ಪ್ರಾಚೀನ ಕಾಲದ ವಸ್ತುಗಳ ಸಂಗ್ರಹಣೆಯಲ್ಲಿ ಈ ನಾರಿಯರು ಎತ್ತಿದ ಕೈ. ಚಿತ್ರದುರ್ಗದ ಈ ಕುಟುಂಬ ರೂಡಿಸಿಕೊಂಡಿರುವ ಹವ್ಯಾಸ ಮುಂದಿನ ಪೀಳಿಗೆಗೆ ಉಡುಗೊರೆ ಆಗಿದೆ. ಇಡೀ ಸ್ತ್ರೀ ಸಂಕುಲಕ್ಕೆ ಇವರು ಮಾದರಿ ಎನಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.7): ಮಹಿಳೆಯರು ಅಂದರೆ ಅವರು ಕೇವಲ ಅಡುಗೆ ಮನೆಗೆ ಸೀಮಿತ ಆಗುವವರು ಎಂದು ಮಾತನಾಡುವವರ ಸಂಖ್ಯೆಯೇ ಹೆಚ್ಚು . ಆದ್ರೆ ಇಲ್ಲೊಂದು ಕುಟುಂಬ ರೂಡಿಸಿಕೊಂಡಿರುವ ಹವ್ಯಾಸ ಮುಂದಿನ ಪೀಳಿಗೆಗೆ ಉಡುಗೊರೆ ಆಗಿದೆ. ಇಡೀ ಸ್ತ್ರೀ ಸಂಕುಲಕ್ಕೆ ಮಾದರಿ ಎನಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ ಆ ನಾಲ್ಕು ತಲೆ ಮಾರಿನ ಮಹಿಳೆಯರು ಮಾಡಿರುವ ಮಹತ್ಕಾರ್ಯ ಏನು ಅನ್ನೋದ್ರ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ. ಬಹುತೇಕ ಜನರು ಯಾವುದೇ ಹವ್ಯಾಸವನ್ನು ಮೈಗೂಡಿಸಿಕೊಂಡರು ಅದರಲ್ಲಿ ಅವರ ಸ್ವಾರ್ಥವೇ ಹೆಚ್ಚಾಗಿರುತ್ತದೆ. ಆದ್ರೆ ಚಿತ್ರದುರ್ಗದ ಗುಮಾಸ್ತ ಕಾಲೋನಿಯ ನಿಸ್ವಾರ್ಥ ಕುಟುಂಬವೊಂದು ರೂಡಿಸಿಕೊಂಡಿರುವ ಅಪರೂಪದ ವಸ್ತುಗಳ ಸಂಗ್ರಹದ ಹವ್ಯಾಸ ಮುಂದಿನ ಪೀಳಿಗೆಗೊಂದು ಮಾಹಿತಿಯ ಅತಿದೊಡ್ಡ ಮ್ಯೂಸಿಯಂ ಎನಿಸಿದೆ. 83 ವರ್ಷದ ಪದ್ಮಾವತಮ್ಮ ಅವರಿಂದ ಆರಂಭವಾದ ಈ ಕಲೆಯನ್ನು ಮಗಳಾದ ಯಶೋಧಮ್ಮ ಹಾಗೂ ಅವರ ಪುತ್ರಿ ಲಕ್ಷ್ಮಿಯವರು ಮುಂದುವರೆಸಿದ್ದಾರೆ.
ಕಲೆ, ಸಾಹಿತ್ಯ, ಇತಿಹಾಸ, ವಿಜ್ಞಾನ, ಕ್ರೀಡೆ ಸೇರಿದಂತೆ ಸುಮಾರು 52 ವಿಷಯಗಳಲ್ಲಿ ಸಂಗ್ರಹಿಸಿರುವ ಲಕ್ಷಾಂತರ ರೂಪಾಯಿ ಮೌಲ್ಯದ 1000 ಕ್ಕು ಅಧಿಕ ವಸ್ತುಗಳೆಲ್ಲವು ವಿದ್ಯಾರ್ಥಿಗಳು, ಸಂಶೋದಕರು ಹಾಗೂ ವಿಶ್ಲೇಷಕರಿಗೆ ಭಾರತದ ಗತ ವೈಭವವನ್ನು ಸ್ಮರಿಸುವಂತಿವೆ. ಹೀಗಾಗಿ, ನಾಗಲಕ್ಷ್ಮಿ ಯವರ ತಂದೆಯಾದ ದಿವಂಗತ ರಂಗಾಶೆಟ್ಟಿಯವರ ಹೆಸರಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿಯೇ ಮ್ಯೂಸಿಯಂ ತೆರೆಯುವ ಮಹದಾಸೆಯನ್ನು ಹೊಂದಿದ್ದಾರೆ.

