Asianet Suvarna News Asianet Suvarna News

ಸಿಎಂ ನೇತೃತ್ವದಲ್ಲಿ ನಡೆಯಲಿದೆ ಕೋವಿಡ್ ನಿಯಂತ್ರಣ ಸಭೆ : ಮತ್ತಷ್ಟು ಕಠಿಣ ನಿಯಮ?

  • ಇಂದು ಸಿಎಂ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಸಭೆ 
  • ಹಿರಿಯ ಅಧಿಕಾರಿಗಳು ಹಾಗು ಆರೋಗ್ಯ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ 
  • ಹೊಸ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ನಿರ್ಧಾರ ಸಾಧ್ಯತೆ
CM Basavaraja Bommai To Hold Meeting With Health Department Officers on covid Control snr
Author
Bengaluru, First Published Aug 6, 2021, 11:28 AM IST

ಬೆಂಗಳೂರು (ಆ.06): ಇಂದು ಸಿಎಂ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಸಭೆ ನಡೆಯಲಿದ್ದು,  ಹಿರಿಯ ಅಧಿಕಾರಿಗಳು ಹಾಗು ಆರೋಗ್ಯ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಹೊಸ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ನಿರ್ಧಾರ ಸಾಧ್ಯತೆ ಇದ್ದು, ಸಿಎಂ‌ ಹಾಗೂ ಸಚಿವ ಸಂಪುಟ ಬದಲಾದ ಹಿನ್ನೆಲೆ ಕೋವಿಡ್ ನಿಯಂತ್ರಣ ಟಾಸ್ಕ್ ಫೋರ್ಸ್ ಬದಲಾವಣೆ ಮಾಡುವ ಸಾಧ್ಯತೆ ಇದೆ. 

ಹಾಸನ: ಕೇರಳದಿಂದ ಪರೀಕ್ಷೆ ಬರೆಯಲು ಬಂದಿದ್ದ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ

ಕೊರೊನಾ 3ನೇ ಅಲೆ ನಿಯಣಂತ್ರಣ ಕುರಿತು ತಜ್ಞರ ಸಲಹೆಗಳನ್ನ ಪಡೆದು ಈ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚಿಸಲಿದ್ದಾರೆ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಕಡಿವಾಣ ಹಾಕಲು ತಜ್ಞರ ಸಮಿತಿ ಸಲಹೆ ನೀಡಿದೆ.  

ಪಾಸಿಟಿವಿಟಿ ದರ ಹೆಚ್ಚಳವಾಗಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನ ವಿಧಿಸಿ, ಪಾಸಿಟಿವಿಟಿ ದರ ಶೇ.2 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ನಿರ್ಬಂಧ ವಿಧಿಸಲು ಶಿಫಾರಸು ಮಾಡಲಾಗಿದೆ. ಅನ್ ಲಾಕ್ ನಿಯಮಗಳಲ್ಲಿ ಕೆಲವನ್ನ ವಾಪಸ್ ಪಡೆಯುವ ಸಾಧ್ಯತೆಯೂ ಇದೆ. 

ಐದು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 2 ಕ್ಕಿಂತ ಅಧಿಕವಿದೆ. 

- ದಕ್ಷಿಣಕನ್ನಡ- 5.06%
- ಕೊಡಗು- 4.4%
- ಉಡುಪಿ - 4.12%
- ಚಿಕ್ಕಮಗಳೂರು- 3.71%
- ಹಾಸನ - 2.49%

ಕಚೇರಿಗಳಲ್ಲಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಣೆಗೆ ಶೇ 100 ಬದಲು ಶೇ.50 ರಷ್ಟು ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿದೆ. 

ರೆಸಾರ್ಟ್/ಪ್ರವಾಸಿ ತಾಣಗಳನ್ನ ಬಂದ್ ಮಾಡುವ ನಿರ್ಧಾರ ಸಾಧ್ಯತೆ ಇದೆ.

ರ್‍ಯಾಲಿ, ಸಾರ್ವಜನಿಕ ಸಮಾವೇಶ, ಬೃಹತ್ ಕಾರ್ಯಕ್ರಮಗಳಿಗೆ ಕಡಿವಾಣ ಸಾಧ್ಯತೆ ಇದೆ. 

ಪಬ್, ಬಾರ್, ಜಿಮ್, ಯೋಗ ಕೇಂದ್ರಗಳನ್ನ ಕ್ಲೋಸ್ ಮಾಡಲು ತಜ್ಞರು ಸಲಹೆ ನೀಡಲಿದ್ದಾರೆ.

ಕೇರಳ, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಕೇಸ್ ಗಳ ಹೆಚ್ಚಳ ಹಿನ್ನೆಲೆ ವಾರಾಂತ್ಯದ ಕರ್ಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 6ರವರೆಗೆ ವಿಧಿಸಲು ತಜ್ಞರು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios