Asianet Suvarna News Asianet Suvarna News

ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಇಂದು 100 ದಿನ ಪೂರ್ಣ

 •  ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಸರ್ಕಾರ ಅವರು ಗುರುವಾರ ಮೊದಲ ನೂರು ದಿನಗಳನ್ನು ಪೂರೈಸುತ್ತಿದ್ದಾರೆ
 • ತಮ್ಮ ಆಡಳಿತದ ಮೂಲಕ ಆಡಳಿತಾರೂಢ ಬಿಜೆಪಿಯಲ್ಲಷ್ಟೇ ಅಲ್ಲದೆ ರಾಜ್ಯದ ಜನರಲ್ಲೂ ಭರವಸೆ 
CM Bommai Govt completes 100 Days snr
Author
Bengaluru, First Published Nov 4, 2021, 6:37 AM IST
 • Facebook
 • Twitter
 • Whatsapp

ಬೆಂಗಳೂರು (ನ.04):  ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ (CM Basavaraja bommai) ಅವರು ಗುರುವಾರ ಮೊದಲ ನೂರು ದಿನಗಳನ್ನು ಪೂರೈಸುತ್ತಿದ್ದು, ತಮ್ಮ ಆಡಳಿತದ ಮೂಲಕ ಆಡಳಿತಾರೂಢ ಬಿಜೆಪಿಯಲ್ಲಷ್ಟೇ (BJP) ಅಲ್ಲದೆ ರಾಜ್ಯದ ಜನರಲ್ಲೂ ಭರವಸೆ ಮೂಡಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಆ ಸ್ಥಾನವನ್ನು ಅಲಂಕರಿಸಿದ ಬೊಮ್ಮಾಯಿ (Bommai) ಅವರ ಬಗ್ಗೆ ಆರಂಭದಲ್ಲಿ ಬಿಜೆಪಿ ಪಾಳೆಯದಲ್ಲೇ ತುಸು ಅನುಮಾನವಿತ್ತು. ಆದರೆ, ನಂತರದ ದಿನಗಳಲ್ಲಿ ಅವರು ನಡೆದುಕೊಂಡ ರೀತಿ ಹಾಗೂ ಆಡಳಿತ ಶೈಲಿಯಿಂದಾಗಿ ಆ ಅನುಮಾನ ನಿವಾರಣೆಯಾಯಿತು. ತಮ್ಮ ಆಯ್ಕೆ ಸರಿಯಾಗಿಯೇ ಇದೆ ಎಂಬ ವಿಶ್ವಾಸ ಬಿಜೆಪಿ (BJP) ವರಿಷ್ಠರಲ್ಲೂ ಕಂಡುಬಂತು.

ಕೋವಿಡ್‌ (Covid) ಸಂಕಷ್ಟದಿಂದ ರಾಜ್ಯ ಹೊರಬರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನೂ ಹೊತ್ತಿರುವ ಬೊಮ್ಮಾಯಿ ಅವರು ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿದ್ದಾರೆ. ಅದರಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನೂ ಕಂಡಿದ್ದಾರೆ. ಸತತ ಸಭೆ, ಪ್ರವಾಸದ ಮೂಲಕ ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸುವತ್ತ ಗಮನಹರಿಸಿರುವ ಅವರು ತಮ್ಮ ಆಡಳಿತದ ಮೂಲಕ ಸಿಎಂ ಅಂದರೆ ‘ಕಾಮನ್‌ ಮ್ಯಾನ್‌’ ಎಂಬುದನ್ನು ನಿರೂಪಿಸತೊಡಗಿದ್ದಾರೆ.

ತೀರಾ ಇತ್ತೀಚಿನ ನಟ ಪುನೀತ್‌ ರಾಜ್‌ಕುಮಾರ್‌ (Puneeth rajkumar) ನಿಧನದ ನಂತರ ನಡೆದ ಬೆಳವಣಿಗೆಯನ್ನೇ ನಾಜೂಕಾಗಿ ನಿಭಾಯಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದ ಮುಖ್ಯಮಂತ್ರಿ ಬೊಮ್ಮಾಯಿ, ರಾಜಕೀಯವಾಗಿಯೂ ತಮ್ಮ ಎದುರಾಳಿಗಳಿಗೆ ಪರಿಣಾಮಕಾರಿಯಾಗಿ ತಿರುಗೇಟು ನೀಡುತ್ತಲೇ ತಾವೊಬ್ಬ ಅನುಭವಿ ರಾಜಕಾರಣಿ (Politician) ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ.

