ಮಹರ್ಷಿ ವಾಲ್ಮೀಕಿ ಜಯಂತಿಯಂದೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ಇಂದು ಸರ್ಕಾರದ ವತಿಯಿಂದ 2023ನೇ ಸಾಲಿನ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಜಯಂತಿಯ ಶುಭಾಶಯ ತಿಳಿಸಿದರು.

CM Siddaramaiah outraged against bjp in valmiki jayanti pogram at bengaluru rav

ಬೆಂಗಳೂರು (ಅ.28): ಇಂದು ಸರ್ಕಾರದ ವತಿಯಿಂದ 2023ನೇ ಸಾಲಿನ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಜಯಂತಿಯ ಶುಭಾಶಯ ತಿಳಿಸಿದರು.

ಇಂದು ಬೆಂಗಳೂರಿನ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ 8 ಜನ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ. ಎಲ್ಲರೂ ಕೂಡ ಅವರಂತೆ ಜೀವನದಲ್ಲಿ ಸಾಧನೆ ಪ್ರಯತ್ನ ಮಾಡಲಿ. ಅವರ ಜೀವನ ಎಲ್ಲರಿಗೂ ದಾರಿದೀಪವಾಗಲಿ ಎಂದು ಆಶಿಸುತ್ತೇನೆ ಎಂದರು.

ಇಂದು ಮಹರ್ಷಿ ವಾಲ್ಮೀಕಿ ಜಯಂತಿ: ಎಂದೂ ಬಾಡದ ದೇವಕುಸುಮ ವಾಲ್ಮೀಕಿ ಋಷಿ

ಇವತ್ತು ಬಹಳ ವರ್ಷಗಳಿಂದ ಬೇಡಿಕೆ ಇದ್ದ ಪರಿಶಿಷ್ಟ ವರ್ಗಗಳ ಇಲಾಖೆಗಳಿಗೆ ಪ್ರತ್ಯೇಕ ಸಚಿವಾಲ ಮಾಡಿದ್ದೇವೆ.ಈ ಸಚಿವಾಲಯದಿಂದ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇನ್ನೂ ಹೆಚ್ಚು ಆಗುತ್ತದೆ. ಇಲ್ಲಿವರಿಗೂ ಅವರಿಗೆ ಪ್ರತ್ಯೇಕ ಸಚಿವಾಲಯ ಇರಲಿಲ್ಲ. SCP - TSPಯಲ್ಲಿ ಹೆಚ್ಚು ಹಣ ಬಿಡುಗಡೆ ಮಾಡಿದ್ದು ನಾವು. ಈ ಹಿಂದೆ ಅಧಿಕಾರ ಬಿಡುವಾಗ 30 ಸಾವಿರ ಕೋಟಿ ಮಾಡಿದ್ದೆ. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹೆಚ್ಚು ಮಾಡಲೇ ಇಲ್ಲ. ಇದೀಗ ನಮ್ಮ ಸರ್ಕಾರ ಬಂದ ಮೇಲೆ 34 ಸಾವಿರ ಕೋಟಿ ಅನುದಾನ ಇಟ್ಟಿದ್ದೇವೆ ಎಂದು ಬಿಜೆಪಿ ಸರ್ಕಾರದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇನ್ನು ಬಿಜೆಪಿ ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದರ ಬಗ್ಗೆ ನನಗೆ ಗೊತ್ತಿಲ್ಲ. ರವಿ ಜೊತೆ ನಾನು ಮಾತನಾಡಿಲ್ಲ. ಅವರು ಆರೋಪ ಮಾಡಿದ್ದಾರೆ.. ಬಿಜೆಪಿಯವರು ಸರ್ಕಾರ ಅಸ್ತಿರಗೊಳಿಸಲು ಪ್ರಯತ್ನ ಮಾಡ್ತಿದ್ದಾರೆ ಅಂತ ಮಾಹಿತಿ ಇತ್ತು ಅದರೆ ಅವರಿಗೆ ಸಾಧ್ಯವಿಲ್ಲ. ಯಾವುದೇ ಶಾಸಕರು ಸಹ ಆಪರೇಷನ್  ಬಲಿಯಾಗೋದಿಲ್ಲ ಎಂದರು.ಇದೇ ವೇಳೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಎಂಬ ಶಾಸಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ ಸಿಎಂ ಯಾವುದೇ ಶಾಸಕರು ಸಹ ಆಪರೇಷನ್  ಬಲಿಯಾಗೋದಿಲ್ಲ ಎಂದ ಸಿಎಂ.

ವಾಲ್ಮೀಕಿ ಪೀಠದ ಶ್ರೀಗೆ ಮದುವೆ ಆಗಿದೆ, ಮಕ್ಕಳಿದ್ದಾರೆಂಬ ಭಕ್ತರ ಆರೋಪಕ್ಕೆ ಸಚಿವ ಜಾರಕಿಹೊಳಿ ಸ್ಫೋಟಕ ಹೇಳಿಕೆ

Latest Videos
Follow Us:
Download App:
  • android
  • ios