Asianet Suvarna News Asianet Suvarna News

ಪತ್ರಕರ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶುಭ ಸುದ್ದಿ

ಸಿಎಂ ಕುಮಾರಸ್ವಾಮಿ ಪತ್ರಕರ್ತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಎಲ್ಲಾ ಪತ್ರಕರ್ತರಿಗೆ ಸೂರು ಒದಗಿಸಿಕೊಡುವ ಯೋಜನೆಯನ್ನು ಜಾರಿ ತರುವ ಬಗ್ಗೆ ಸಿಎಂ ಹೇಳಿದ್ದಾರೆ. 

CM HD Kumaraswamy Good News For Journalist
Author
Bengaluru, First Published Oct 15, 2018, 9:56 AM IST
  • Facebook
  • Twitter
  • Whatsapp

ಮಂಗಳೂರು :  ಎಲ್ಲ ಪತ್ರಕರ್ತರಿಗೆ ಸೂರು ಎಲ್ಲ ಪತ್ರಕರ್ತರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನೋಂದಾಯಿತ ಮಾತ್ರವಲ್ಲ ನೋಂದಾಯಿತರಲ್ಲದ ಎಲ್ಲ ರೀತಿಯ ಪತ್ರಕರ್ತರಿಗೆ ಸೂರು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದು ಪತ್ರಕರ್ತರು, ಪತ್ರಿಕಾ ಛಾಯಾಚಿತ್ರಗ್ರಾಹಕರು, ಕ್ಯಾಮೆರಾಮೆನ್‌ಗಳಿಗೂ ಅನ್ವಯವಾಗಲಿದೆ. 

ಉಳಿದಂತೆ ಪತ್ರಕರ್ತರ ವಿವಿಧ ಬೇಡಿಕೆಗಳಾದ ಎಲ್ಲರಿಗೆ ಬಸ್‌ಪಾಸ್, ಸಾಮಾಜಿಕ ಭದ್ರತಾ ಯೋಜನೆ, ಅಧ್ಯಯನ ಪ್ರವಾಸಕ್ಕೆ ಅನುದಾನ ಒದಗಿಸಲು ಚಿಂತನೆ ನಡೆಸಲಾಗುವುದು. ಬಜೆಟ್‌ನಲ್ಲಿ ಇದಕ್ಕೆ ಆನುದಾನ ಕಾದಿರಿಸಲು ಚರ್ಚೆ ನಡೆಸಲಾಗುವುದು. ಈ ಯೋಜನೆಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅನುಷ್ಠಾನಗೊಳಿಸಲಾಗುವುದು ಎಂದರು.

Follow Us:
Download App:
  • android
  • ios