ಕಾಲು ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗುವಂತೆ ರಾಜನಾಥ್ ಸಿಂಗ್ ಹಾರೈಸಿದರು. ಹೀಗೆ ಹಾರೈಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದರು.

ಬೆಂಗಳೂರು(ಫೆ.12): ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆದರೆ, ಮಂಗಳವಾರ ಇನ್ವೆಸ್ಟ್ ಕರ್ನಾಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಾಲಿ ಖುರ್ಚಿಯಲ್ಲಿ ಆಗಮಸಿದ್ದರು. ನಡೆಯಲು ಕಷ್ಟಪಡುತ್ತಿರುವ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮ ನಡೆಯುವ ಜಾಗಕ್ಕೆ ಮತ್ತು ವೇದಿಕೆಗೆ ಗಾಲಿ ಖುರ್ಚಿ ಮೂಲಕವೇ ಸಹಾಯಕರು ಕರೆತಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಲು ನೋವು ಗುಣಮುಖ ಆಗಲಿ ಎನ್ನುತ್ತಲೇ ಸಿಎಂ ಕಾಲೆಳೆದ ರಾಜನಾಥ್!

ಕರ್ನಾಟಕದಲ್ಲಿ ಹೂಡಿಕೆ ದೇಶಕ್ಕೆ ಲಾಭ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕಾಲು ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗುವಂತೆ ರಾಜನಾಥ್ ಸಿಂಗ್ ಹಾರೈಸಿದರು. 

ಹೀಗೆ ಹಾರೈಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದರು. ರಾಜಕಾರಣಿ ಗಳಿಗೆ ಕಾಲು ಬಹಳ ಮುಖ್ಯ. ಯಾವಾಗ ಅವರ ಕಾಲನ್ನು ಯಾರು ಎಳೆಯುತ್ತಾರೋ ಗೊತ್ತಾಗುವುದಿಲ್ಲ. ಅಂಥದ್ದರಲ್ಲಿ ಸಿದ್ದರಾಮಯ್ಯ ಅವರು ಕಾಲು ನೋವು ಮಾಡಿಕೊಂಡಿದು, ಅವರು ಬೇಗ ಗುಣಮುಖರಾಗಲಿ ಎಂದು ಹೇಳಿದರು.