Asianet Suvarna News Asianet Suvarna News

'ಪ್ರಜ್ವಲ್ ಪರಾರಿಯಾಗುವ ಮುನ್ನ ನನ್ನ ಜೊತೆ ಮಾತಾಡಿಲ್ಲ' : ಆರ್‌ ಅಶೋಕ್ ಆರೋಪಕ್ಕೆ ಸಿಎಂ ಸ್ಪಷ್ಟನೆ

‘ನಮ್ಮ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡಿದೆ ಎಂಬುದು ಶುದ್ಧ ಸುಳ್ಳು. ನನ್ನ ಹಿಂದಿನ ಆಡಳಿತದಲ್ಲಾಗಲಿ, ಈಗಿನ ಆಡಳಿದಲ್ಲಾಗಲಿ ನಾನು ಎಂದಿಗೂ ಅಂತಹ ಕೆಲಸ ಮಾಡಿಲ್ಲ ಮಾಡುವುದೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

CM Siddaramaiah reacts about phone tapping issue at bengaluru rav
Author
First Published May 24, 2024, 7:47 AM IST

ಬೆಂಗಳೂರು (ಮೇ.24) ‘ನಮ್ಮ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡಿದೆ ಎಂಬುದು ಶುದ್ಧ ಸುಳ್ಳು. ನನ್ನ ಹಿಂದಿನ ಆಡಳಿತದಲ್ಲಾಗಲಿ, ಈಗಿನ ಆಡಳಿದಲ್ಲಾಗಲಿ ನಾನು ಎಂದಿಗೂ ಅಂತಹ ಕೆಲಸ ಮಾಡಿಲ್ಲ ಮಾಡುವುದೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಹಿಂದಿನ ಆಡಳಿತದಲ್ಲಾಗಲಿ, ಈಗಿನ ಆಡಳಿತದಲ್ಲಾಗಲಿ ನಾವು ದೂರವಾಣಿ ಕದ್ದಾಲಿಕೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರು.

ರೈತರ ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಲು ಸಿಎಂ ಸಿದ್ದರಾಮಯ್ಯ ಸೂಚನೆ

ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗುವ ಮೊದಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ ಎಂಬ ಆರ್.ಅಶೋಕ್‌ ಆರೋಪಕ್ಕೆ, ‘ಆರ್‌.ಅಶೋಕ್‌ ಜತೆ ಬಹುಶಃ ಪ್ರಜ್ವಲ್‌ ರೇವಣ್ಣ ಮಾತನಾಡಿರಬಹುದು. ಕೇಂದ್ರ ಸರ್ಕಾರದ ಜತೆ ಅವರು ಭಾಗಿದಾರರು (ಪಾರ್ಟ್ನರ್) ಅಲ್ಲವೇ? ಹೀಗಾಗಿ ರೇವಣ್ಣ ಅಶೋಕ್‌ ಜತೆ ಮಾತನಾಡಿರಬಹುದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios