನನ್ನವರೆಗೂ ಜನರ ಅಹವಾಲು ಬರುತ್ತಿವೆ ಎಂದರೆ ನೀವು ಜನರನ್ನು ಭೇಟಿ ಮಾಡುತ್ತಿಲ್ಲ ಎಂದರ್ಥ. ಇನ್ನು ಈ ನಿರ್ಲಕ್ಷ್ಯ ಮುಂದುವರೆದರೆ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಸುದೀರ್ಘವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಸ್ತುವಾರಿ ಕಾರ್ಯ ದರ್ಶಿಗಳ ಸಭೆ ನಡೆಸಿದ ಅವರು ಇಲಾಖಾ ವಾರು ಸಮಸ್ಯೆಗಳನ್ನು ಅಧಿಕಾರಿಗಳಿಗೆ ಚಾಟಿ ಬೀಸಿದರು.

ಸಿಎಂ ಪತ್ನಿ ಪಡೆದ ನಿವೇಶನ ಶೇ.100 ಕಾನೂನುಬದ್ಧ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಅತಿವೃಷ್ಟಿಯಿಂದ ಉಂಟಾಗಬಹುದಾದ ನೆರೆ ಸಮಸ್ಯೆಗಳ ನಿಯಂತ್ರಣಕ್ಕೆ ಕ್ರಮ, ಆರ್ಥಿಕ ಪರಿಹಾರ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ, ಕಂದಾಯ ಸಮಸ್ಯೆಗಳು, ಎಸ್ಸೆಸ್ಸೆಲ್ಸಿ ಫಲಿತಾಂಶ, ಡೆಂಘೀ ನಿಯಂತ್ರಣ, ಸರ್ಕಾರಿ ಆಸ್ತಿಗಳ ಸಂರಕ್ಷಣೆ.. ಹೀಗೆ ಸಾಲು-ಸಾಲು ವಿಚಾರಗಳನ್ನು ಮುಂದಿಟ್ಟುಕೊಂಡು ಸಮರ್ಪಕವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಇನ್ನು ಮುಂದೆ ಎಲ್ಲಾ ಕೆಲಸಗಳನ್ನೂಜಿಲ್ಲಾ-ತಾಲೂಕು ಅಧಿಕಾರಿಗಳು ಸಮನ್ವಯತೆಯಿಂದತಳಮಟ್ಟದಲ್ಲೇ ಪರಿಹಾರ ಕಲ್ಪಿಸಬೇಕು. ತಹಸೀಲ್ದಾ‌ರ್, ಎಸಿ ಹಾಗೂ ಡಿಸಿಗಳ ಬಳಿಯಿರುವ ಭೂ ವ್ಯಾಜ್ಯಗಳನ್ನು ಕೂಡಲೇ ಪರಿಹರಿಸಬೇಕು. ನನ್ನವರೆಗೂ ಅಹವಾಲುಗಳುಬಂದರೆನೀವು ಕೆಲಸಮಾಡಿಲ್ಲ ಎಂದೇ ಪರಿಗಣಿಸಲಾಗುವುದು. ಆಹವಾಲು ಸಕಾರಾತ್ಮಕವಾಗಿ ವಿಲೇವಾರಿ ಮಾಡದಿದ್ದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳ ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸ್ಥಳೀಯವಾಗಿ ಸರಿಯಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ?ಜಿಲ್ಲಾಧಿಕಾರಿ, ಜಿಲ್ಲಾಪಂಚಾಯ್ತಿ ಸಿಇಓಗಳು ಗಳಿಗೆ ಬಂದ ಕೊಟ್ಟು ಇರುವುದು ಜನಸಂಪರ್ಕ ಸಭೆ ಅರ್ಜಿಗಳನ್ನು ಪಡೆದು ಮುಚ್ಚಳಿಕೆ ಕೈತೊಳೆದುಕೊಳ್ಳುವುದಿಕ್ಕಾ? ಎಂದು ಖಾರವಾಗಿ ಪ್ರಶ್ನಿಸಿದರು.

ಅಧಿಕಾರಿಗಳಿಗೆ ಸಿಎಂ ಪಾಠ: 

ಜಿಲ್ಲಾಧಿಕಾರಿಗಳು ಗೆಜೆಟಿಯರ್, ಎಕನಾಮಿಕ್ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಸಂವಿಧಾನ ಕೇವಲ ಓದುವುದಕ್ಕಲ್ಲ ಅನುಷ್ಠಾನಕ್ಕೆ ಎಂಬುದನ್ನು ಅರಿಯಿರಿ. ಫೈಸರ್ ಎಂಬ ಅಧಿಕಾರಿಯ ಸಲಹೆ ಇಲ್ಲದೆನಾಲ್ವಡಿಕೃಷ್ಣರಾಜ ಒಡೆಯರ್, ಗಾಯಕ್‌ವಾಡ್, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮನೋ ಎಂಬ ಅಧಿಕಾರಿ ಕಲೆಕ್ಟರ್ ಆಗಿದ್ದರು. ಇಂದಿಗೂ ಅಲ್ಲಿನ ಜನ ತಮ್ಮ ಮಕ್ಕಳಿಗೆ ಅವರ ಹೆಸರಿಡುತ್ತಾರೆ.

ಭೂ ವ್ಯಾಜ್ಯಗಳನ್ನು ಶೀಘ್ರ ಪರಿಹರಿಸಿ:

ತಹಶೀಲ್ದಾರ್‌ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು (ಹಕ್ಕು ಬದಲಾವಣೆ) ಪ್ರಕರಣಗಳು 37587 ಬಾಕಿ ಇವೆ. ಜಿಲ್ಲಾಧಿಕಾರಿಗಳ ಬಳಿ 10838 ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿಗಳೇ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳಿಗೆ ಏನು ಸೂಚನೆ ಕೊಡ್ತೀರಿ? ಮೊದಲು ವ್ಯಾಜ್ಯಗಳನ್ನು ಪರಿಹರಿಸಿ ಸಿದ್ದರಾಮಯ್ಯ ಗರಂ ಆದರು. ಇವೆ. ಬಾಕಿ ಉಳಿಸಿಕೊಂಡರೆ ನೀವು ಉಪ ಎಂದು ಕೆಲವು ಜಿಲ್ಲಾಧಿಕಾರಿಗಳ ಬಳಿ ಒಂದೂ ಪ್ರಕರಣಗಳೂ ಬಾಕಿ ಇಲ್ಲ. ಉಳಿದ ಜಿಲ್ಲಾಧಿಕಾರಿಗಳ ಬಳಿ ಬೇಕಾಬಿಟ್ಟಿ ಪ್ರಕರಣ ಬಾಕಿಯಿದೆ. ಇದು ಯಾಕೆ? ಜನರಿಗೆ ಡಿಸಿ. ಎಸಿ, ತಹಸೀಲ್ದಾರ್ ಸಿಗದಿದ್ದರೆ ಅವರು ಎಲ್ಲಿಗೆ ಹೋಗಬೇಕು? ಎಂದು ಚಾಟಿ ಬೀಸಿದರು.

ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ

ನೀತಿ ಆಯೋಗದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರು ವವರ ಪ್ರಮಾಣ ಶೇ.5.67 ಮಾತ್ರ ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿ, ಅರ್ಹರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. 

ಮುಡಾ ಅವ್ಯವಹಾರ ನನ್ನ ಗಮನಕ್ಕೆ ಬಂದಿತ್ತು, ನಾನು ಸೈಟು ಪಡೆದಿದ್ದರೆ ರಾಜೀನಾಮೆ: ಎಸ್.ಟಿ. ಸೋಮಶೇಖರ್

ಕುರಿಗಾಹಿಗಳಿಗೆ ಬಂದೂಕು ಪರವಾನಗಿ

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ಜತೆಗೆ ಕಡ್ಡಾಯವಾಗಿ ಬಂದೂಕು ಪರವಾನಗಿ ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೆ ಹೋಗಿಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡ ಬೇಕು. ಕುರಿ ಕಳ್ಳತನ ತಡೆಯಲು ಬಂದೂಕು ಲೈಸೆನ್ಸ್‌ ನೀಡಬೇಕು ಎಂದು ಹೇಳಿದರು.

ಗ್ಯಾರಂಟಿ ಸಮೀಕ್ಷೆಗೆ ಸಿಎಂ ಸೂಚನೆ

ಗ್ಯಾರಂಟಿ ಯೋಜನೆಗಳ ಕುರಿತು- ಜಾಗೃತಿ ಮೂಡಿಸಲು ಫಲಾನುಭವಿಗಳಿಂದ ಪಡೆಯಲು 5 ಕೋಟಿ ಜನರ ಸಮೀಕ್ಷೆ ನಡೆಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು. ರಾಜ್ಯದಲ್ಲಿ 84,52,317 ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ ಎಂದರು.

ಸಿಎಂ ನೀಡಿದ ಸೂಚನೆಗಳು

ಕಾರಿಗಳು ತಳಮಟ್ಟದಲ್ಲೇ ' ಜನರ ಸಮಸ್ಯೆ ಬಗೆಹರಿಸಬೇಕು
ಪರಿಹರಿಸಬೇಕು. ನನ್ನವರೆಗೆ ಬಂದರೆ ನಿಮ್ಮ ಮೇಲೇ ಕ್ರಮ
3 ಭೂಕುಸಿತ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಿ. ಈ ಸಲದ ಮಳೆಯಿಂದ ಹಾನಿಯಾದ ಕಡೆ ತ್ವರಿತ ಪರಿಹಾರ ಒದಗಿಸಿ
ಬಿಪಿಎಲ್ ಕಾರ್ಡ್ ಇದೆ. ಅನರ್ಹ ಕಾರ್ಡ್ ರದ್ದುಪಡಿಸಿ
5 ಗ್ಯಾರಂಟಿ ಯೋಜನೆ ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ತಿಳಿಯಲು 5 ಕೋಟಿ ಫಲಾನುಭವಿಗಳ ಸಮೀಕ್ಷೆ ನಡೆಸಿ
6 ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ, ಗನ್ ಲೈಸನ್ಸ್ ನೀಡಿ. ಕುರಿಗಳ ಟೆಂಟ್ ಇರುವಲ್ಲಿಗೇ ಹೋಗಿ ಲಸಿಕೆ ಹಾಕಿಸಿ

Latest Videos
Follow Us:
Download App:
  • android
  • ios