Asianet Suvarna News Asianet Suvarna News

Fake note: ರಾಜ್ಯದಲ್ಲಿ ಮತ್ತೆ ನಕಲಿ ನೋಟುಗಳ ಹಾವಳಿ; ಎರಡು ದಿನದಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ!

ರಾಜ್ಯಾದ್ಯಂತ ನಕಲಿ ನೋಟು ಚಲಾವಣೆ ಹಾವಳಿ ಮತ್ತೆ ಶುರುವಾಗಿದ್ದು, ಕೇವಲ ಎರಡು ದಿನದಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ.

Circulation of fake notes detected across the state: Four FIRs registered rav
Author
First Published Jun 30, 2023, 8:03 AM IST

ಬೆಂಗಳೂರು (ಜೂ.30) ರಾಜ್ಯಾದ್ಯಂತ ನಕಲಿ ನೋಟು ಚಲಾವಣೆ ಹಾವಳಿ ಮತ್ತೆ ಶುರುವಾಗಿದ್ದು, ಕೇವಲ ಎರಡು ದಿನದಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ.

ಉಡುಪಿ , ಮಣಿಪಾಲ , ಹುಬ್ಬಳ್ಳಿ ಹಾಗು ಮಲ್ಲೇಶ್ವರ ಬ್ರಾಂಚ್ ನ ಬ್ಯಾಂಕ್ ಗಳಲ್ಲಿ.100 ರೂಪಾಯಿ ಮುಖಬೆಲೆಯ 30 ನಕಲಿ ನೋಟುಗಳು ಪತ್ತೆಯಾಗಿವೆ. RBI ಗೆ ರಿಮೀಟ್ ಮಾಡುವ ಸಂಧರ್ಭದಲ್ಲಿ ಪತ್ತೆಯಾಗಿರುವ ನಕಲಿ ನೋಟುಗಳು.. ನಕಲಿ ನೋಟುಗಳ ಚಲಾವಣೆಯಾದರೆ ಆಯಾ ಬ್ಯಾಂಕ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗಿದ್ದು,ಈ ಸಂಬಂಧ ಹಲವು ಬ್ಯಾಂಕ್‌ಗಳ ವಿರುದ್ಧ ಒಟ್ಟು ನಾಲ್ಕು ಎಫ್‌ಐ ಆರ್‌ ದಾಖಲಿಸಲಾಗಿದೆ. 

Mangaluru crime: ಮಂಗಳೂರಲ್ಲಿ 4.50 ಲಕ್ಷ ರು.ಗಳ ಖೋಟಾ ನೋಟು ಸಾಗಾಟ ಪತ್ತೆ, ಇಬ್ಬರು ಸೆರೆ

ನಕಲಿ ನೋಟುಗಳ ಪ್ರಕರಣಗಳಿಗೆ ಆಯಾ ಬ್ಯಾಂಕ್‌ಗಳೇ ಹೊಣೆ ಮಾಡಲಾಗಿದ್ದು, ಇದೀಗ ನಕಲಿ ನೋಟುಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬ್ಯಾಂಕ್ ಆಫ್ ಬರೋಡಾ , ಕೆನರಾ ಬ್ಯಾಂಕ್ , ಯುಬಿಐ ಬ್ಯಾಂಕ್  ಮ್ಯಾನೇಜರ್ ಮೇಲೆ ಆರ್‌ಬಿಐ ಮ್ಯಾನೇಜರ್ ಆನಂದ ದೂರು ನೀಡಿದ್ದಾರೆ. ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ಬಳಿಕ ನಕಲಿ ನೋಟು ಜಾಲದ ಹಿಂದೆ ಬಿದ್ದ ಪೊಲೀಸರು. 

Chikkaballapura: 2000 ಸಾವಿರ ಮುಖ ಬೆಲೆಯ ನಕಲಿ‌ ನೋಟು ತಯಾರಿಸುತ್ತಿದ್ದ ಮೂವರು ಅರೆಸ್ಟ್

ಕಳೆದ ವರ್ಷ ನಕಲಿ ನೋಟು ಪತ್ತೆ ಪ್ರಕರಣದ ಬಳಿಕ ಕಟ್ಟುನಿಟ್ಟಿನ ಕ್ರಮದಿಂದ ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿರಲಿಲ್ಲ. ಆದರೆ ಈಗ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ನಕಲಿ ನೋಟು ಪತ್ತೆಯಾಗಿರುವುದು ಶಾಕ್ ನೀಡಿದೆ. 

Follow Us:
Download App:
  • android
  • ios