ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಜಾಮೀನು ಮಂಜೂರು
ಬಿಜೆಪಿ ವಿರುದ್ಧ ಶೇ.40 ಪರ್ಸೆಂಟ್ ಆರೋಪ ಮಾಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿಕುಮಾರ್ ವಿರುದ್ಧ ದಾಖಲಾಗಿದ್ದ ಕೇಸ್‌ನಲ್ಲಿ ಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ.
ಬೆಂಗಳೂರು ( ಜೂ.1): ಬಿಜೆಪಿ ವಿರುದ್ಧದ 40% ಕಮಿಷನ್ ಆರೋಪ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ. ಭ್ರಷ್ಟಾಚಾರ ಆರೋಪದ ಮೇಲೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯವು ನಾಯಕರಿಗೆ ಸಮನ್ಸ್ ನೀಡಿತ್ತು. ಆದರೆ, ಈಗ ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಮತ್ತು ಶೇ.40 ಕಮಿಷನ್ ಆರೋಪದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಮತ್ತು ವಕೀಲ ವಿನೋದ್ ಕುಮಾರ್ ಅವರು ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು, ಇಬ್ಬರಿಗೂ ಜಾಮೀನು ಮಂಜೂರು ಮಾಡಲಾಗಿದೆ.
ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಗೊತ್ತಾ..?
ಬಿಜೆಪಿ ವಿರುದ್ಧ ಭ್ರಷ್ಟಾಚಾರದ ರೇಟ್ ಕಾರ್ಡ್ ಜಾಹೀರಾತು ನೀಡಿದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಸಿಎಂ ಡಿಕೆ. ಶಿವಕುಮಾರ್ ಶನಿವಾರ ಬೆಳಗ್ಗೆ 10:30ಕ್ಕೆ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ವಾದ ಆಲಿಸಿದ ನ್ಯಾಯಾಧೀಶರು ಸಿಎಂ ಮತ್ತು ಡಿಸಿಎಂಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ಇಬ್ಬರು ತಲಾ 50 ಸಾವಿರ ರೂ.ಬಾಂಡ್ ಹಾಗೂ ತಲಾ 5 ನಗದು ಕ್ಯಾಶ್ ಶ್ಯೂರಿಟಿ ಇಟ್ಟು ಜಾಮೀನು ಪಡೆದುಕೊಂಡರು. ಕೆಪಿಸಿಸಿ, ಡಿಸಿಎಂ, ಸಿಎಂ ಮೂವರು ಆರೋಪಿಗಳ ಬಾಂಡ್ ಹಾಗೂ ಶ್ಯೂರಿಟಿ ಪ್ರಕ್ರಿಯೆ ಮಾಡಲಾಗಿದೆ. ಸಿಎಂ, ಡಿಸಿಎಂ ಗೆ ಜಾಮೀನು ಮಂಜೂರು ಪಡೆದು ಬಾಂಡ್‌ಗೆ ಸಹಿ ಮಾಡಿ ಕೋರ್ಟ್ ನಿಂದ ಹೊರಗೆ ಬಂದರು.
ಸರ್ಕಾರಿ ಶಾಲೆಗೆ ಬಂದ ವಿದ್ಯಾರ್ಥಿಗೆ ಪಾದಪೂಜೆ ಮಾಡಿದ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಜಾಹೀರಾತು ಕೊಟ್ಟಿದ್ದೆವು. ಅದರಲ್ಲಿ ಒಂದೊಂದು ಪೋಸ್ಟ್ ಗೆ ಇಷ್ಟು ಹಣ ಕೊಡಬೇಕು ಅಂತ ಹಾಕಿದ್ದೆವು. ಅದು ಮಾನನಷ್ಟ ಕೇಸ್ ಅಡಿ ಬರೋದಿಲ್ಲ. ಆದರು ಬಿಜೆಪಿ ಅವರು ಮಾನನಷ್ಟ ಕೇಸ್ ಅಂತ ಕೇಸ್ ಹಾಕಿದ್ದಾರೆ. ನಾವು ಯಾರನ್ನು ವಯಕ್ತಿಕವಾಗಿ ತೇಜೋವಧೆ ಮಾಡಿಲ್ಲ. ಇದೊಂದು ಬಿಜೆಪಿ ಅವರು ಹಾಕಿರೋ ಖಾಸಗಿ ದೂರು. ಆದರು ನಾವು ಕೋರ್ಟ್ ಆದೇಶಕ್ಕೆ ಬೆಲೆ ಕೊಟ್ಟಿದ್ದೇವೆ. ಮೊದಲ ವಿಚಾರಣೆ ಸಮಯ ಕೇಳಿದ್ದೆವು, ಈಗ ಕೇಳೋದು ಬೇಡ ಅಂತ ಈಗ ನಾವೇ ಬಂದಿದ್ದೇವೆ. ದು ಬೇಲ್ ಕೊಡುವ ಅಪರಾಧವಾಗಿದೆ. ನಾವು ಪರ್ಮನೆಂಟ್ ಎಕ್ಸೆಂಷನ್ ಗೆ ಅರ್ಜಿ ಹಾಕಿದ್ದೇವೆ. ಇದು ಸಿಂಪಲ್ ಅಫೇನ್ಸ್. ನಾವು ಹಾಜರಾಗಿದ್ದೇವೆ. ನನ್ನ ಮೇಲೆ, ಡಿಕೆಶಿ, ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದ್ದಾರೆ. ರಾಹುಲ್ ಗಾಂಧಿ ಅವರು ವಿನಾಯ್ತಿ ಕೇಳಿದ್ದಾರೆ. ಇನ್ನೊಂದು ದಿನ ಹಾಜರಾಗ್ತಾರೆ ಎಂದು ಮಾಹಿತಿ ನೀಡಿದರು.