ಕರ್ನಾಟಕದ ಜನತೆಗೆ ಹೊಸ ವರ್ಷದ ಶುಭಾಶಯ ತಳಿಸಿದ ಸಿಎಂ ಬೊಮ್ಮಾಯಿ

ನಾಡು ಇಂದೆಂದು ಕಾಣದಷ್ಟು ಅಭಿವೃದ್ಧಿ ಕಾಣಲಿ. ನಾಡಿನ ಸರ್ವ ಜನತೆಗೆ ಹೊಸ ವರ್ಷ ಸಂತೋಷ ತರಲಿ ಅಂತ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

CM Basavaraj Bommai Wished the People of Karnataka for the New Year 2023 grg

ಹುಬ್ಬಳ್ಳಿ(ಜ.01):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನ ತಿಳಿಸಿದ್ದಾರೆ. ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡು ಇಂದೆಂದು ಕಾಣದಷ್ಟು ಅಭಿವೃದ್ಧಿ ಕಾಣಲಿ. ನಾಡಿನ ಸರ್ವ ಜನತೆಗೆ ಹೊಸ ವರ್ಷ ಸಂತೋಷ ತರಲಿ ಅಂತ ತಿಳಿಸಿದ್ದಾರೆ. 

ಮಹದಾಯಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಗ್ರಿನ್ ಸಿಗ್ನಲ್ ಆದೇಶದಲ್ಲಿ ಕೆಳಗಡೆ ಸಹಿ ಇದೆ. ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಅಂತ ಗೊತ್ತಿಲ್ಲ. ಮಹದಾಯಿಗಾಗಿ ನಾವು ಹೋರಾಟ ಮಾಡಿದ್ವಿ,   ಅವರು ಹೋರಾಟ ಮಾಡಿದ್ರು, ಈಗ ಆ ಹೋರಾಟ ತಾರ್ಕಿಕ ಜಯ ಸಿಕ್ಕಿದೆ. 20-25 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಇಂತಹ ಸಂದರ್ಭಗಳಲ್ಲಿ ಲೋಪದೋಷ ಹುಡುಕುವುದು ಅವರ ಮನಸ್ಥಿತಿ ಸೂಚಿಸುತ್ತೆದೆ. ಅವರ ಟೀಕೆ ಟಿಪ್ಪಣಿಗಳ ಬಗ್ಗೆ ನಾನು ತಲೆಕಡೆಸಿಕೊಳ್ಳುವುದಿಲ್ಲ. ಡಿಪಿಆರ್ ಆಗಿದೆ- ಎಂಓಎಫ್ ಕ್ಲಿಯರೆನ್ಸ್ ತೆಗೆದುಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಅಂತ ಹೇಳಿದ್ದಾರೆ. 

ಮಹದಾಯಿ: 4 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ

ಪಂಚಮಸಾಲಿ- ಒಕ್ಕಲಿಗ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಸಂವಿಧಾನಾತ್ಮಕವಾಗಿ ಯಾವುದೇ ತೊಡಕು ಆಗಲ್ಲ. ಇದು‌ ಮಧ್ಯಂತರ ವರದಿ ಇದೆ, ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇದರಲ್ಲಿ ನಮ್ಮ ಸರ್ಕಾರದ ಉದ್ದೇಶ ಹೇಳಿದ್ದೇವೆ. ಅಂತಿಮ ವರದಿಯಲ್ಲಿ ಅಂಕಿ ಅಂಶಗಳ ಮಾಹಿತಿಯನ್ನ ನೀಡುತ್ತೇವೆ. ಮೀಸಲಾತಿ ಜಾರಿ ವಿಚಾರದಲ್ಲಿ ಸಂಬಂಧ ಪಟ್ಟವರ ಜೊತೆ ಚರ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕೆಲ ವರ್ಗದ ಜನರಿಗೆ ಶೈಕ್ಷಣಿಕ- ಉದ್ಯೋಗದಲ್ಲಿ ಹಿನ್ನಡೆಯಾಗಿದ್ದು ನಿಜ, ಅವರಿಗೆ ನ್ಯಾಯಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸ್ಪಷ್ಟೀಕರಣ ಬೇಕಾದ್ರೆ ಕೊಡುತ್ತೇವೆ. ಇದರಲ್ಲಿ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ.  ವಿರೋಧ ಪಕ್ಷದವರು ತಾವು ಅಧಿಕಾರದಲ್ಲಿ ಇದ್ದಾಗ ಈ ಬೇಡಿಕೆ ಈಡೇರಿಸಲು ಆಗಲಿಲ್ಲ. ಈಗ ನಾವು ಮಾಡುತ್ತಿರೋದ್ರಿಂದ ಸಮಸ್ಯೆಯಾಗಿದೆ ಅಂತ ವಿಪಕ್ಷಗಳ ವಿರುದ್ಧ ಸಿಎಂ ಬೊಮ್ಮಾಯಿ ಹರಿಹಾಯ್ದಿದ್ದಾರೆ. 

Latest Videos
Follow Us:
Download App:
  • android
  • ios