Asianet Suvarna News Asianet Suvarna News

Congress Guarantees: ಮೊದಲ ಹಂತದಲ್ಲಿ 3 ಗ್ಯಾರಂಟಿ ಮಾತ್ರ ಜಾರಿ, ಕಂಡೀಷನ್ ಬಗ್ಗೆ ಡಿಕೆಶಿ ಸ್ಪಷ್ಟನೆ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 5 ಯೋಜನೆಗಳಲ್ಲಿ ಮೂರು ಗ್ಯಾರಂಟಿ ಮಾತ್ರ ಮೊದಲ ಹಂತದಲ್ಲಿ ಜಾರಿ ಮಾಡಲು ತೀರ್ಮಾನಿಸಲಾಗಿದೆ.

CM Siddaramaiah government implement three guarantees among five in Karnataka Kannada news gow
Author
First Published May 31, 2023, 3:26 PM IST

ಬೆಂಗಳೂರು (ಮೇ.31):  ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 5 ಯೋಜನೆಗಳಲ್ಲಿ ಮೂರು ಗ್ಯಾರಂಟಿ ಮಾತ್ರ ಮೊದಲ ಹಂತದಲ್ಲಿ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಉಚಿತ ಬಸ್ ಪ್ರಯಾಣ ಮಾತ್ರ ಮೊದಲ ಹಂತದಲ್ಲಿ ಜಾರಿಯಾಗುತ್ತಿದ್ದು,  ಯುವನಿಧಿ ಮತ್ತು ಗೃಹ ಲಕ್ಷ್ಮೀ ಗ್ಯಾರಂಟಿ ಎರಡನೇ ಹಂತದಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಗ್ಯಾರಂಟಿ ಕೊಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಸಚಿವರು ಅಧಿಕಾರಿಗಳ‌ ಜೊತೆಗೆ ಸಿಎಂ ಚರ್ಚೆ ಮಾಡಿದ್ದಾರೆ. ಹಣಕಾಸಿನ ಲಭ್ಯತೆ ಮತ್ತು ವೆಚ್ಚ ಕುರಿತು ಚರ್ಚೆ ಆಗಿದೆ. ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಲಿದೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡ್ತೇವೆ . ನಾವು ಗ್ಯಾರಂಟಿ ಜಾರಿಗೆ ಬದ್ಧವಾಗಿದ್ದೇವೆ . ಕ್ರಮಬದ್ಧವಾಗಿ ಮಾಡಬೇಕು ಅನ್ನೋದು ಗೊತ್ತಿದೆ . 

ಕಂಡೀಷನ್ ಇರುತ್ತಾ ಅನ್ನೋ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಕೆಶಿವಕುಮಾರ್, ಯಾರಿಗೆ ಬಸ್? ಎಲ್ಲಿಂದ? ಎಲ್ಲಾ ಲೆಕ್ಕಾಚಾರ ಬೇಕು. ಭತ್ಯೆ ಕೊಡುವ ಬಗ್ಗೆ ಸಹ ಲೆಕ್ಕಾಚಾರ ಹಾಕಬೇಕು ಎಂದಿದ್ದಾರೆ.

ಇದಕ್ಕೂ ಮುನ್ನ ಸಿಎಂ ನೇತೃತ್ವದಲ್ಲಿ  ಪ್ರಮುಖ 5 ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಸರ್ಕಾರದ ಎಲ್ಲಾ ಸಚಿವರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ  ಗ್ಯಾರಂಟಿ ಯೋಜನೆ ಜಾರಿ ಮಾಡುವ ಪರಮಾಧಿಕಾರವನ್ನು ಸಚಿವರು ಸಿಎಂಗೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‌ಗ್ಯಾರಂಟಿ ಜಾರಿ ಆಗಬೇಕು ಎಂದು ಈ ವೇಳೆ ಸಚಿವರು ಹೇಳಿದ್ದಾರೆ. ಇಲಾಖಾವಾರು ಅನುದಾನದ ಖೋತಾವಾದರೂ ಗ್ಯಾರಂಟಿ ಜಾರಿಗೆ ಸಚಿವರು ಮನವಿ ಮಾಡಿದ್ದಾರೆ. ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಕಾಲಾವಕಾಶ ಪಡೆದುಕೊಂಡು ಗ್ಯಾರಂಟಿ ಜಾರಿ ಮಾಡಿ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಸಚಿವರ ಸಭೆಯಲ್ಲಿ ಹಣಕಾಸು ಇಲಾಖೆಯ ವಿರೋಧ ವ್ಯಕ್ತಪಡಿಸಿದ್ದು, ಗ್ಯಾರಂಟಿ ಜಾರಿ‌ ಸದ್ಯಕ್ಕೆ ಕಷ್ಟ ಅಂತ ಅಭಿಪ್ರಾಯ ಪಟ್ಟಿದ್ದಾರೆ.  ಬಜೆಟ್ allocation ಇಲ್ಲ ಎಂದು ಹಣಕಾಸು ಇಲಾಖೆ ಹೇಳಿದೆ. ಆದರೆ ಗ್ಯಾರಂಟಿ ಜಾರಿ ಮಾಡಲು ಸಚಿವರು ಪಟ್ಟು ಹಿಡಿದಿದ್ದು, ಒಂದು ದಿನ ಕಾಲಾವಕಾಶ  ಹಣಕಾಸು ಇಲಾಖೆ ಅಧಿಕಾರಿಗಳು ಕೇಳಿದ್ದಾರೆ. ಹೀಗಾಗಿ ಶುಕ್ರವಾರ ಸಚಿವ ಸಂಪುಟ ಸಭೆ ನಿಗದಿಯಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ಪಡೆದುಕೊಂಡಿರುವ ಸಾಲದ ಮರುಪಾವತಿ ಅವಧಿ ವಿಸ್ತರಣೆ ಮಾಡಿಕೊಳ್ಳುವಂತೆಯೂ ಕೆಲ ಸಚಿವರು ಸಲಹೆ ಕೊಟ್ಟಿದ್ದಾರೆ. ಗ್ಯಾರಂಟಿ ಜಾರಿಗಾಗಿ ಯಾವುದೇ ಹಂತದ ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೂಡ ಮುಖ್ಯಮಂತ್ರಿ ಅವರೇ ತೆಗೆದುಕೊಳ್ಳಬೇಕೆಂದು  ಸಚಿವರು ಹೇಳಿದ್ದಾರೆ.

