Asianet Suvarna News Asianet Suvarna News

POCSO Case ಚಿತ್ರದುರ್ಗ ಮುರುಘಾ ಶ್ರೀಗಳಿಗೆ ಶಾಕ್ ಕೊಟ್ಟ ಕೋರ್ಟ್, ಶರಣರಿಗೆ ಜೈಲೇ ಗತಿ..!

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

 Chitradurga session court Rejects Muruga Mutt Seer Bail plea In POCSO Case rbj
Author
First Published Sep 5, 2022, 11:19 AM IST

ಚಿತ್ರದುರ್ಗ, (ಸೆಪ್ಟೆಂಬರ್. 05): ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ನ್ಯಾಯಾಲಯ ನ್ಯಾಯಾಂಗ(Muruga Mutt Swamiji Judicial Custody )  ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. 

ಇಂದು(ಸೋಮವಾರ) ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಶ್ರೀಗಳನ್ನು ಪೊಲೀಸ್ರು ನ್ಯಾಯಾಲಯಕ್ಕೆ ಹಾಜರುಪಡಿದರು.ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮುರುಘಾ ಶರಣರಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Murugha Mutt ಪ್ರತಿ ಸ್ಥಳದಲ್ಲೂ ಪೊಲೀಸರ ಮಹಜರು!

 ಪೊಲೀಸರು ಮತ್ತೆ ಸ್ವಾಮೀಜಿಯನ್ನು ಮತ್ತೆ ಕಸ್ಟಡಿಗೆ ಕೇಳಿಲ್ಲ. ಇದರಿಂದ ಕೋರ್ಟ್, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 9 ದಿನ  ನ್ಯಾಯಾಂಗ ಬಂಧನಕ್ಕೆ ನೀಡಿ ತೀರ್ಪು ನೀಡಿದ್ದು, ಮುರುಘಾ ಶ್ರೀಗಳಿಗೆ  ಸೆಪ್ಟೆಂಬರ್ 14ರವರೆಗೆ ಜೈಲೇ ಗತಿ.

ಮುರುಘಾ ಶ್ರೀ ಜೈಲಿಗೆ ಶಿಫ್ಟ್
ಕೋರ್ಟ್ 9ದಿನ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪೊಲೀಸರು, ಮುರುಘಾ ಶರಣರನ್ನು ಬಿಗಿ ಬಂದೋಬಸ್ತಿನಲ್ಲಿ ಜೈಲಿಗೆ ಶಿಫ್ಟ್ ಮಾಡಿದರು. ಹಳೇ ಬೆಂಗಳೂರು ರಸ್ತೆಯಲ್ಲಿರುವ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದ್ದು, ಜಿಲ್ಲಾ ಕಾರಾಗೃಹ ಮುಂಭಾಗ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.

ಮಠ ಜಾಲಾಡಿದ ಪೊಲೀಸ್
ಯೆಸ್...ನ್ಯಾಯಾಲಯದಲ್ಲಿ ಅನುಮತಿಪಡೆದುಕೊಂಡು ನಾಲ್ಕು ದಿನ ತಮ್ಮ ಕಸ್ಟಡಿಗೆ ತೆಗೆದುಕೊಂಡ ಪೊಲೀಸ್ರು, ಶ್ರೀಗಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸ್ಥಳ ಮಹಜರ್‌ಗಾಗಿ ಪೊಲೀಸ್ರು ಇಡೀ ಮಠವನ್ನೇ ಜಾಲಾಡಿದ್ದಾರೆ. 

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳ ಪ್ರಕರಣದಲ್ಲಿ ಪೊಲೀಸರು ಭಾನುವಾರ ಮಠದಲ್ಲಿ ಸ್ಥಳಗಳ ಮಹಜರು ಮಾಡಿದ್ದಾರೆ. ಸಂತ್ರಸ್ತ ಬಾಲಕಿಯರು ಸೂಚಿಸಿದ್ದ ಪ್ರತೀ ಸ್ಥಳದಲ್ಲೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸ್ವಾಮೀಜಿ ಕೊಠಡಿ, ಸ್ನಾನದ ಕೋಣೆ, ಕೊಠಡಿ ಮುಂಭಾಗ, ಸ್ಕೈಯ್ ವಾಕ್ ಸಮೀಪ ಹಾಗೂ ಹಾಸ್ಟೆಲ್ ಬಳಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.

