Asianet Suvarna News Asianet Suvarna News

ಕರ್ನಾಟಕಲ್ಲಿ 34,432 ಯೋಜನೆಗಳಿಗೆ ಓಕೆ: ಸಿಎಂ ಸಮಿತಿಯಿಂದ ಅನುಮೋದನೆ

ಈ ಯೋಜನೆಗಳ ಅನುಷ್ಠಾನದಿಂದ 48,850 ಮಂದಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ

CM Committee Approved to 34432 Projects in Karnataka grg
Author
Bengaluru, First Published Aug 6, 2022, 5:30 AM IST

ಬೆಂಗಳೂರು(ಆ.06):  ರಾಜ್ಯದಲ್ಲಿ 34,432 ಕೋಟಿ ರು. ಬಂಡವಾಳ ಹೂಡಿಕೆಯ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ಒಟ್ಟು 18 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಈ ಯೋಜನೆಗಳ ಅನುಷ್ಠಾನದಿಂದ 48,850 ಮಂದಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಶುಕ್ರವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 59ನೇ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಟೊಯೋಟಾ ಮೋಟಾರ್ಸ್‌ ಸೇರಿದಂತೆ ಎಂಟು ಹೊಸ ಕೈಗಾರಿಕಾ ಪ್ರಸ್ತಾವನೆಗಳು ಮತ್ತು ಹತ್ತು ಹೆಚ್ಚುವರಿ ಹೂಡಿಕೆ ಯೋಜನೆಗಳಿಗೆ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಥೆನಾಲ್‌, ಏರೋಸ್ಪೇಸ್‌, ಸೆಮಿಕಂಡಕ್ಟರ್‌ ತಯಾರಿಕಾ ಯಂತ್ರಗಳು, ಸ್ಟೀಲ್‌ ಮತ್ತು ಆಟೋಮೊಬೈಲ್‌ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಉದ್ಯಮಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಶಾ ಭಾಗವಹಿಸಿದ್ದ 'ಸಂಕಲ್ಪ ಸಿದ್ಧಿ' ಕಾರ್ಯಕ್ರಮ ಬ್ಯಾನರ್ ಫುಲ್ ಹಿಂದಿಮಯ, ಸಿದ್ದು ಕಿಡಿ

ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ, ತೋಟಗಾರಿಕೆ ಸಚಿವ ಮುನಿರತ್ನ, ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇತರರು ಉಪಸ್ಥಿತರಿದ್ದರು.

ಅನುಮೋದನೆ ಪಡೆದ ಪ್ರಮುಖ ಯೋಜನೆ

ಟೋಯೋಟಾ ಕಿರ್ಲೋಸ್ಕರ್‌ 3661.5 ಕೋಟಿ ರು.
ಟ್ರುಯಲ್ಟ್‌ ಬಯೋ 1856.47 ಕೋಟಿ ರು.
ಅಪ್ಲೈಡ್‌ ಮೆಟೀರಿಯಲ್ಸ್‌ಐ 1573 ಕೋಟಿ ರು.
ಸ್ಪೆಕ್ಟಾಕಲ್‌ ಲೆನ್ಸ್‌ಐ 977 ಕೋಟಿ ರು.
ಪ್ರಕಾಶ್‌ ಸ್ಪಾಂಜ್‌ ಐರನ್‌ 2500.09 ಕೋಟಿ ರು.
ಎಂವಿ ಫೋಟೋವೋಲ್ಟಾಯಿಕ್‌ 232.15 ಕೋಟಿ ರು.
ಶ್ರೀ ರೇಣುಕಾ ಶುಗರ್ಸ್‌ ಲಿ 775.35 ಕೋಟಿ ರು.
ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ 270.36 ಕೋಟಿ ರು.
 

Follow Us:
Download App:
  • android
  • ios