ಮದುವೆ ಸಂಪ್ರದಾಯ ಆರಂಭವಾಗಿದ್ದು ಯಾವಾಗ? ಅದಕ್ಕೂ ಮುನ್ನ ಏನಾಗ್ತಿತ್ತು…
ಇನ್ನು 1971 ರಿಂದ ಆರಂಭವಾದ ಹವ್ಯಾಸದಿಂದಾಗಿ, ಅವರ ಪೂರ್ವಜರು ಬಳಸಿದ್ದಂತಹ ಕಂಚಿನ ಪಾತ್ರೆಗಳು, ಬುಟ್ಟಿಗಳು, ಲಾಟೀನ್ ಗಳು, ರಾಜರ ಕಾಲದ ನಾಣ್ಯಗಳು, ಹಳೆಯ ನೋಟುಗಳು, ದೇಶ ವಿದೇಶದ ಅಂಚೆ ಚೀಟಿ ಗಳಂತಹ ಅಪರೂಪದ ಕಲೆಕ್ಷನ್ ಗಳನ್ನು ಕಂಡು ಸ್ಪೂರ್ತಿ ಪಡೆದ ಲಕ್ಷ್ಮಿಯವರ ಸುಪುತ್ರಿ ಸಿರೀಶಾ ಗುಂಡಾಲ್ ಕೂಡ ಇದನ್ನು ಮುನ್ನಡೆಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಬಳಸುವ ಪೆನ್ನು, ಬೀಸಣಿಕೆ, ಎರೇಸರ್,ಶಾರ್ಪನರ್ ಸೇರಿದಂತೆ ಆಕರ್ಷಕ ಆಟದ ಆಟಿಕೆಗಳನ್ನು ಸಂಗ್ರಹಿಸಿಡುವ ಮೂಲಕ ಇತಿಹಾಸದ ಪುಟ ಸೇರಿರುವ ವಸ್ತುಗಳು ಹಾಗೂ ಹಣ ಕೊಟ್ಟರು ಮಾರುಕಟ್ಟೆಯಲ್ಲಿ ಸಿಗದ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡುವ ಸಂಪ್ರದಾಯ ನಾಲ್ಕು ತಲೆಮಾರುಗಳಿಂದ ಜೀವಂತವಾಗಿರೋದು ಇತರರಿಗೆ ಮಾದರಿ ಎನಿಸಿದೆ.
MahaShivratri 2023: ಐತಿಹಾಸಿಕ ಭೋಗನಂದೀಶ್ವರ ರಥೋತ್ಸವಕ್ಕೆ ದಿನಗಣನೆ
ಒಟ್ಟಾರೆ ಮೇಕಪ್ ಗಾಗಿ ಹೆಚ್ಚು ಸಮಯ ವ್ಯಯ ಮಾಡುವ ಮಹಿಳೆಯರ ಮಧ್ಯೆ ಅಪರೂಪದ ಆಕರ್ಷಕ ವಸ್ತುಗಳನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ದಾಖಲೆ ಸಹಿತ ಮಾಹಿತಿ ನೀಡ್ತಿರುವ ಈ ನಾಲ್ಕು ತಲೆಮಾರಿನ ಸ್ತ್ರೀ ಶಕ್ತಿಯ ಕಾರ್ಯ ಇಡೀ ಮಹಿಳಾ ಸಂಕುಲಕ್ಕೆ ಮಾದರಿ ಎನಿಸಿದೆ.
