ಕೋವಿಡ್‌, ಪ್ರವಾಹ, ನೀರಾವರಿ ಯೋಜನೆ ಸೇರಿದಂತೆ ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸುವ ಸಂಬಂಧ ಮುಂದಿನ ವಾರ ದೆಹಲಿಗೆ ತೆರಳುತ್ತೇನೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು (ಆ.21): ಕೋವಿಡ್‌, ಪ್ರವಾಹ, ನೀರಾವರಿ ಯೋಜನೆ ಸೇರಿದಂತೆ ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸುವ ಸಂಬಂಧ ಕೇಂದ್ರದ ಸಚಿವರು ಸಮಯ ನೀಡಿದರೆ ಮುಂದಿನ ವಾರ ದೆಹಲಿಗೆ ತೆರಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ವಿಚಾರಗಳ ಕುರಿತು ಚರ್ಚೆ ನಡೆಸುವ ಸಂಬಂಧ ಕೇಂದ್ರದ ಸಮಯ ಕೇಳಲಾಗಿದೆ. 

ಸಮಯ ನೀಡಿದರೆ ಮುಂದಿನ ವಾರ ದೆಹಲಿಗೆ ತೆರಳಿ ರಾಜ್ಯದ ವಿಚಾರಗಳ ಕುರಿತು ಸಮಾಲೋಚನೆ ನಡೆಸುತ್ತೇನೆ. ರಾಜ್ಯದ ಯೋಜನೆಗಳು, ಅನುಷ್ಠಾನಗೊಳ್ಳಬೇಕಾದ ಕಾರ್ಯಕ್ರಮಗಳು, ನೀರಾವರಿ ಯೋಜನೆಗಳು, ಪ್ರವಾಹ, ಕೋವಿಡ್‌ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈವರೆಗೆ ಕೇಂದ್ರದ ಸಚಿವರು ಸಮಯ ನೀಡಿಲ್ಲ. ಸಮಯ ನೀಡಿದ ಬಳಿಕ ದೆಹಲಿಗೆ ಹೋಗುತ್ತೇನೆ ಎಂದರು.