ನಾಡಗೀತೆಗೆ ಎದ್ದು ನಿಲ್ಲುವುದಕ್ಕೆ ತಡ ಮಾಡಿದ ಸಿಎಂ!
ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವ ವೇಳೆ ಸಿಎಂ ಸಿದ್ದರಾಮಯ್ಯ ಎದ್ದು ನಿಲ್ಲುವುದಕ್ಕೆ ತಡ ಮಾಡಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.
ಮೈಸೂರು (ನ.17): ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವ ವೇಳೆ ಸಿಎಂ ಸಿದ್ದರಾಮಯ್ಯ ಎದ್ದು ನಿಲ್ಲುವುದಕ್ಕೆ ತಡ ಮಾಡಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.
ಕಡೇಮಾಲಮ್ಮ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದಿರುವ ಘಟನೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದಲ್ಲಿರುವ ದೇವಸ್ಥಾನ. ನಾಡಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ವೇದಿಕೆ ಮೇಲೆ ಆಸೀನರಾಗಿದ್ದ ಸಿದ್ದರಾಮಯ್ಯ ಮಗ ಯತೀಂದ್ರ ಸಿದ್ದರಾಮಯ್ಯರ ಪೋನ್ ಹಿಡಿದು ಏನೋ ಪರಿಶೀಲನೆ ನಡೆಸುತ್ತಿದ್ದರು. ಸುಮಾರು ಹೊತ್ತು ಪೋನ್ ನೋಡಿಕೊಂಡು ಕುಳಿತಿದ್ದ ಸಿದ್ದರಾಮಯ್ಯ.
ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ: ಸಿಎಂ ಸಿದ್ದರಾಮಯ್ಯ
ಈ ವೇಳೆ ನಾಡಗೀತೆ ಹಾಡುವಾಗ ಎಲ್ಲರೂ ಎದ್ದು ನಿಲ್ಲಬೇಕು ಎಂದರೂ ನಿಂತುಕೊಳ್ಳದ ಸಿಎಂ ಸಿದ್ದರಾಮಯ್ಯ. ಪಕ್ಕದಲ್ಲಿದ್ದ ಶಾಸಕ ದರ್ಶನ್, ದ್ರುವನಾರಾಯಣ್ ಆಯೋಜಕರಿಗೆ ಕಾಯುವಂತೆ ಕೈ ಸನ್ನೆ ಮಾಡಿದರು.ಕೊನೆಗೆ ಯತೀಂದ್ರ ಪೋನ್ ವಾಪಸ್ ಪಡೆದ ನಂತರ ನಾಡಗೀತೆಗೆಗಾಗಿ ಎದ್ದು ನಿಂತ ಸಿಎಂ ಸಿದ್ದರಾಮಯ್ಯ. ಈ ಘಟನೆ ವಿಡಿಯೋ ದಾಖಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸಿದ್ದಾರೆ.
ಸಿಎಂ ನೋಡಲು ನೂಕುನುಗ್ಗಲು:
ನಂಜನಗೂಡು:ನಂಜನಗೂಡಿನ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾಲಯದ ಕಟ್ಟಡದ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯರನ್ನು ನೋಡಲು ಮುಗಿಬಿದ್ದ ಜನರು. ಈ ವೇಳೆ ತಳ್ಳಾಟ ನೂಕಾಟ ನೆಡಯಿತು.
ಗೃಹಲಕ್ಷ್ಮೀ ಯೋಜನೆ: ನಾಡದೇವತೆ ಚಾಮುಂಡೇಶ್ವರಿಗೂ ಪ್ರತಿತಿಂಗಳ ₹2000 ನೀಡಲು ಸರ್ಕಾರ ಅಸ್ತು