ಸಿ.ಟಿ. ರವಿ, ಲಕ್ಷ್ಮಿ ಹೆಬ್ಬಾಳ್ಳ‌ರ್ ಕೇಸ್‌: ಸಿಐಡಿ ತನಿಖೆ ಆರಂಭ

ಘಟನಾ ಸ್ಥಳಗಳ ಮಹಜರು ನಡೆಸಲು ಅನುಮತಿ ನೀಡುವಂತೆ ವಿಧಾನಮಂಡಲ ಉಭಯ ಸದನಗಳ ಕಾರ್ಯದರ್ಶಿಗಳಿಗೆ ಸಿಐಡಿ ಅಧಿ ಕಾರಿಗಳು ಪತ್ರ ಬರೆದಿದ್ದಾರೆ. ಇದರ ಜತೆಗೆ ವಿಧಾನ ಮಂಡಲ ಅಧಿವೇಶನದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡುವಂತೆ ಕೋರಿದ್ದಾರೆ. 

CID starts investigation on BJP MLC CT Ravi Minister  Lakshmi Hebbalkar Case grg

ಬೆಂಗಳೂರು(ಡಿ.31):  ಸಚಿವೆ ಲಕ್ಷ್ಮಿ ಹೆಬ್ಬಾಳ್ಳ‌ರ್ ಅವರ ವಿರುದ್ದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ಷೇಪಾ ರ್ಹ ಪದ ಬಳಕೆ ಆರೋಪ ಮತ್ತು ಸಿ.ಟಿ.ರವಿ ಮೇಲೆ ಸಚಿವೆ ಬೆಂಬಲಿಗರ ಹಲ್ಲೆ ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿ ಕಾರಿಗಳು ಇದೀಗ ಆರಂಭಿಸಿದ್ದಾರೆ. 

ಈ ಸಂಬಂಧ ಘಟನಾ ಸ್ಥಳಗಳ ಮಹಜರು ನಡೆಸಲು ಅನುಮತಿ ನೀಡುವಂತೆ ವಿಧಾನಮಂಡಲ ಉಭಯ ಸದನಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಇದರ ಜತೆಗೆ ವಿಧಾನ ಮಂಡಲ ಅಧಿವೇಶನದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡುವಂತೆ ಕೋರಿದ್ದಾರೆ. ಆರಂಭದಲ್ಲಿ ಘಟನಾ ಸ್ಥಳ ಸಳಗಳ ಮಹಜರಿಗೆ ಅನುಮತಿ ಪಡೆಯುವ ಬಗ್ಗೆ ಸಿಐಡಿ ಅಧಿಕಾರಿಗಳು ಜಿಜ್ಞಾಸೆಗೆ ಒಳಗಾಗಿದ್ದರು. ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ತನಿಖೆ ಆರಂಭಿಸಿದ್ದಾರೆ. ಘಟನಾ ಸಳಗಳ ಮಹಜರು ನಡೆಸಲು ಅನುಮತಿ ಕೋರಿ ವಿಧಾನ ಮಂಡಲ ಉಭಯ ಸದನಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 

ಸಿ.ಟಿ.ರವಿ ಪ್ರಕರಣ ಮಹಜರು ಬಸವರಾಜ ಹೊರಟ್ಟಿ ವ್ಯಾಪ್ತಿಗೆ: ಯು.ಟಿ.ಖಾದರ್‌

ಅಸಲಿ ವಿಡಿಯೋ ನೀಡಲು ಮನವಿ

ಉಭಯ ಸದನಗಳ ಕಲಾಪಗಳು ವಿಧಾನಸಭಾ ಕಾರ್ಯಾಲಯದ ಮೂಲಕವೇನೇರಪ್ರಸಾರ ವಾಗಲಿದೆ. ಎರಡೂ ಸದನಗಳ ಕಲಾಪಗಳ ವಿಡಿಯೋಗಳನ್ನು ಚಂದನ ಹಾಗೂ ಖಾಸಗಿ ಸುದ್ದಿವಾಹಿನಿಗಳಿಗೆ ವಿಧಾನಸಭೆಯ ಕಾರ್ಯಾ ಲಯದಿಂದ ಹಂಚಿಕೆ ಮಾಡಲಾಗುತ್ತದೆ. ಇದರ ನೇರ ಪ್ರಸಾರದ ಹಕ್ಕುಗಳನ್ನು ವಿಧಾನಸಭಾ ಕಾರ್ಯಾಲಯವೇ ಹೊಂದಿದೆ. ಹೀಗಾಗಿ ಘಟನೆಗೆ ಸಂಬಂಧಿಸಿದ ಅಸಲಿ ವಿಡಿ ಯೋಗಳನ್ನೂ ನೀಡುವಂತೆ ಪತ್ರದಲ್ಲಿ ಕೋರ 'ಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ: 

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ಡಿ.19ರವರೆಗೆ ಚಳಿಗಾಲದ ಅಧಿವೇಶನ ನಡೆಯಿತು. ಅಧಿವೇ ಶನದ ಕೊನೆಯ ದಿನ ಅಂದರೆ ಡಿ.19ರಂದು ವಿಧಾನ ಪರಿಷತ್‌ನಲ್ಲಿ ಪ್ರತಿಭಟನೆ ಮಾಡುವಾಗ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಸಚಿವ ಲಕ್ಷ್ಮೀ ಹೆಬ್ಬಾಳ್ಳರ್‌ ಹಿರೇಬಾಗೆವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಈ ನಡುವೆ, ವಿಧಾನಸಭೆ ಮೊಗಸಾಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸಿ.ಟಿ.ರವಿ ಪ್ರತಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸಿ.ಟಿ.ರವಿಯನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದಿದ್ದರು. ಇದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆ ರಾಜ್ಯ ಸರ್ಕಾರ ಎರಡೂ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿತ್ತು.

ಕಾಣದ ಕೈ ಸೂಚನೆಯಂತೆ ನಡೆಯುವ ಪೊಲೀಸರು; ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿರಲು ಸಾಧ್ಯವೇ?: ಸಿಟಿ ರವಿ ಪ್ರಶ್ನೆ

ಸಭಾಪತಿ, ಸ್ಪೀಕರ್ ತೀರ್ಮಾನವೇ ಅಂತಿಮ? 

ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ಪತ್ರದ ಬಗ್ಗೆ ಉಭಯ ಸದನಗಳ ಕಾರ್ಯದರ್ಶಿಗಳು ಸಭಾಪತಿ ಮತ್ತು ಸ್ಪೀಕ‌ರ್ ಗಮನಕ್ಕೆ ತರಬಹುದು. ಆದರೆ, ಘಟನಾ ಸ್ಥಳಗಳ ಮಹಜರಿಗೆ ಅನುಮತಿ ನೀಡುವುದು, ಅಧಿವೇಶನದ ಅಸಲಿ ವಿಡಿಯೋ, ಆಡಿಯೋ ನೀಡುವ ಬಗ್ಗೆ ಸಭಾಪತಿ, ಸ್ಪೀಕರ್ ಅವರೇ ಅಂತಿಮ ತೀರ್ಮಾನ ಕೈಗೊಳ್ಳಬೇಕು. 

ರಾಜ್ಯಪಾಲರಿಗೆ ರವಿ ದೂರು ಸಲ್ಲಿಕೆ 

ಬೆಂಗಳೂರು: ಬೆಳಗಾವಿ ಅಧಿವೇಶನ ಬಳಿಕ ತಮ್ಮನ್ನು ಇಡೀ ರಾತ್ರಿ ಪೊಲೀಸರು ಅಮಾನವೀಯವಾಗಿ ನಡೆಸಿ ಕೊಂಡಿದ್ದು, ತಮ್ಮ ಹಕ್ಕು ಚ್ಯುತಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಅಮಾನತು ಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ದೂರು ಸಲ್ಲಿಸಿದ್ದಾರೆ. 

Latest Videos
Follow Us:
Download App:
  • android
  • ios