ಮಂಗಳವಾರ ಹೊರಬಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದಲ್ಲಿ ತಮ್ಮದೇ ತವರು ಜಿಲ್ಲೆಯ ಹಾನಗಲ್‌ (Hanagal) ಕ್ಷೇತ್ರದಲ್ಲಿ ಸೋಲಾಗಿರುವ ಹಿನ್ನಡೆ ಬಿಟ್ಟರೆ ಮೊದಲ ನೂರು ದಿನಗಳಲ್ಲಿ ಬೊಮ್ಮಾಯಿ ಸಮರ್ಥವಾಗಿಯೇ ಆಡಳಿತ ನೀಡಿದ್ದಾರೆ ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.

ನೂರು ದಿನ ಮೈಲುಗಲ್ಲಲ್ಲ:

ನೂರು ದಿನ ದೊಡ್ಡ ಮೈಲಿಗಲ್ಲು ಅಲ್ಲ. ಒಂದು ವರ್ಷವಾದರೂ ಆಗಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾರಂಭಿಕವಾಗಿ ನಾವು ಹೇಗೆ ನಡೆದುಕೊಂಡಿದ್ದೇವೆ ಅಂತ ಹೇಳಬಹುದು. ನೂರು ದಿವಸಗಳಲ್ಲಿ ಯಾವ ರೀತಿ ಹೆಜ್ಜೆ ಇಟ್ಟಿದ್ದೇವೆ, ಅಭಿವೃದ್ಧಿ ಪರ ಚಿಂತನೆ ಯಾವ ನಿಟ್ಟಿನಲ್ಲಿ ಇದೆ ಎನ್ನುವುದನ್ನು ಗುರುವಾರ ನಿಮ್ಮ ಮುಂದೆ ಇಡುತ್ತೇನೆ ಎಂದು ನುಡಿದರು.

8ರಂದು ಸಾಧನಾ ವರದಿ ಬಿಡುಗಡೆ?

ಈ ತಿಂಗಳ 8ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಆಡಳಿತದ ಮೊದಲ ನೂರು ದಿನಗಳ ಸಾಧನೆ ಕುರಿತ ವರದಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದೇನೂ ದೊಡ್ಡ ಮೈಲುಗಲ್ಲು ಅಲ್ಲ

ನೂರು ದಿನ ದೊಡ್ಡ ಮೈಲಿಗಲ್ಲು ಅಲ್ಲ. ಒಂದು ವರ್ಷವಾದರೂ ಆಗಬೇಕು. ಪ್ರಾರಂಭಿಕವಾಗಿ ನಾವು ಹೇಗೆ ನಡೆದುಕೊಂಡಿದ್ದೇವೆ ಅಂತ ಹೇಳಬಹುದು. ನೂರು ದಿವಸಗಳಲ್ಲಿ ಯಾವ ರೀತಿ ಹೆಜ್ಜೆ ಇಟ್ಟಿದ್ದೇವೆ, ಅಭಿವೃದ್ಧಿ ಪರ ಚಿಂತನೆ ಯಾವ ನಿಟ್ಟಿನಲ್ಲಿ ಇದೆ ಎನ್ನುವುದನ್ನು ನಿಮ್ಮ ಮುಂದೆ ಇಡುತ್ತೇನೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 •  ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ  ಸರ್ಕಾರಕ್ಕೆ ಮೊದಲ ನೂರು ದಿನ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಇಂದು 100 ದಿನ ಪೂರ್ಣ 
 •  ಆಡಳಿತದ ಮೂಲಕ ಆಡಳಿತಾರೂಢ ಬಿಜೆಪಿಯಲ್ಲಷ್ಟೇ ಅಲ್ಲದೆ ರಾಜ್ಯದ ಜನರಲ್ಲೂ ಭರವಸೆ 
 • ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಆ ಸ್ಥಾನವನ್ನು ಅಲಂಕರಿಸಿದ ಬೊಮ್ಮಾಯಿ
 • ಆರಂಭದಲ್ಲಿ ಬಿಜೆಪಿ ಪಾಳೆಯದಲ್ಲೇ ತುಸು ಅನುಮಾನ
 •  ನಂತರದ ದಿನಗಳಲ್ಲಿ ಅವರು ನಡೆದುಕೊಂಡ ರೀತಿ ಹಾಗೂ ಆಡಳಿತ ಶೈಲಿಯಿಂದಾಗಿ ಆ ಅನುಮಾನ ನಿವಾರಣೆ
 • ತಮ್ಮ ಆಯ್ಕೆ ಸರಿಯಾಗಿಯೇ ಇದೆ ಎಂಬ ವಿಶ್ವಾಸ ಬಿಜೆಪಿ ವರಿಷ್ಠರಲ್ಲೂ ಕಂಡುಬಂತು
Follow Us:
Download App:
 • android
 • ios