ಯಾವ ಗಾಸಿಪ್ ಕೂಡ ಹಾಕಬೇಡಿ. ಹಾಗಂತೆ ಹೀಗಂತೆ ಅಂತ ಯಾರೂ ಹೇಳೋದಕ್ಕೆ ಹೋಗಬೇಡಿ. ತೀರ್ಮಾನ ಮಾಡುವುದು ಸರ್ಕಾರ. ನಿಮಗೆ ಅನಿಸಿದ್ದನ್ನೆಲ್ಲ ಹೇಳೋಕಾಗಲ್ಲ. ಹೌ ಟು ಡು, ವಾಟ್ ಟು ಡು ಅಂತ ಸರ್ಕಾರ ನಾವು ಯೋಚನೆ ಮಾಡ್ತೇವೆ. ನೀವು ಬಹಳ ಸ್ಪೀಡ್ ನಲ್ಲಿದ್ದೀರಿ ನಾವು ನಿಮ್ಮಷ್ಟು ಸ್ಪೀಡ್ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ವಿಪಕ್ಷಗಳು ಏನದ್ರು ಹೇಳಲಿ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವಕಾಶ ಇದೆ. ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ. ನಮ್ಮ ಭರವಸೆ ಕ್ರಮಬದ್ಧವಾಗಿ ಆಗಬೇಕು. ಆ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡಲು ಹೊರಟ್ಟಿದ್ದೇವೆ. ಬಸ್ ಅಂದಾಗ ಯಾರು ಹೋಗಬೇಕು. ಕರ್ನಾಟಕ ಮಾತ್ರವಾ, ಹೊರ ರಾಜ್ಯಕ್ಕೂ ಅವಕಾಶ ಕೊಡಬೇಕು?

ಸಿ.ಟಿ.ರವಿ ನೀರಿನಿಂದ ಹೊರತೆಗೆದ ಮೀನು : ಎಚ್‌ಡಿ ತಮ್ಮಯ್ಯ

ಯಾರಿಗೆ ಕೆಲಸ ಸಿಕ್ಕಿದೆ, ಯಾರಿಗೆ ಸಿಕ್ಕಿಲ್ಲ. ಈ ಎಲ್ಲ ಲೆಕ್ಕಾಚಾರ ಇದೆ. ಆರ್ಥಿಕ ಇಲಾಖೆ ಕೂಡ ಸಲಹೆ ಕೊಟ್ಟಿದೆ. ನಾಲ್ಕೈದು ಆಫ್ಸನ್ ನಮಗೆ ಕೊಟ್ಟಿದ್ದಾರೆ. ಇದರ ಬಗ್ಗೆ ನಾವೆಲ್ಲ ಕೂತು ಚರ್ಚೆ ಮಾಡಬೇಕಲ್ಲ. ಅದಕ್ಕೆ ಸಮಯ ಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಬೆಳಗಾವಿ: ಬುಡಾ ಅವ್ಯವಹಾರ ಪ್ರಕರಣ ಸಿಐಡಿ ತನಿಖೆಗೆ, ಸಚಿವ ಸತೀಶ ಜಾರಕಿಹೊಳಿ

ಗ್ಯಾರಂಟಿ ಜಾರಿ ವಿಚಾರಕ್ಕೆ ಸಚಿವರ ಉಡಾಫೆ ಹೇಳಿಕೆಗೆ ಉತ್ತರಿಸಿದ ಅವರು ಗೊಂದಲಮಯ ಹೇಳಿಕೆ ನೀಡದಂತೆ ಮತ್ತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಅನಗತ್ಯ ಹೇಳಿಕೆಗಳಿಂದ ಗೊಂದಲ ಮೂಡುತ್ತಿದೆ. ಯಾವ ಸಚಿವರೂ ಕೂಡ ಅನಗತ್ಯವಾಗಿ ಮಾತನಾಡಬೇಡಿ ಎಂದು ಸಭೆಯಲ್ಲಿ  ಸಿಎಂ, ಡಿಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

Follow Us:
Download App:
  • android
  • ios