ವೇದಿಕೆ ಮೇಲೆಯೇ ಜಗದೀಶ್‌ ಶೆಟ್ಟರ್‌ ಅಸಮಾಧಾನ: ಸ್ಥಳದಲ್ಲೇ ಬಗೆಹರಿಸಿದ ಬೊಮ್ಮಾಯಿ

* ವೇದಿಕೆ ಮೇಲೆಯೇ ಜಗದೀಶ್‌ ಶೆಟ್ಟರ್‌ ಅಸಮಾಧಾನ
* ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಶೆಟ್ಟರ್ ಪ್ರಶ್ನೆ
* ವೇದಿಕೆ ಮೇಲೆಯೇ ಬಗೆಹರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

cm basavaraj bommai solved jagadish shettar request immediately In stage itself at Hubballi

ಹುಬ್ಬಳ್ಳಿ, (ಮಾ.06): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹುಬ್ಬಳ್ಳಿಯಲ್ಲಿ(Hubballi) ಇಂದು(ಭಾನುವಾರ) ನೂತನ ಎಫ್​.ಎಸ್​.ಎಲ್ ಲ್ಯಾಬ್ ಉದ್ಘಾಟನೆ ಮಾಡಿದರು.

 ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Cyber Crime : ಹೈದರಾಬಾದ್‌ ಗೆ ಹೋಗುವ ಕೆಲಸವೇ ಇಲ್ಲ.. ಹುಬ್ಬಳ್ಳಿಯಲ್ಲೆ ಎಲ್ಲ

ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಭಾಷಣ ಮಾಡುವ ವೇಳೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಗೋಕುಲ ರಸ್ತೆಯಲ್ಲಿ ಸಾಕಷ್ಟು ಜಾಗ ಹೊಂದಿದ್ದರೂ ಗೋಕುಲ ಪೊಲೀಸ್ ಠಾಣೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುತ್ತಿಲ್ಲ. ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ ಸರ್ಕಾರದ ಜಾಗವನ್ನು ಸರ್ಕಾರದ ಇನ್ನೊಂದು ಇಲಾಖೆಗೆ ಕೊಡಲು ಎಷ್ಟೊಂದು ಅಡೆತಡೆ? ಎಂದು ವೇದಿಕೆ ಮೇಲೆ ಮುಖ್ಯಮಂತ್ರಿಗಳ ಮುಂದೆಯೇ ಪ್ರಶ್ನಿಸಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ. ವಾಯವ್ಯ ಸಾರಿಗೆ ಇಲಾಖೆ ಗೋಕುಲ ಪೊಲೀಸ್‌ ಠಾಣೆಗೆ ಅರ್ಧ ಎಕರೆ ಜಾಗವನ್ನು ಕೊಡಬೇಕು. ಇದರಲ್ಲಿ ಯಾವುದೇ ವಿಳಂಬವಾಗುವಂತಿಲ್ಲ ಎಂದು ಸೂಚನೆ ನೀಡಿದರು.

ಇದಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ 'ಸರಿ ಸರ್‌' ಎಂದರು. ಅಲ್ಲದೇ ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಮಾ. 31ರ ಒಳಗೆ ಜಾಗ ಕೊಡಬೇಕು  ಬೊಮ್ಮಾಯಿ ಖಡಕ್ಕಾಗಿ ಹೇಳಿದರು.

ಬಳಿಕ ಮಾತು ಮುಂದುವರೆಸಿದ ಸಿಎಂ, ಹಲವಾರು ಕೇಸ್ ಗಳನ್ನ ಹೈದ್ರಾಬಾದ್ ಗೆ ತೆಗದುಕೊಂಡು ಹೋಗೊ ಕಾಲ ಇತ್ತು. ಆದ್ರೆ ಇಂದು ಅದೆಲ್ಲವೂ ಬದಲಾಗಿದೆ. ಹೀಗಾಗೇ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಎಫ್. ಎಸ್. ಎಲ್ (FSL) ಆರಂಭಿಸಲಾಗಿದೆ ಎಂದರು.

ಅಪರಾಧ ಶೋಧನೆಯಲ್ಲಿ FSL ಮಹತ್ವದ ಘಟ್ಟವಹಿಸಿದೆ. ಕೋಟ್೯ ಗಳಲ್ಲಿ ಮಾನ್ಯತೆ ಬೇಕಾದ್ರೆ FSL ವರದಿ ಬೇಕು. ಕೇವಲ ಬೆಂಗಳೂರಿನಲ್ಲಿ ಈ ಕೇಂದ್ರ ಇತ್ತು. ವರದಿ ಬರೋದು ಮೂರು ತಿಂಗಳು ಆಗ್ತಿದೆ. ಬ್ಯಾಂಕಿಂಗ್ ಮೋಸ ಬಹಳ ಆಗ್ತಿದೆ. ಜಾರ್ಖಂಡ್ ನ ಒಂದು ಹಳ್ಳಿ ಸೈಬರ್ ಕ್ರೈಂಗೆ ಹೆಸರುವಾಸಿಯಾಗಿದೆ. ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ. DNA, cyber, mobile audio, video ಸೆಕ್ಷನ್ ಇರಲಿಲ್ಲ. ಅವೆಲ್ಲಾ ಇಲ್ಲಿ ಕಾರ್ಯನಿವರ್ಹಿಸುತ್ತೆವೆ. ನಾಕೋಟಿಕ್ ಸೆಕ್ಷನ್ ಕೂಡಾ,ಕೆಲವೇ ದಿನಗಳಲ್ಲಿ ಅದನ್ನ ಕೂಡಾ ಮಾಡುತ್ತೇವೆ ಎಂದು ತಿಳಿಸಿದರು.

 ಅತೀ ಹೆಚ್ಚು ಕ್ರೈಂಗಳನ್ನ ನಮ್ಮ ಪೊಲೀಸರು ಶೋಧಿಸುತ್ತಿದ್ದಾರೆ. ಅವರ ಕೆಲಸಕ್ಕೆ ನನ್ನ ಅಭಿನಂದನೆ ಸಲ್ಲಿಸುತ್ತೆನೆ. ಜಯದೇವ ಸಂಸ್ಥೆಯನ್ನ ಹುಬ್ಬಳ್ಳಿಗೆ ತಂದಿದ್ದೆವೆ. ಇದು ಈ ಭಾಗದ ಜನರಿಗೆ ಒಳ್ಳೆಯ ಸೌಲಭ್ಯ ನೀಡುತ್ತೆ. ಯುವಕರಿಗೆ ಉದ್ಯೋಗ ನಿಡೋಕೆ ಎಫ್. ಎಂಸಿ ಕ್ಲಸ್ಟರ್ ಕೂಡಾ ಆದಷ್ಟು ಬೇಗ ಆರಂಭವಾಗುತ್ತೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios