ಸ್ವಚ್ಛತೆಗೆ ಪ್ರತಿಯೊಬ್ಬರೂ ಹೆಚ್ಚಿನ ಆದ್ಯತೆ ನೀಡಿ. ಒಂದು ಗಂಟೆ ಶ್ರಮದಾನ ಮಾಡಿ ಸುತ್ತಮುತ್ತಲಿನ ಪರಿಸರ ಸ್ವಚ್ಚಗೊಳಿಸಿ ಪರಿಶುದ್ಧ ವಾತಾವರಣ ಸೃಷ್ಟಿಸಬೇಕು ಎಂದು ಬೇಗೂರು ವಾರ್ಡ್‌ ಪಾಲಿಕೆ ಮಾಜಿ ಸದಸ್ಯ ಎಂ.ಆಂಜನಪ್ಪ ಕರೆ ನೀಡಿದರು.

ಬೆಂಗಳೂರು ದಕ್ಷಿಣ (ಅ,2) ಸ್ವಚ್ಛತೆಗೆ ಪ್ರತಿಯೊಬ್ಬರೂ ಹೆಚ್ಚಿನ ಆದ್ಯತೆ ನೀಡಿ. ಒಂದು ಗಂಟೆ ಶ್ರಮದಾನ ಮಾಡಿ ಸುತ್ತಮುತ್ತಲಿನ ಪರಿಸರ ಸ್ವಚ್ಚಗೊಳಿಸಿ ಪರಿಶುದ್ಧ ವಾತಾವರಣ ಸೃಷ್ಟಿಸಬೇಕು ಎಂದು ಬೇಗೂರು ವಾರ್ಡ್‌ ಪಾಲಿಕೆ ಮಾಜಿ ಸದಸ್ಯ ಎಂ.ಆಂಜನಪ್ಪ ಕರೆ ನೀಡಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್‌ನ ಶ್ರೀ ನಾಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪೌರ ಕಾರ್ಮಿಕರೊಂದಿಗೆ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಆವರಣವನ್ನು ಶುಚಿಗೊಳಿಸಿ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸಿದರು.

ಜಪಾನ್ ರೀತಿ 14 ನಿಮಿಷದಲ್ಲೇ ವಂದೇ ಭಾರತ್ ರೈಲು ಸ್ವಚ್ಛಗೊಳಿಸಿದ ಸಿಬ್ಬಂದಿ!

ಕಸವನ್ನು ಕೆರೆ, ಕಾಲುವೆ, ರಸ್ತೆ ಬದಿ ಸೇರಿದಂತೆ ಖಾಲಿ ಜಮೀನು, ನಿವೇಶನಗಳಲ್ಲಿ ಎಸೆದು ಹೋಗುತ್ತಾರೆ, ಕಸವನ್ನು ಎಲ್ಲೆಂದರಲ್ಲಿ ಸುರಿಯುವುದರಿಂದ ರೋಗಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಮುಂಜಾನೆ 7ರಿಂದ 9ರವರೆಗೆ ದೇವಾಲಯದ ಆವರಣದಲ್ಲಿ ಕೈಯಲ್ಲಿ ಪೊರಕೆ, ಬುಟ್ಟಿ ಮತ್ತು ಸ್ವಚ್ಚತಾ ಪರಿಕರಗಳನ್ನು ಹಿಡಿದುಕೊಂಡು ಪೌರಕಾರ್ಮಿಕರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಸ್ಥಳೀಯ ಮುಖಂಡರು, ಪರಿಸರ ಪ್ರೇಮಿಗಳು ಹಾಗೂ ಬೇಗೂರು ನಡಿಗೆದಾರರ ಸಂಘದ ಜೊತೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಎಂ.ಆಂಜನಪ್ಪ, ಮುಖಂಡರಾದ ಲೋಕೇಶ್, ಪ್ರಶಾಂತ್ (ಅಪ್ಪಿ), ಅಕ್ರಂ ಪಾಷಾ, ಸಾಕ್ಷಿ ಮಧು, ಆರೋಗ್ಯಾಧಿಕಾರಿ ರಮೇಶ್ ಶ್ರಮದಾನ ಮಾಡಿದರು. 

ರೈಲಲ್ಲಿ 'ನೀನ್​ ಚಂದಾನೆ' ಹಾಡಿಗೆ ಆ್ಯಂಕರ್​ ಅನುಶ್ರೀ ಸಕತ್​ ಎಂಜಾಯ್​: ಇಲ್ಲೂ ಮದ್ವೆ ವಿಷ್ಯ ಕೆದಕಿದ ಫ್ಯಾನ್ಸ್​!