Asianet Suvarna News Asianet Suvarna News

ರೇಣುಕಾಸ್ವಾಮಿ ಎದೆ,ವೃಷಣ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದ ದರ್ಶನ್!

ಚಿತ್ರದುರ್ಗದ ರೇಣುಕಾಸ್ವಾಮಿ ಎದೆ ಹಾಗೂ ವೃಷಣದ ಮೇಲೆ ಕಾಲಿಟ್ಟು ದರ್ಶನ್ ಕ್ರೌರ್ಯ ಮೆರೆದಿದ್ದ ಸಂಗತಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ..

chitradurga renuka swamy murder case chargesheet filed against actor darshan rav
Author
First Published Sep 5, 2024, 8:09 AM IST | Last Updated Sep 5, 2024, 8:09 AM IST

ಬೆಂಗಳೂರು (ಸೆ.5): ಚಿತ್ರದುರ್ಗದ ರೇಣುಕಾಸ್ವಾಮಿ ಎದೆ ಹಾಗೂ ವೃಷಣದ ಮೇಲೆ ಕಾಲಿಟ್ಟು ದರ್ಶನ್ ಕ್ರೌರ್ಯ ಮೆರೆದಿದ್ದ ಸಂಗತಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ..

ತನ್ನ ಆಪ್ತೆ ಪವಿತ್ರಾಗೌಡ ಅವರಿಗೆ ಮರ್ಮಾಂಗದ ಪೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ ಸಂಗತಿ ತಿಳಿದು ಸಿಟ್ಟಾಗಿದ್ದ ದರ್ಶನ್‌, ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ರೋಷಾವೇಷ ತೋರಿಸಿದ್ದರು. ಆ ವೇಳೆ ದರ್ಶನ್‌ ಆತನ ಮರ್ಮಾಂಗಕ್ಕೆ ಕಾಲಿನಿಂದ ಒದ್ದಿದ್ದನು ನಂತರ ವೃಷಣ ಹಾಗೂ ಎದೆ ಮೇಲೆ ಕಾಲಿಟ್ಟು ಹಿಂಸಿಸಿದ್ದರು. ಇದರಿಂದ ಆತನ ವೃಷಣಗಳು ನಜ್ಜಾಗಿದ್ದವು. ದರ್ಶನ್ ಹಲ್ಲೆಯಿಂದ ಪ್ರಚೋದನೆಗೊಳಗಾಗಿರುವ ಅವರ ಸಹಚರರು, ರೇಣುಕಾಸ್ವಾಮಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಶೆಡ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ರೇಣುಕಾಸ್ವಾಮಿಯನ್ನು ಗುದ್ದಿಸಿದ್ದರಿಂದ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದನು ಈ ವೇಳೆ ಚಿಮ್ಮಿದ ರಕ್ತ ದರ್ಶನ್ ಸೇರಿದಂತೆ ಆರೋಪಿಗಳ ಬಟ್ಟೆಗಳಿಗೆ ಅಂಟಿಕೊಂಡಿತು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.

3991 ಪುಟಗಳ ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಗ್ಯಾಂಗ್ ನಡೆಸಿದ ಕರಾಳ ಕೃತ್ಯ ಬಯಲು!

ಚಪ್ಪಲಿಯಲ್ಲಿ ಹೊಡೆದಿದ್ದ ಪವಿತ್ರಾಗೌಡ:

ತನಗೆ ಆಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಕಂಡ ಕೂಡಲೇ ಆಕ್ರೋಶಗೊಂಡು ಆತನಿಗೆ ತಾನು ಧರಿಸಿದ್ದ ಚಪ್ಪಲಿಯಿಂದ ಪವಿತ್ರಾಗೌಡ ಹೊಡೆದಿದ್ದಳು. ಈ ಚಪ್ಪಲಿಗಳಿಗೆ ಸಹ ರಕ್ತದ ಕಲೆಗಳು ಅಂಟಿದ್ದವು. ಅಲ್ಲದೆ ಪವಿತ್ರಾಗೌಡಳಿಂದ ಚಪ್ಪಲಿ ಕಸಿದುಕೊಂಡು ರೇಣುಕಾಸ್ವಾಮಿಗೆ ದರ್ಶನ್ ಹೊಡೆದಿದ್ದರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ರಾಮ ಕೂಡ ನಾಲ್ಕ್‌ ಕೊಲೆ ಮಾಡಿದ್ದ, ದರ್ಶನ್‌ ಮಾಡಿದ್ರೆ ತಪ್ಪೇನು: ಕಿಲ್ಲಿಂಗ್‌ ಸ್ಟಾರ್‌ ಪರ ಮಾತನಾಡಿದ ಪುಂಗ ಉಮೇಶ್‌!

ಚಿತ್ರದುರ್ಗದಿಂದ ದಾರಿಯುದ್ದಕ್ಕೂ ಹಲ್ಲೆ:

ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್‌ಗೆ ಕರೆಯುವ ದಾರಿಯುದ್ದಕ್ಕೂ ರೇಣುಕಾಸ್ವಾಮಿ ಮೇಲೆ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಆತನ ಸ್ನೇಹಿತರಾದ ಅನುಕುಮಾರ್‌, ಜಗದೀಶ್ ಹಾಗೂ ರವಿಶಂಕರ್ ಹಲ್ಲೆ ನಡೆಸಿರುವುದನ್ನು ಸಹ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios