Asianet Suvarna News Asianet Suvarna News

ನಾಳೆ ಕೃಮಾರಕೃಪ ರಸ್ತೇಲಿ ಚಿತ್ರಸಂತೆ: ಸಂಚಾರ ಮಾರ್ಗ ಬದಲಾವಣೆ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಚಿತ್ರಕಲಾ ಪರಿಷತ್ತಿನ 21ನೇ ಚಿತ್ರಸಂತೆ ನಾಳೆ(ಜ.7ರಂದು) ಕೃಮಾರಕೃಪ ರಸ್ತೆಯಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗಿದ್ದು, ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 1,500 ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಸಾವಿರಾರು ಚಿತ್ರಕಲೆಗಳು ಪ್ರದರ್ಶನಗೊಳ್ಳಲಿವೆ.

Chitrasante by Chitrakala Parishad tomorrow Here is the bus traffic information at Bengaluru rav
Author
First Published Jan 6, 2024, 9:13 AM IST

ಬೆಂಗಳೂರು (ಜ.6): ಕರ್ನಾಟಕ ಚಿತ್ರಕಲಾ ಪರಿಷತ್ತಿನ 21ನೇ ಚಿತ್ರಸಂತೆ ನಾಳೆ(ಜ.7ರಂದು) ಕೃಮಾರಕೃಪ ರಸ್ತೆಯಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗಿದ್ದು, ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 1,500 ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಸಾವಿರಾರು ಚಿತ್ರಕಲೆಗಳು ಪ್ರದರ್ಶನಗೊಳ್ಳಲಿವೆ.

ಚಿತ್ರಸಂತೆಯನ್ನ ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆ ಚಿತ್ರಸಂತೆ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ  ಮೆಟ್ರೋ ಫೀಡರ್‌ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ. ಬೆಳಗ್ಗೆ  8 ಗಂಟೆಯಿಂದ ರಾತ್ರಿ 8  ಗಂಟೆಯವರೆಗೆ ವಿಶೇಷ ಮೆಟ್ರೋ ಫೀಡರ್ ಬಸ್ ಸೇವೆ ನೀಡಲಿದ್ದು, ಟಿಕೆಟ್ ದರ ರೂ.15.00 ವಿಶೇಷ ದರ (Flat Fare) ಗಳೊಂದಿಗೆ ಮೆಟ್ರೋ ಫೀಡರ್‌ ಬಸ್ ಕಾರ್ಯಚರಣೆ ನಡೆಸಲಿವೆ.

Chitra Santhe 2023: ಕಲಾಪ್ರೇಮಿಗಳಿಂದ ತುಂಬಿ ತುಳುಕಿದ ‘ಚಿತ್ರಸಂತೆ’

ಕೆಂಪೇಗೌಡ ಬಸ್ ನಿಲ್ದಾಣ-ವಿಧಾನಸೌಧ-ಆನಂದರಾವ್‌ ಸರ್ಕಲ್‌-ಶಿವಾನಂದ ಸ್ಟೋರ್ಸ. 4    ಬಸ್ ಕಾರ್ಯಚರಣೆಗೊಳ್ಳಲಿದ್ದು, ಪ್ರತಿ 10 ನಿಮಿಷಕ್ಕೊಂದರಂತೆ ಸಂಚರಿಸಲಿವೆ 

ರಾಷ್ಟ್ರಮಟ್ಟಕ್ಕೆ ಚಿತ್ರಸಂತೆ ಬೆಳೆಸಲು ಸಹಕಾರ: ಸಿಎಂ ಘೋಷಣೆ

ಮಂತ್ರಿ ಮಾಲ್‌ ಮೆಟ್ರೋ ನಿಲ್ದಾಣ-ವಿಧಾನಸೌಧ ಸೆಂಟ್ರಲ್‌ ಟಾಕೀಸ್‌, ಲಿಂಕ್‌ ರಸ್ತೆ, ಶಿವಾನಂದ ಸ್ಟೋರ್ಸ್ 4 ಬಿಎಂಟಿಸಿ ಬಸ್ ಗಳ ಕಾರ್ಯಚರಣೆ ಪ್ರತಿ 10 ನಿಮಿಷಕ್ಕೊಂದರಂತೆ ಸಂಚರಿಸಲಿರುವ ಬಸ್ ಗಳು

300 ಮಳಿಗೆಗಳು!

ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್‌ವರೆಗೆ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿ, ಶಿವಾನಂದ ವೃತ್ತದ ಕೆಳಭಾಗದಲ್ಲಿ ಹಾಗೂ ಭಾರತ ಸೇವಾ ದಳ ಆವರಣದಲ್ಲಿಯೂ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಹೆಚ್ಚು ಕಲಾವಿದರು ಭಾಗವಹಿಸುತ್ತಿರುವ ಕಾರಣ 1,200 ಮಳಿಗೆಗಳ ಜೊತೆಗೆ ಹೆಚ್ಚುವರಿಯಾಗಿ 300 ಮಳಿಗೆ ಹಾಕಲಾಗುತ್ತದೆ’ ಎಂದು ತಿಳಿಸಿದರು.

ಕಲಾವಿದರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ:

‘₹100ರಿಂದ ಹಿಡಿದು ಲಕ್ಷಾಂತರ ರುಪಾಯಿ ಮೌಲ್ಯದ ಕಲೆಗಳ ಪ್ರದರ್ಶನ ಇರಲಿದೆ. ಕಲಾವಿದರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದ್ದು, ಪರಿಷತ್ತು ಯಾವುದೇ ಕಮಿಷನ್ ಪಡೆಯುವುದಿಲ್ಲ. ಹೊರ ರಾಜ್ಯ ಮತ್ತು ಊರುಗಳಿಂದ ಬರುವ 400ಕ್ಕೂ ಹೆಚ್ಚು ಕಲಾವಿದರಿಗೆ ಪರಿಷತ್ತಿನಿಂದಲೇ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಾವಿದರು ಮತ್ತು ಸಾರ್ವಜನಿಕರಿಗಾಗಿ ಕುಡಿಯುವ ನೀರು, ಅಗತ್ಯ ಶೌಚಗೃಹಗಳು, ಮೊಬೈಲ್ ಟಾಯ್ಲೆಟ್‌ಗಳನ್ನು ಇರಿಸಲಾಗುತ್ತದೆ.

ಚಿತ್ರಸಂತೆ ವಿಶೇಷಗಳು

ತೊಗಲು ಗೊಂಬೆ ಹಾಗೂ ಮೈಸೂರು ಕಲಾಕೃತಿಗಳ ಪ್ರದರ್ಶನ, ರಾಜಸ್ಥಾನಿ, ಮಧುಬನಿ ಶೈಲಿಯ ತೈಲ ಮತ್ತು ಜಲವರ್ಣಗಳ ಕಲಾಕೃತಿಗಳು ಲಭ್ಯ ಇರುತ್ತವೆ. ವ್ಯಂಗ್ಯಚಿತ್ರಗಳ ಪ್ರದರ್ಶನವು ಇರಲಿದೆ. ಇವಲ್ಲದೇ ಅಕ್ರಿಲಿಕ್, ಕೊಲಾಜ್, ಅಥೋಗ್ರಾಫ್‌ ಮುಂತಾದ ಪ್ರಕಾರಗಳ ಕಲಾಕೃತಿಗಳು ಇವೆ. ಕುಂಚ, ಪೆನ್ಸಿಲ್‌ಗಳಿಂದ ಕಲಾರಸಿಕರ ಚಿತ್ರಗಳನ್ನು ಸ್ಥಳದಲ್ಲೇ ಕಲಾವಿದರು ಬಿಡಿಸಿಕೊಡುತ್ತಾರೆ.

ಇಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ

ಇಂದು (ಜ.6ರಂದು) ಗೃಹ ಸಚಿವ ಜಿ.ಪರಮೇಶ್ವರ್ ಅವರು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿಗೆ ಪ್ರೊ.ವಸುಧಾ ತೋಜುರ್, ಎಂ.ಆರ್ಯಮೂರ್ತಿ ಪ್ರಶಸ್ತಿಗೆ ಪ್ರೊ.ಬಿ.ವಿ.ಸುರೇಶ್, ಡಿ.ದೇವರಾಜ ಅರಸು ಪ್ರಶಸ್ತಿಗೆ ಎಲ್.ಎನ್.ತಲ್ಲೂರ್ ಹಾಗೂ ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿಗೆ ಬಿ.ಬಿ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ₹50,000 ನಗದು ಮತ್ತು ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.

ಸೇತುವೆ ಕೆಳಗೆ ಶಾಶ್ವತ ಗ್ಯಾಲರಿ

ಶಿವಾನಂದ ವೃತ್ತದಲ್ಲಿರುವ ಸ್ಟೀಲ್ ಬ್ರಿಡ್ಜ್ ಕೆಳಗೆ ಶಾಶ್ವತವಾಗಿ ಕಲಾ ಪ್ರದರ್ಶನ ಗ್ಯಾಲರಿ ಸ್ಥಾಪಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಬ್ರಿಡ್ಜ್ ಕೆಳಗೆ ಗಾಜಿನ ಗೋಡೆ ಅಳವಡಿಸಿ ಸಂಪೂರ್ಣವಾಗಿ ಚಿತ್ರಕಲಾ ಗ್ಯಾಲರಿ ಸ್ಥಾಪಿಸಲಾಗುತ್ತದೆ.

Follow Us:
Download App:
  • android
  • ios