ಮುಂದಿನ ವರ್ಷವೇ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ: ಸಿಎಂ ಘೋಷಣೆ

ರಾಜ್ಯದಲ್ಲಿ ಮುಂದಿನ ವರ್ಷ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ ಮಾಡಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬಸವಕಲ್ಯಾಣದಲ್ಲಿ ಘೋಷಿಸಿದ್ದಾರೆ.

CM Siddaramaiah's announcement that establishment of Vachana University next year rav

ಬೀದರ್‌ (ಮಾ.7): ರಾಜ್ಯದಲ್ಲಿ ಮುಂದಿನ ವರ್ಷ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ ಮಾಡಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬಸವಕಲ್ಯಾಣದಲ್ಲಿ ಘೋಷಿಸಿದ್ದಾರೆ.

ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕಾಗಿ 160 ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ ಲಿಂಗಾಯತ ಮಠಾಧೀಶರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣರ ಗುರಿಯಾಗಿತ್ತು. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಇಂದು, ನಾಳೆ ಮಾತ್ರವಲ್ಲ ಯಾವತ್ತೂ ಶಾಶ್ವತ ಎಂದರು.

 

ಬಿಜೆಪಿಗರು 'ಆಪರೇಷನ್‌'ನಲ್ಲಿ ನಿಸ್ಸೀಮರು: ಸಿಎಂ ಸಿದ್ದರಾಮಯ್ಯ

ಜಾತಿ ಪದ್ಧತಿ, ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ಹಾಗೂ ಧಾರ್ಮಿಕ ಢಂಬಾಚಾರದ ವಿರುದ್ಧ ಬಂಡೆದ್ದ ಬಸವಾದಿ ಶರಣರು ಜನರಲ್ಲಿ ಅರಿವುಮೂಡಿಸಲು ಆಯ್ದುಕೊಂಡ ಸಾಧನ "ವಚನ ಸಾಹಿತ್ಯ." ವಚನಗಳಲ್ಲಿ ಬಸವೇಶ್ವರರಾದಿಯಾಗಿ ನೂರಾರು ಶರಣರ ಬದುಕಿನ ಅನುಭವದ ಸಾರವಿದೆ, ಅಂಧಶ್ರದ್ದೆ- ಮೌಢ್ಯದ ವಿರುದ್ಧದ ಆಕ್ರೋಶವಿದೆ, ಜ್ಞಾನದ ಬೆಳಕಿದೆ ಎಂದು ಸಿಎಂ ಹೇಳಿದರು.

 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ: ಮಾಜಿ ಸಚಿವ ಪ್ರಭು ಚವ್ಹಾಣ್‌

ಶರಣರ ವಚನಗಳು ಹಾಳೆಗಳಿಗೆ ಸೀಮಿತವಾಗಬಾರದು, ವಚನಗಳ ಪ್ರತಿ ಅಕ್ಷರ ಜನರ ಎದೆಗೆ ಇಳಿಯಬೇಕು. ಆ ಮೂಲಕ ಬಸವಣ್ಣನವರ ಸಮಸಮಾಜದ ಕನಸು ಸಾಕಾರಗೊಳ್ಳಬೇಕು. ಈ ಉದ್ದೇಶದಿಂದ ಮುಂದಿನ ವರ್ಷ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios