Asianet Suvarna News Asianet Suvarna News

ಫಾರೂಕ್‌ ಪುತ್ರಿಯ ಅದ್ಧೂರಿ ವಿವಾಹ: ಗೌಡರ ಕುಟುಂಬವೇ ಹಾಜರ್‌!

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ, ಉದ್ಯಮಿ ಬಿ.ಎಂ.ಫಾರೂಕ್‌ ಅವರ ಪುತ್ರಿಯ ವಿವಾಹ ವೈಭವೋಪೇತವಾಗಿ ಮಂಗಳೂರು ಹೊರವಲಯದ ಉಳ್ಳಾಲದ ಸಮುದ್ರ ತೀರದಲ್ಲಿರುವ ಫಿಜಾ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ.

CM Kumaraswamy and Deve Gowda Attended the grand wedding of MB farooq s Daughter
Author
Bangalore, First Published Nov 17, 2018, 7:54 AM IST

ಮಂಗಳೂರು[ನ.17]: ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ, ಉದ್ಯಮಿ ಬಿ.ಎಂ.ಫಾರೂಕ್‌ ಅವರ ಪುತ್ರಿಯ ವಿವಾಹ ವೈಭವೋಪೇತವಾಗಿ ಮಂಗಳೂರು ಹೊರವಲಯದ ಉಳ್ಳಾಲದ ಸಮುದ್ರ ತೀರದಲ್ಲಿರುವ ಫಿಜಾ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆಯಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬ ಸಮೇತರಾಗಿ ಪಾಲ್ಗೊಂಡರು. ಜತೆಗೆ, ಸಮ್ಮಿಶ್ರ ಸರ್ಕಾರದ ಹಲವು ಸಚಿವರು, ಶಾಸಕರು ಪಾಲ್ಗೊಂಡಿದ್ದರು.

ಕೋಟಿಗಟ್ಟಲೆ ವೆಚ್ಚದ ವಿವಾಹ:

ಉದ್ಯಮಿಯೂ ಆಗಿರುವ ಫಾರೂಕ್‌ ಅವರು ಉಳ್ಳಾಲದಲ್ಲಿ ಫಿಜಾ ಹೆಸರಿನ ರೆಸಾರ್ಟ್‌ ನಡೆಸುತ್ತಿದ್ದಾರೆ. ಈಗ ಪುತ್ರಿ ವಿವಾಹದ ಹಿನ್ನೆಲೆಯಲ್ಲಿ ಈ ರೆಸಾರ್ಟ್‌ ಅನ್ನು ಅರಮನೆ ರೀತಿಯಲ್ಲಿ ರೂಪಾಂತರ ಮಾಡಲಾಗಿದೆ. ಫಾರೂಕ್‌ ಪುತ್ರಿಯನ್ನು ಕೇರಳ ಉದ್ಯಮಿಯೊಬ್ಬರ ಪುತ್ರನಿಗೆ ನಿಖಾ ಮಾಡಿಕೊಡಲಾಗಿದೆ. ವಧುವಿಗೆ 3 ಕೋಟಿ ರು. ಮೌಲ್ಯದ ವಿವಿಧ ಮಾದರಿಯ ಡೈಮಂಡ್‌ ಆಭರಣಗಳನ್ನು ತೊಡಿಸಲಾಗಿದ್ದರೆ, ವರನಿಗೆ 3 ಕೋಟಿ ರು. ಮೌಲ್ಯದ ಫೆರಾರಿ ಕಾರನ್ನು ಫಾರೂಕ್‌ ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟೊಂದು ಮೊತ್ತದ ಕಾರನ್ನು ಶಾಸಕರೊಬ್ಬರು ಉಡುಗೊರೆಯಾಗಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಒಟ್ಟು ವಿವಾಹ ಸಮಾರಂಭಕ್ಕೆಂದೇ ಸುಮಾರು 50 ಕೋಟಿ ರು.ಗೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ ಎಂದು ಹೇಳಲಾಗಿದೆ.

ಮದುವೆಗೂ ಮುನ್ನ ಗುರುವಾರ ರಾತ್ರಿ ಮೆಹಂದಿ ಕಾರ್ಯಕ್ರಮ ಕೂಡ ಜೋರಾಗಿಯೇ ನಡೆದಿದೆ. ಈ ವಿವಾಹ ಸಮಾರಂಭಕ್ಕೆ ಒಂದು ಸಾವಿರ ಮಂದಿ ಆಯ್ದ ಗಣ್ಯರನ್ನು ಆಹ್ವಾನಿಸಲಾಗಿದೆ. ಆದರೆ ಶುಕ್ರವಾರ ರಾತ್ರಿ ವೇಳೆಗೆ 2 ಸಾವಿರಕ್ಕೂ ಮಿಕ್ಕಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

CM Kumaraswamy and Deve Gowda Attended the grand wedding of MB farooq s Daughter

ಗೌಡರ ಕುಟುಂಬವೇ ಹಾಜರ್‌:

ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚೆನ್ನಮ್ಮ, ಪುತ್ರರಾದ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣ, ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ, ಪತ್ನಿ ಭವಾನಿ ರೇವಣ್ಣ, ಮೊಮ್ಮಕ್ಕಳಾದ ನಿಖಿಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ ಪಾಲ್ಗೊಂಡಿದ್ದರು. ಇನ್ನು ಸಚಿವ ಜಮೀರ್‌ ಅಹ್ಮದ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ವಿಶ್ವನಾಥ್‌, ಶಾಸಕ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಮಾಜಿ ಸಚಿವ ರಮಾನಾಥ ರೈ ಹಾಗೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರೂ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

Follow Us:
Download App:
  • android
  • ios