Asianet Suvarna News Asianet Suvarna News

ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌, ವಿದ್ಯುತ್‌ ಸಮಸ್ಯೆ ಅಧಿಕೃತವಾಗಿ ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ!

ರಾಜ್ಯದಲ್ಲಿ 2,000 ದಿಂದ 3,000 ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಲೋಡ್‌ಶೆಡ್ಡಿಂಗ್‌ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

CM Siddaramaiah acknowledged the electricity problem and load shedding in Karnataka sat
Author
First Published Oct 16, 2023, 12:50 PM IST

ಬೆಂಗಳೂರು (ಅ.16): ರಾಜ್ಯದಲ್ಲಿ 2,000 ದಿಂದ 3,000 ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ. ಬಿಜೆಪಿ ಸರ್ಕಾರದಲ್ಲಿ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನಯೇ ನಡೆಯಲಿಲ್ಲ. ಹೀಗಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಂಯ್ಯ ಹೇಳುವ ಮೂಲಕ ವಿದ್ಯುತ್ ಕೊರತೆ ಹಾಗೂ ಲೋಡ್ ಶೆಡ್ಡಿಂಗ್ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲಿ ವಿದ್ಯುತ್‌ ಕೊರತೆಯಾಗಿದೆ. ಈಗ 2 ಸಾವಿರದಿಂದ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರದಲ್ಲಿ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನಯೇ ನಡೆಯಲಿಲ್ಲ. ಹೀಗಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಹೊರಗಡೆ ವಿದ್ಯುತ್ ಖರೀದಿ ಮಾಡಲು ಕೂಡ ನಾನು ಸೂಚನೆ ಕೊಟ್ಟಿದ್ದೇನೆ. ಸಕ್ಕರೆ ಕಾರ್ಖಾನೆಯಿಂದ ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Breaking : ಕೆಎಸ್‌ಆರ್‌ಟಿಸಿ ಬಸ್‌ ಟಾಟಾ ಸುಮೋ ಡಿಕ್ಕಿ, ಐವರ ದುರ್ಮರಣ: ಮಠಕ್ಕೆ ಹೊರಟವರು ಮಸಣ ಸೇರಿದರು!

ಕಾಂಗ್ರೆಸ್ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿ, ನಮಗೆ ಈವರೆಗೂ ಹೈಕಮಾಂಡ್ ನಯಾ ಪೈಸೆ ಹಣವನ್ನ ಕೇಳಿಲ್ಲ. ಬಿಜೆಪಿ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಅವೆಲ್ಲಾವೂ ನಿರಾಧಾರ. ಗುತ್ತಿಗೆದಾರನನ್ನ ಬಿಜೆಪಿ, ಕಾಂಗ್ರೆಸ್ ಗುತ್ತಿಗೆದಾರ ಅಂಥ ಹೇಳೊದಕ್ಕೆ ಆಗುತ್ತಾ. ಈಗ ನಾನು ಹೇಳುತ್ತೇನೆ. ಅವನು ಬಿಜೆಪಿ ಗುತ್ತಿಗೆದಾರನೆಂದು. ಅದನ್ನ ಯಾರಾದರೂ ಒಪ್ಪಿಕೊಳ್ಳುತ್ತಾರಾ? 5 ರಾಜ್ಯ ಚುನಾವಣೆಗೂ ನಮಗೂ ಏನೂ ಸಂಬಂಧ. ನಾವೆನಾದರೂ ನಮ್ಮ  ಚುನಾವಣೆಗೆ ಹೋಗಿ ಯಾರಾನದರೂ ಕೇಳಿದ್ದೀವಾ ಎಮದು ಕಿಡಿಕಾರಿದರು.

ಬಿಜೆಪಿಯವರು ಸುಖಾ ಸುಮ್ಮನೇ ಆರೋಪ ಮಾಡುತ್ತಾರೆ. ಇದು ಸರ್ಕಾರದ ದುಡ್ಡ ಅಂಥ ಐಟಿ ಏನಾದರೂ ಹೇಳಿದ್ಯಾ. ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದ್ಯಾ? ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು. ಐಟಿ ರೈಡ್ ಗಳು ಸಾಮಾನ್ಯವಾಗಿ ನಡೆಯುತ್ತದೆ. ಈ ರೈಡ್ ಕೂಡ ಅದರ ಭಾಗ ಅಷ್ಟೇ. ಇದನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಅಷ್ಟೇ. ವೇಣುಗೋಪಾಲ್, ಖರ್ಗೆ, ಡಿಕೆಶಿ ಮಾತುಕತೆ ವಿಚಾರ ನನಗೆ ಏನು ಅಂತ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಐಟಿ ದಾಳಿಗೆ ಸಿಕ್ಕ ಭಾರಿ ಕುಳಗಳೆಷ್ಟು? ಅಧಿಕಾರಿಗಳು ವಶಕ್ಕೆ ಪಡೆದ ಹಣದ ಮೌಲ್ಯವೆಷ್ಟು? ವಿವರ ಇಲ್ಲಿದೆ ನೋಡಿ...

ರಾಜ್ಯದಲ್ಲಿ ಕುಡಿಯುವ ‌ನೀರು, ಮೇವಿನ ಕೊರತೆ, ನಿರುದ್ಯೋಗ ಸಮಸ್ಯೆ ‌ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ 236 ತಾಲ್ಲೂಕುಗಳ‌ ಪೈಕಿ 216 ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿವೆ. 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸದ್ಯಕ್ಕೆ ಕುಡಿಯುವ ನೀರಿ‌ನ ಸಮಸ್ಯೆಯಿಲ್ಲ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಹೊಸದಾಗಿ ಬೋರ್ ವೆಲ್ ಗಳನ್ನು ಕೊರೆಸುವಂತೆ ಸೂಚಿಸಲಾಗಿದೆ. ಮೇವಿನ ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಉದ್ಯೋಗ ನೀಡಲು ಕ್ರಮ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Follow Us:
Download App:
  • android
  • ios