ಉಡುಪಿ, (ನ.15): ಇಲ್ಲಿನ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ರಕ್ಷಿಸಿದ್ದಾರೆ.

ಪದವೀಧರನಾಗಿರುವ ಚಿತ್ರದುರ್ಗದ ಈ ಯುವಕ ಉದ್ಯೋಗ ದೊರೆಯದೇ ಮನನೊಂದಿದ್ದ. ಈ ಸಂದರ್ಭದಲ್ಲಿ ಸಿನೆಮಾ ನೋಡಿ ತನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ, ಉದ್ಯೋಗ ಸಿಗುತ್ತದೆ ಎಂದು ಭಾವಿಸಿ, ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಾ ಭಿಕ್ಷೆ ಭೇಡಿ ತಿನ್ನುತಿದ್ದ

ಯುವಕ ಪರಿಸ್ಥಿತಿ ಕಂಡು  ವಿಶು ಶೆಟ್ಟಿ ಅವರು ಈ ರೀತಿ ಭಿಕ್ಷಾಟನೆಯಿಂದ ಕಷ್ಟ ಪರಿಹಾರವಾಗುವುದಿಲ್ಲ ಮನವರಿಕೆ ಮಾಡಿದ್ದಾರೆ. ಅಲ್ಲದೇ ಆಸ್ಪತ್ರೆಗೆ ದಾಖಲಿಸಿ ನಂತರ ಹೆತ್ತವರಿಗೆ ಮಡಿಲು ಸೇರಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಪ್ಲಾಸ್ಟಿಕ್‌ ಮನೆ ನಿರ್ಮಾಣ: ಚಿಂದಿ ಆಯುವ ಮಹಿಳೆಗೆ ಹಸ್ತಾಂತರ

ವಿಶು ಶೆಟ್ಟಿ ಆತನಿಗೆ ಈ ರೀತಿ ಭಿಕ್ಷಾಟನೆಯಿಂದ ಕಷ್ಟ ಪರಿಹಾರವಾಗುವುದಿಲ್ಲ ಮನವರಿಕೆ ಮಾಡಿ, ಆತನ ಹೆತ್ತವರ ವಿಳಾಸ ಪಡೆದು, ಅವರಿಗೆ ಮಾಹಿತಿ  ನೀಡಿದರು. ಅವರು ಬಂದು ಹೇಳದೇ ಕೇಳದೇ ಮಗ ಮನೆ  ಬಿಟ್ಟಿದ್ದರಿಂದ ನೊಂದ ಮನೆಯವರು ಈ ಬಾರಿ ದೀಪಾವಳಿ ಹಬ್ಬವನ್ನೂ  ಆಚರಿಸುವ ಮನಸ್ಥಿತಿಯಲ್ಲಿರಲಿಲ್ಲ. 

ಇದೀಗ ದೀಪಾವಳಿಯೆಂದೇ ಮಗ ಸಿಕ್ಕಿದ್ದು ತಮ್ಮ ಪಾಲಿಗೆ ನಿಜವಾದ ದೀಪಾವಳಿಯಾಗಿದೆ, ಮಗನನ್ನು ರಕ್ಷಿಸಿ ಆರೈಕೆ ಮಾಡಿದ ಇಬ್ಬರು ಸಮಾಜ ಸೇವಕರು ನಮ್ಮ ಪಾಲಿನ ಆಪತ್ಬಾಂಧವರು ಎಂದು ಹಾರೈಸಿ ಚಿತ್ರದುರ್ಗಕ್ಕೆ ಮಗನೊಂದಿಗೆ ಊರಿಗೆ ಹಿಂತಿರುಗಿದ್ದಾರೆ.