ಮುಡಾ ಪ್ರಕರಣ: ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಣೆ?
2 ವಾರದ ಹಿಂದೆ ಪ್ರಕರಣದ 3ನೇ ಆರೋಪಿ, ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, 4ನೇ ಆರೋಪಿ ಜಮೀನಿನ ಮಾಲೀಕ ದೇವರಾಜು ವಿಚಾರಣೆ ಮಾಡಲಾಗಿತ್ತು. ಶುಕ್ರವಾರ 2ನೇ ಆರೋಪಿ, ಸಿದ್ದರಾಮಯ್ಯರ ಪತ್ನಿ ಬಿ. ಎಂ.ಪಾರ್ವತಿ ವಿಚಾರಣೆ ನಡೆಸಿದ್ದರು. ಇದೀಗ ಪ್ರಕರಣದಲ್ಲಿ ಸಿಎಂ ಪಾತ್ರದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ಮೈಸೂರು(ಅ.27): ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಈಗಾಗಲೇ ಮೂವರು ಆರೋಪಿಗಳ ವಿಚಾರಣೆ ನಡೆಸಿದ್ದು.ಮೊದಲ ಆರೋಪಿ ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿಯಿದ್ದು, ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ಸಿದ್ಧತೆ ನಡೆ ಸಿದ್ದಾರೆಂದು ತಿಳಿದು ಬಂದಿದೆ.
2 ವಾರದ ಹಿಂದೆ ಪ್ರಕರಣದ 3ನೇ ಆರೋಪಿ, ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, 4ನೇ ಆರೋಪಿ ಜಮೀನಿನ ಮಾಲೀಕ ದೇವರಾಜು ವಿಚಾರಣೆ ಮಾಡಲಾಗಿತ್ತು.
ಬೈಎಲೆಕ್ಷನ್ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ವಿಜಯೇಂದ್ರ
ಶುಕ್ರವಾರ 2ನೇ ಆರೋಪಿ, ಸಿದ್ದರಾಮಯ್ಯರ ಪತ್ನಿ ಬಿ. ಎಂ.ಪಾರ್ವತಿ ವಿಚಾರಣೆ ನಡೆಸಿದ್ದರು. ಇದೀಗ ಪ್ರಕರಣದಲ್ಲಿ ಸಿಎಂ ಪಾತ್ರದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.