ನೂತನ ಬ್ಯಾರಿ ಸೌಹಾರ್ದ ಕಟ್ಟಡ ಉದ್ಘಾಟಿಸಿದ ಸಿಎಂ; ಹೆಚ್ಚಿನ ಸಚಿವ ಸ್ಥಾನಕ್ಕೆ ಮುಸ್ಲಿಂ ಸಮುದಾಯ ಆಗ್ರಹ
ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿ ನಿರ್ಮಿಸಲಾಗಿರುವ ನೂತನ ಬ್ಯಾರಿ ಸೌಹಾರ್ದ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ನಿರ್ಮಾಣವಾಗಿರುವ ಕಟ್ಟಡ.

ಬೆಂಗಳೂರು (ಸೆ.30): ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿ ನಿರ್ಮಿಸಲಾಗಿರುವ ನೂತನ ಬ್ಯಾರಿ ಸೌಹಾರ್ದ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ನಿರ್ಮಾಣವಾಗಿರುವ ಕಟ್ಟಡ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವರಾದ ಕೆಜೆ ಜಾರ್ಜ್, ದಿನೇಶ್ ಗುಂಡೂರಾವ್, ಸ್ಫೀಕರ್ ಯುಟಿ ಖಾದರ್, ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ನಜೀರ್ ಅಹ್ಮದ್ ಉಪಸ್ಥಿತರಿದ್ದರು.
ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಜ್ಞರು, ನಿವೃತ್ತ ಜಡ್ಜ್‌ಗಳ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕಾರ್ಯಕ್ರಮಕ್ಕೆ ತಡವಾಗಿ ಬಂದ ಡಿಸಿಎಂ:
ಬ್ಯಾರಿ ಸೌಹಾರ್ದ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಿದ ಅತಿಥಿಗಳೆಲ್ಲರೂ ಕಾರ್ಯಕ್ರಮ ಶುರುವಾಗುವ ಮೊದಲೇ ಹಾಜರಿದ್ದರು. ಆದರೆ ಡಿಸಿಎಂ ಡಿಕೆ ಶಿವಕುಮಾರ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಘಟನೆ ನಡೆಯಿತು. ಡಿಕೆ ಶಿವಕುಮಾರ ಬಂದ ವೇಳೆ ಸಿಎಂ ಪಕ್ಕದ ಡಿಕೆ ಶಿವಕುಮಾರ ಅವರಿಗೆ ಆಸನ ಬಿಟ್ಟುಕೊಟ್ಟ ಸಚಿವ ಕೆಜೆ ಜಾರ್ಜ್. ಜಾಗ ಬಿಟ್ಟುಕೊಟ್ಟು ಸಚಿವ ದಿನೇಶ್ ಗುಂಡೂರಾವ್ ಪಕ್ಕದಲ್ಲಿ ಕುಳಿತರು. ಈ ವೇಳೆ ಡಿಕೆ ಶಿವಕುಮಾರಗೆ ವೇದಿಕೆಯಲ್ಲಿದ್ದ ಅತಿಥಿಗಳೆಲ್ಲರೂ ಕೈಕುಲುಕಿ ನಮಸ್ಕರಿಸಿದ್ರು. ಆದರೆ ಸಿಎಂ ಮಾತ್ರ ಡಿಕೆಶಿಯತ್ತ ನೋಡದೇ ಕಾರ್ಯಕ್ರಮದ ಪ್ರತಿ ನೋಡುತ್ತಿದ್ದುದ್ದು ಸಿಎಂ-ಡಿಸಿಎಂ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದು ಎದ್ದು ಕಾಣುತ್ತಿತ್ತು.
ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಸಚಿವ ಸ್ಥಾನಕ್ಕೆ ಆಗ್ರಹ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮುಸ್ಲಿಂ ಸಮುದಾಯದ ಪಾತ್ರ ದೊಡ್ಡದಿದೆ. ಅದನ್ನ ನೀವು ಒಪ್ಪಿದ್ದೀರಿ, ನಿಮ್ಮ ಹೈಕಮಾಂಡ್ ಕೂಡ ಒಪ್ಪಿದೆ. ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನ ಸಿಕ್ಕಿದೆ. ಪ್ರತಿಬಾರಿ 4-5 ಮಂತ್ರಿ ಸ್ಥಾನಗಳು ಮುಸ್ಲಿಂ ಸಮುದಾಯಕ್ಕೆ ಸಿಗುತ್ತಿತ್ತು. ಆದರೆ ಈ ಬಾರಿ ಕೇವಲ ಎರಡು ಸ್ಥಾನ ಸಿಕ್ಕಿದೆ. ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಬ್ಯಾರಿ ವೆಲೆಫೆರ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಸಿಎಂ ಮತ್ತು ಡಿಸಿಎಂ ಎದರು ವೇದಿಕೆಯಲ್ಲಿ ಮನವಿ ಮಾಡಿದರು.
ಅಲ್ಲಾನ ಕೃಪೆಯಿಂದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ : ಗೃಹ ಸಚಿವ ಡಾ. ಜಿ.ಪರಮೇಶ್ವರ್
ಯುಟಿ ಖಾದರ್‌ಗೆ ಸಚಿವ ಸ್ಥಾನ ನೀಡಿ:
ಯುಟಿ ಖಾದರ್ ಅವರು ಯಾವಾಗಲೂ ಕ್ಯಾಪ್ಟನ್ ಆಗಿ ಇದ್ರು, ಆದರೆ ಈ ಬಾರಿ ಅವರು ರೆಫ್ರಿ ಆಗಿಬಿಟ್ಟಿದ್ದಾರೆ. ನೀವು ಏನು ಹೇಳಿದರೂ ಕೇಳ್ತಾರೆ. ನಿಮ್ಮ ಮಾತು ಮೀರಲ್ಲ. ಅವರು ಸೌಮ್ಯ ಸ್ವಭಾವದ ವ್ಯಕ್ತಿ ಹೀಗಾಗಿ ಅವರಿಗೆ ಸಭಾಪತಿ ಸ್ಥಾನ ಕೊಟ್ಟಿದ್ದೀರಾ? ಮುಂದೆ ಅವಕಾಶ ಸಿಕ್ಕರೆ ಯುಟಿ ಖಾದರ್ ರನ್ನ ಮಂತ್ರಿ ಮಾಡುವಂತೆ ಬ್ಯಾರಿ ಅಸೋಸಿಯೇಷನ್ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಗೆ ಮನವಿ ಮಾಡಿತು.