ಚೀನಾ ಕಾಲು ಕೆದರಿ ಜಗಳಕ್ಕೆ ಬರುತ್ತಿದೆ: ಸಚಿವ ಈಶ್ವರಪ್ಪ ಟೀಕೆ

ಗಡಿ ಭಾಗದಲ್ಲಿ ದೇಶದ 20 ಸೈನಿಕರನ್ನು ಚೀನಾ ಸೈನಿಕರು ಹತ್ಯೆ ಮಾಡಿದ್ದಾರೆ. ಅದಕ್ಕೆ ವಿರುದ್ದವಾಗಿ ನಮ್ಮ ಯೋಧರು ಚೀನಾದ 41 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಪ್ರಪಂಚದ ದೃಷ್ಟಿಯಲ್ಲಿ ಕೋವಿಡ್‌ ಸಮಸ್ಯೆಯ ದಿಕ್ಕು ತಪ್ಪಿಸಲು ಚೀನಾ ಈ ರೀತಿ ಕುತಂತ್ರ ನಡೆಸಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

China truculent against India Says Minister KS Eshwarappa

ಶಿವಮೊಗ್ಗ(ಜೂ.18): ಕೊರೋನಾದಿಂದ ವಿಶ್ವಮಟ್ಟದಲ್ಲಿ ಮತ್ತು ಆಂತರಿಕವಾಗಿ ಉಂಟಾದ ಮುಖಭಂಗ ಮರೆಮಾಚಲು ಭಾರತದ ಮೇಲೆ ಚೀನಾ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದ ದೃಷ್ಟಿಯಲ್ಲಿ ಕೋವಿಡ್‌ ಸಮಸ್ಯೆಯ ದಿಕ್ಕು ತಪ್ಪಿಸಲು ಚೀನಾ ಈ ರೀತಿ ಕುತಂತ್ರ ನಡೆಸಿದೆ. ಗಡಿ ಭಾಗದಲ್ಲಿ ದೇಶದ 20 ಸೈನಿಕರನ್ನು ಚೀನಾ ಸೈನಿಕರು ಹತ್ಯೆ ಮಾಡಿದ್ದಾರೆ. ಅದಕ್ಕೆ ವಿರುದ್ದವಾಗಿ ನಮ್ಮ ಯೋಧರು ಚೀನಾದ 41 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ದಿಟ್ಟಉತ್ತರ ನೀಡಿದ್ದಾರೆ ಎಂದರು.

ಭಾರತ ಈಗಾಗಲೇ ಚೀನಾದ ಯಾವುದೇ ವಸ್ತು ಖರೀದಿಸದಂತೆ ತೀರ್ಮಾನ ಮಾಡಿದೆ. ಭಾರತದ ಈ ತೀರ್ಮಾನ ಚೀನಾಕ್ಕೆ ಗಾಬರಿ ಉಂಟಾಗಿದೆ. ಅಲ್ಲದೆ, ಚೀನಾದ ಸಮೀಪವಿರುವ ಭಾರತದ ಭೂ ಪ್ರದೇಶದಲ್ಲಿ ರಸ್ತೆಯನ್ನು ಕೇಂದ್ರ ಅಭಿವೃದ್ಧಿ ಮಾಡುತ್ತಿದೆ. ಅನೇಕ ವರ್ಷಗಳಿಂದ ಹಿಂದಿನ ಸರಕಾರಗಳು ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯ ಆಗಿರಲಿಲ್ಲ. ಆದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ರಸ್ತೆ ಅಭಿವೃದ್ಧಿ ಮಾಡುತ್ತಿದೆ. ಭಾರತ ನಮ್ಮ ದೇಶದ ಮೇಲೆ ಯುದ್ಧ ಮಾಡುವ ಸಲುವಾಗಿ ರಸ್ತೆ ನಿರ್ಮಿಸುತ್ತಿದೆ ಎಂದು ಚೀನಾ ತಪ್ಪು ಭಾವಿಸಿದೆ ಎಂದು ತಿಳಿಸಿದರು.

ಇನ್ನೂ ನಾಲ್ಕೈದು ದಿನ ಭಾರೀ ಮಳೆ ಮುನ್ಸೂಚನೆ

ಭಾರತ ಏನು ಎಂಬುದು ಪ್ರಪಂಚಕ್ಕೆ ಗೊತ್ತು. ಭಾರತ ಯಾವ ರಾಷ್ಟ್ರಕ್ಕೂ ತೊಂದರೆ ಕೊಡುವುದಿಲ್ಲ. ಆದರೆ ನಮ್ಮ ತಂಟೆಗೆ ಬಂದರೆ ಸಮ್ಮನೆ ಕೂರುವುದಿಲ್ಲ. ಭಾರತ-ಚೀನಾ ನಡುವೆ ಯುದ್ದ ನಡೆಯುತ್ತದೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಭಾರತದ ಶಕ್ತಿ ಏನೆಂಬುದು ಚೀನಾಗೆ ಗೊತ್ತಿದೆ. ನಮ್ಮ ಸುದ್ದಿಗೆ ಬಂದರೆ ಪಾಕಿಸ್ತಾನ ಆಗಬಹುದು ಅಥವಾ ಚೀನಾ ಆಗಬಹುದು ಸದೆ ಬಡಿಯುತ್ತೇವೆ.ಆ ಶಕ್ತಿ ನಮ್ಮ ಸೈನಿಕರಿಗೆ ಇದೆ. ನಮ್ಮ ಸುದ್ದಿಗೆ ಬಂದರೆ ಅವರು ಅನುಭವಿಸುತ್ತಾರೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios