ಪಿಎಸ್‌ಐ ನೇಮಕಾತಿ ಅಕ್ರಮ: 545 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್‌

*  ಓಎಂಆರ್‌ ಶೀಟ್‌, ಹಾಲ್‌ ಟಿಕೆಟ್‌ ಸಹಿತ ವಿಚಾರಣೆಗೆ ಹಾಜರಾಗಲು ಸೂಚನೆ
*  ಓಎಂಆರ್‌ ಶೀಟ್‌ ತಾಳೆ ಹಾಕಿ ಅಕ್ರಮ ಪತ್ತೆಗೆ ಕ್ರಮ
*  ದಿವ್ಯಾ ಹಾಗರಗಿ ಶರಣಾಗತಿ ಸಾಧ್ಯತೆ?

CID Notice to 545 Candidates on PSI Recruitment Scam in Karnataka grg

ಯಾದಗಿರಿ(ಏ.20):  545 ಪಿಎಸೈ (ಸಿವಿಲ್‌) ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ತೀವ್ರಗತಿಯ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು(CID Poice), ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸಿದ ಅಭ್ಯರ್ಥಿಗಳಿಗೆ ಹಾಲ್‌ ಟಿಕೆಟ್‌ ಹಾಗೂ ಒಎಂಆರ್‌ ಶೀಟ್‌ ಜೊತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿ​ದೆ.

ಒಎಂಆರ್‌ ಪ್ರತಿ ಮತ್ತು ಅಭ್ಯ​ರ್ಥಿ​ಗಳ ಬಳಿ ಇರುವ ನಕ​ಲು​ಪ್ರ​ತಿ​ಯನ್ನು ಸಿಐಡಿ ತಾಳೆ ಹಾಕ​ಲಿದ್ದು, ಈ ಹಿನ್ನೆ​ಲೆ​ಯಲ್ಲಿ ಆಯ್ಕೆ​ಯಾದ ಅಭ್ಯ​ರ್ಥಿ​ಗ​ಳು ಬೆಂಗಳೂರಿನ ಸಿಐಡಿ ಕಚೇರಿಯ ಅನೆಕ್ಸ್‌-2 ಕಟ್ಟಡದ ರೂಂ ನಂ. 7ರಲ್ಲಿ ತನಿಖಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಿ, ಈ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಸಿಐಡಿ ಪೊಲೀಸ್‌ ಉಪಾಧೀಕ್ಷಕ ಪಿ. ನರಸಿಂಹಮೂರ್ತಿ ಆದೇಶಿಸಿದ್ದಾರೆ. ಈ ಎಲ್ಲ 545 ಅಭ್ಯರ್ಥಿಗಳ ಹಂತ ಹಂತವಾಗಿ ಈ ವಿಚಾರಣೆ ನಡೆಯಲಿದ್ದು, ಏ.20 ರಿಂದ ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಹಾಜರಿಗೆ ಸೂಚಿಸಿದೆ.

Yadgir: ಎಸ್‌ಐ ಪರೀಕ್ಷೆ ಗೋಲ್‌ಮಾಲ್‌: ಮತ್ತೆ 6 ಆರೋಪಿಗಳ ಸೆರೆ

ಅಕ್ರಮಕಾರರಿಗೆ ಬಂಧನ ಭೀತಿ:

ಅಭ್ಯರ್ಥಿಗಳು(Candidates) ಪರೀಕ್ಷೆ(Exam) ಬರೆದು ಒಎಂಆರ್‌ ಶೀಟ್‌(OMR Sheet) ಮೇಲ್ವಿಚಾರಕರ ಕೈಗೆ ಕೊಟ್ಟು ಹೋಗುವಾಗÜ ಅವರ ಬಳಿ ಒಂದು ಕಾರ್ಬನ್‌ ಪ್ರತಿ ಇರುತ್ತದೆ. ಆದರೆ ಅಕ್ರಮ(Illegal) ನಡೆ​ದಿ​ರು​ವ​ವ​ರ ಒಎಂಆರ್‌ ಶೀಟ್‌​ನಲ್ಲಿ ಮೇಲ್ವಿ​ಚಾ​ರ​ಕ​ರು ಉಳಿದ ಉತ್ತರಗಳನ್ನು ಟಿಕ್‌ ಮಾಡುತ್ತಾರೆ. ಆದರೆ ಅದು ಅಭ್ಯರ್ಥಿ ಬಳಿ ಇರುವ ಒಎಂಆರ್‌ ನಕಲು ಪ್ರತಿ​ಯ​ಲ್ಲಿ ಗೋಚರವಾಗುವುದಿಲ್ಲ. ಈ ವ್ಯತ್ಯಾಸ ಅನ್ಯರಿಗ್ಯಾರಿಗೂ ಗೊತ್ತಾಗಬಾರದೆಂದೆ ಅಕ್ರಮದ ರೂವಾರಿಗಳು ಅಭ್ಯರ್ಥಿ ಬಳಿಯ ಕಾರ್ಬನ್‌ ಶೀಟ್‌ನ್ನು ಪರೀಕ್ಷೆ ಮುಗಿಯುತ್ತಿದ್ದಂತೆಯೇ ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಆದರೆ ಈ ಪ್ರಕ​ರ​ಣ​ದಲ್ಲಿ ಬಂಧಿ​ಯಾ​ಗಿ​ರುವ ಸೇಡಂನ ವೀರೇಶ ಎನ್ನುವ ಅಭ್ಯರ್ಥಿಯ ಪ್ರತಿ ಗಮ​ನಿ​ಸಿದ್ದ ಇನ್ನೊಬ್ಬ ಅಭ್ಯರ್ಥಿ ಅದರ ಫೋಟೋ ತೆಗೆದುಕೊಂಡು ಕೇವಲ ಇಪ್ಪತ್ತೊಂದು ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ ಹೇಗೆ ಆಯ್ಕೆ ಆದ ಎಂದು ಆಕ್ಷೇಪ ಎsತ್ತಿ ಗೃಹ ಸಚಿವರಿಗೆ ಭೇಟಿ ಮಾಡಿ ದೂರು ಸಲ್ಲಿಸಿದ್ದ. ಹೀಗಾಗಿ ಸಿಐಡಿ ಎಲ್ಲರ ಒಎಂಆರ್‌ ನಕ​ಲುಪ್ರತಿ ಪರಿ​ಶೀ​ಲಿ​ಸಲು ಮುಂದಾ​ಗಿ​ದೆ.

ದಿವ್ಯಾ ಹಾಗರಗಿ ಶರಣಾಗತಿ ಸಾಧ್ಯತೆ?

ಬೆಂಗಳೂರು: ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪಿಎಸೈ ನೇಮಕ(PSI Scam) ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಇಷ್ಟರಲ್ಲೇ ಸಿಐಡಿ ಪೊಲೀಸರೆದುರು ಶರಣಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹಿಸಿ ಈಗಾಗಲೇ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದು ಈ ಮುಜುಗರದ ಸನ್ನಿವೇಶ ಎದುರಾಗಬಾರದೆಂಬ ಕಾರಣಕ್ಕೆ ಕೆಲವರು ಶರಣಾಗುವಂತೆ ದಿವ್ಯಾ ಹಾಗರಗಿಯ ಮನವೋಲೈಕೆಯ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಲಬುರಗಿಯಲ್ಲಿ ಏ.22ರಂದು ಬಿಜೆಪಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏ.21ರಂದೇ ಕಲಬುರಗಿಗೆ ಬರಲಿದ್ದಾರೆ. ದಿವ್ಯ ಬಂಧನ ವಿಳಂಬವಾದಲ್ಲಿ ಅಂದು ಕಲಬುರಗಿಗೆ ಬರುತ್ತಿರುವ ಸಿಎಂ ಬೊಮ್ಮಾಯಿ ಅವರನ್ನು ಘೇರಾವ್‌ ಹಾಕಿ ಪ್ರತಿಭಟಿಸುವುದಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಮಾಜಿ ಸಚಿವ ಶರಣ್‌ಪ್ರಕಾಶ್‌ ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.

