Asianet Suvarna News Asianet Suvarna News

ಅಜ್ಞಾತ ಸ್ಥಳದಲ್ಲಿದ್ದ ಸಿಎಂ ಬೊಮ್ಮಾಯಿ ಸಂಜೆ ಮನೆಗೆ ವಾಪಸ್, ಎಲ್ಲಿಗೆ ಹೋಗಿದ್ರು?

* ಅಜ್ಞಾತ ಸ್ಥಳದಲ್ಲಿ ಸಿಎಂ ಕಡತಯಜ್ಞ
 * ಉಪಚುನಾವಣೆ, ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಬಾಕಿ ಆಗಿದ್ದ ಕಡತಗಳು
*  ಅಧಿಕಾರಿಗಳ ಜತೆ ಇಡೀ ದಿನ ಪರಿಶೀಲನೆ

cm basavaraj bommai Retunes to Home after cleared files rbj
Author
Bengaluru, First Published Nov 7, 2021, 12:44 AM IST
  • Facebook
  • Twitter
  • Whatsapp

ಬೆಂಗಳೂರು, (ನ.07): ಕಳೆದ 2 ವಾರಗಳಿಂದ ಉಪಚುನಾವಣೆ ಪ್ರಚಾರ, ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಶನಿವಾರ ಅಜ್ಞಾತ ಸ್ಥಳದಲ್ಲಿ ಕೆಲ ಹಿರಿಯ ಅಧಿಕಾರಿಗಳ ಜತೆ ಕುಳಿತು ಇಡೀ ದಿನ ಕಡತ ವಿಲೇವಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಉಪಚುನಾವಣೆ (By Election) ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವು ಅಧಿಕಾರಿಗಳ ಜತೆ ಅಜ್ಞಾತ ಸ್ಥಳಕ್ಕೆ ತೆರಳಿ ಕಡತಗಳ ವಿಲೇವಾರಿ ಕಾರ್ಯದಲ್ಲಿ ಇಡೀ ದಿನ ತೊಡಗಿದ್ದರು.

ಸಾಮಾನ್ಯರ ಸಿಎಂ, ಅಸಾಮಾನ್ಯ ಸುಧಾರಣೆಗಳು!

 ಬೆಂಗಾವಲು ವಾಹನವನ್ನು (Escort Vehicles) ಬಿಟ್ಟು ಮುಖ್ಯಮಂತ್ರಿಗಳು ತಮ್ಮ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌(Manjunath Prasad) ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳ ಜತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಕಳೆದು ಎರಡು ವಾರದಿಂದ ಉಪಚುನಾವಣೆ, ಜಿಲ್ಲಾ ಪ್ರವಾಸಗಳಲ್ಲಿ ತೊಡಗಿದ್ದರಿಂದ ಕಡತ ವಿಲೇವಾರಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿವಾರ ಯಾವುದೇ ಕಾರ್ಯಕ್ರಮಗಳಿಗೆ ಸಮಯ ನಿಗದಿಗೊಳಿಸದೆ ಕಡತಗಳ ವಿಲೇವಾರಿ ಕಾರ್ಯದಲ್ಲಿ ನಿರತರಾಗಿದ್ದರು. ಇಡೀ ದಿನ ಕಡತ ವಿಲೇವಾರಿ ಕಾರ್ಯ ಮುಗಿಸಿ ಸಂಜೆಯ ವೇಳೆಗೆ ಮನೆಗೆ ಹಿಂತಿರುಗಿದರು.

ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹಲವು ಕಡತಗಳು ಸಹಿಯಾಗದೆ ಉಳಿದುಕೊಂಡಿದ್ದವು. ಹೀಗಾಗಿ ಶನಿವಾರ ಮುಖ್ಯಮಂತ್ರಿಗಳು ತಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಿಗದಿಪಡಿಸಿರಲಿಲ್ಲ. ಕಡತಗಳಿಗೆ ಸಹಿ ಹಾಕದ ಕಾರಣ ವಿಲೇವಾರಿ ಕೆಲಸ ಬಾಕಿ ಉಳಿದಿತ್ತು. ಇದರಿಂದ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ತೊಡಕಾಗಿತ್ತು. ಅಲ್ಲದೆ, ಪ್ರತಿಪಕ್ಷಗಳು ಸಹ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಈ ಹಿನ್ನೆಲೆಯಲ್ಲಿ ಕಡತ ವಿಲೇವಾರಿ ಕಾರ್ಯದಲ್ಲಿ ಮುಖ್ಯಮಂತ್ರಿಗಳು ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಪ್ರಮುಖ ಇಲಾಖೆಯ ಕಡತಗಳನ್ನು ವಿಳಂಬ ಮಾಡದಂತೆ ತಕ್ಷಣವೇ ವಿಲೇವಾರಿ ಮಾಡಬೇಕು. ಕಡತಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬವಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿನ ಕಡತಗಳನ್ನು ವಿಳಂಬ ಮಾಡದೆ ತಕ್ಷಣ ಇತ್ಯರ್ಥ ಮಾಡಬೇಕು ಎಂದು ಹೇಳಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಕಡತಗಳ ವಿಲೇವಾರಿಯಾಗದಿರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರ ವಹಿಸಿಕೊಂಡಿದ್ದ ವೇಳೆಯಲ್ಲಿಯೇ ಸೂಚನೆ ನೀಡಿದ್ದೆ. ಆದರೂ, ವಿಳಂಬವಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಮುಖ್ಯ ಕಾರ್ಯದರ್ಶಿಗಳು ಕಡತಗಳನ್ನು ಪರಿಶೀಲನೆ ನಡೆಸಬೇಕು. ಮಾತ್ರವಲ್ಲ, ನಾನು ಸಹ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಮೂರು ತಿಂಗಳಿಗೊಮ್ಮೆಯಾದರೂ ಸಭೆ ಕೈಗೊಂಡು ಕಡತಗಳ ವಿಲೇವಾರಿಗೆ ವೇಗ ನೀಡುವುದಾಗಿ ಅಧಿಕಾರಿಗಳಿಗೆ ಹೇಳಿದರು ಎನ್ನಲಾಗಿದೆ.

ಬೈ ಎಲೆಕ್ಷನ್, ಜಿಲ್ಲಾ ಪ್ರವಾಸ ಎಫೆಕ್ಟ್:
ಹೌದು..ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾನಗಲ್‌ನಲ್ಲಿ ಗೆಲ್ಲಲೇಬೇಕೆಂಬ ಪರಿಸ್ಥಿತಿಯಲ್ಲಿದ್ದರು.ಈ ಹಿನ್ನೆಲೆಯಲ್ಲಿ ಅವರು ಅಲ್ಲಿಯೇ ಠಿಕಾಣಿ ಹೂಡಿದ್ದರು. ಅಲ್ಲದೇ ದೀಪಾವಳಿ ಹಬ್ಬ ಆಚರಣೆಗೆಂದು ತವರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಇದರಿಂದ ಬಹಳಷ್ಟು ಫೈಲ್‌ಗಳು ವಿಲೇವಾರಿಯಾಗದೇ ಹಾಗೇ ಬಾಕಿ ಉಳಿದುಕೊಂಡಿದ್ದವು. ಈ ಕಾರಣಕ್ಕಾಗಿ ಶನಿವಾರದ ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡಿ ಅಧಿಕಾರಿಗಳ ಸಮೇತ ಅಜ್ಞಾತ ಸ್ಥಳಕ್ಕೆ ಎಲ್ಲಾ ಕಡತಗಳನ್ನ ಕ್ಲೀಯರ್ ಮಾಡಿದ್ದಾರೆ..

ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ನಾಡಿನ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಸಿಎಂ ಎಂದರೆ ‘ಕಾಮನ್‌ ಮ್ಯಾನ್‌’ ಎಂಬ ಮಾತು ಈಗ ಜನಜನಿತವಾಗಿದೆ. ಇದಕ್ಕೆ ಪೂರಕವಾಗಿ ಅವರು ಆಡಳಿತದಲ್ಲಿ ಕೈಗೊಂಡ ಕೆಲ ಸಣ್ಣ ಕ್ರಮಗಳು ಕೂಡ ದೊಡ್ಡ ಮಟ್ಟದಲ್ಲಿ ಜನರ ಮನ ಗೆದ್ದಿವೆ.

Follow Us:
Download App:
  • android
  • ios