ಮಹಜರು ವೇಳೆ ಕೃತ್ಯಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಕೊಠಡಿಯಲ್ಲಿ ಇದ್ದ ಕೆಲವು ಬಟ್ಟೆಗಳನ್ನ ಪೊಲೀಸರು ಈ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಅದರೊಂದಿಗೆ ಮಠದ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಮುರುಘಾ ಶ್ರೀಗಳ ಕೋಣೆಗೆ ಯಾರೆಲ್ಲಾ ಹೋಗುತ್ತಿದ್ದರು. ಅವರ ಕೋಣೆಗೆ ಯಾರಿಗೆಲ್ಲಾ ಪ್ರವೇಶವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ಕೇಳಿ ಪಡೆದುಕೊಂಡಿದ್ದಾರೆ. ಕೋಣೆಗೆ ಯಾರಿಗೆಲ್ಲ ಅವಕಾಶ ಇತ್ತು, ಬಾಲಕಿಯರು ಹೋಗುತ್ತದ್ದರೆ,  ಹೋಗಿದ್ದರೆ, ಯಾರು ಕರ್ಕೊಂಡು ಹೋಗುತ್ತಿದ್ದರ ಎನ್ನುವುದರ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಏನಿದು ಪ್ರಕರಣ:?
ಚಿತ್ರದುರ್ಗದ ಮುರುಘಾ ಮಠದ (Murugha Mutt) ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿರುವ ಹಲವು ಅಪ್ರಾಪ್ತ ಬಾಲಕಿಯರಿಗೆ ಸ್ವಾಮೀಜಿಗಳಾದ ಮುರುಘಾ ಶ್ರೀ ಲೈಂಗಿಕವಾಗಿ ದೌರ್ಜನ್ಯ (Sexual Assault) ಮಾಡಿದ್ದರು ಎಂದು ಆರೋಪಿಸಿ, ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲಿದ್ದ ಒಡನಾಡಿ ಸೇವಾ ಸಂಸ್ಥೆಯ ಸಹಾಯ ಪಡೆದು ದೂರು ನೀಡಿದ್ದರು. ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿ ನಿಲಯದಲ್ಲಿರುವ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗುವಂತೆ ಮಹಿಳಾ ವಾರ್ಡನ್‌ ಅವರೇ ನಮ್ಮನ್ನು ಅವರ ಕೋಣೆಗೆ ಕಳುಹಿಸುತ್ತಿದ್ದರು. ಅವರ ಕೋಣೆಗೆ ಹೋದರೆ, ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮಠದ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದರು. ಇದಕ್ಕಾಗಿ ಒಡನಾಡಿ ಸಂಸ್ಥೆಯ ಸಹಾಯ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲಿಯೇ ಸ್ವಾಮೀಜಿ ವಿರುದ್ಧ ಪೋಕ್ಸೋ (Pocso) ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣ ರಾಖಲಾಗಿ ಹಲವು ದಿನಗಳಾದರೂ ಪೊಲೀಸರು ಸ್ವಾಮೀಜಿಯವರನ್ನು ಬಂಧನ ಮಾಡಿರಲಿಲ್ಲ. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ರಾಜ್ಯಾದ್ಯಂತ ನಡೆದಿದ್ದರು. ಇದರಿಂದಾಗಿ ಗುರುವಾರ ತಡರಾತ್ರಿ ಮುರುಘಾ ಮಠದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆಯ ವೇಳೆಗೆ ಜೈಲಿನಲ್ಲೇ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Follow Us:
Download App:
  • android
  • ios