PSI ನೇಮಕಾತಿ ಅಕ್ರಮ: ತನಿಖೆಗೆ ಮುನ್ನವೇ ಎಳ್ಳು ನೀರು ಬಿಟ್ರಾ ಗೃಹ ಸಚಿವ ಜ್ಞಾನೇಂದ್ರ?

ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಹೋಗಿ ಉಪಾಹಾರ ಮಾಡಿ ಬಂದವರು. ದಿವ್ಯ ಬಂಧನ ವಿಳಂಬಕ್ಕೆ ಬಿಜೆಪಿ ಮುಖಂಡರ ಕೈವಾಡವಿದೆ ಎಂಬ ಗುಮಾನಿ ಇದೆ ಎಂದು ಆರೋಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷಕ್ಕೆ ಮಜುಗರದ ಸನ್ನಿವೇಶ ಎದುರಾಗಬಾರದೆಂದು ಕೆಲವರು ಶರಣಾಗುವಂತೆ ಮನವೊಲೈಕೆಯ ರಹಸ್ಯ ಕಾರ್ಯಾಚರಣೆಗಿಳಿದಿದ್ದಾರೆ ಎಂದು ಹೆಸರೇಳಲಿಚ್ಛಿಸದ ಪೊಲೀಸ್‌ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈಗ ‘ಕೈ’ಗೆ ತಿರುಗೇಟಿಗೆ ಸಿದ್ಧತೆ?:

ಇನ್ನು, ಈ ಅಕ್ರಮದಲ್ಲಿ ಪಕ್ಷಾತೀತ ಮಧ್ಯವರ್ತಿಗಳ ಹಾವಳಿಯಿದ್ದು, ದಿವ್ಯಾ ಹಾಗರಗಿ ಪ್ರಕರಣದಿಂದ ಭಾರಿ ಮಜುಗರ ಅನುಭವಿಸಿದ ಬಿಜೆಪಿ, ಇದೀಗ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಆ ಪಕ್ಷದಲ್ಲಿನ ‘ಅಕ್ರಮ’ಕಾರರ ಹೆಸರುಗಳ ಶೋಧಕ್ಕೆ ಮುಂದಾಗಿದೆ. ಈ ಅಕ್ರಮದಲ್ಲಿ ಕೇಳಿಬರುತ್ತಿರುವ ಕೆಲವು ರೂವಾರಿಗಳ ಸಂಬಂಧಿಕರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಯಕಟ್ಟಿನ ಸ್ಥಳಗಳಲ್ಲಿದ್ದಾರೆ. ಹೀಗಾಗಿ ಈಗ ಅವರ ವಿರುದ್ಧದ ಸಾಕ್ಷ್ಯಗಳ ಸಂಗ್ರಹಕ್ಕೆ ಸ್ಥಳೀಯ ಬಿಜೆಪಿ ವಲಯದಲ್ಲಿ ಚುರುಕಿನ ಬೆಳವಣಿಗೆಗಳು ನಡೆದಿವೆ. ಮುಂಬರುವ ದಿನಗಳಲ್ಲಿ ಎರಡೂ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸಮರದ ಲಕ್ಷಣಗಳು ಗೋಚರಿಸತೊಡಗಿದ್ದರೆ, ಈ ಬೆಳವಣಿಗೆಗಳು ಸಿಐಡಿ ತನಿಖೆಗೆ ಮತ್ತಷ್ಟೂ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಗುಂಯ್‌ಗುಡುತ್ತಿವೆ.
 

Latest Videos
Follow Us:
Download App:
  • android
  • ios