ಬ್ಯಾಡಗಿ :  ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ದಿಢೀರ್‌ ಕುಸಿತಗೊಂಡಿದೆ ಎಂದು ಆರೋಪಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ್ದಲ್ಲದೆ, ಎಪಿಎಂಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ ಘಟನೆ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆಯಿತು. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ 2.55 ಲಕ್ಷ ಮೂಟೆ ಮೆಣಸಿನ ಕಾಯಿ ಆವಕವಾದ ಹಿನ್ನೆಲೆಯಲ್ಲಿ ದರ ಕುಸಿತವಾಗಿತ್ತು.

ಕಳೆದ ಗುರುವಾರವಷ್ಟೇ 8ರಿಂದ 11 ಸಾವಿರದ ವರೆಗೆ ಮಾರಾಟವಾಗಿದ್ದ ಕಡ್ಡಿ ತಳಿ ಮೆಣಸಿನಕಾಯಿ, ಸೋಮವಾರ ಕೇವಲ . 6ರಿಂದ . 9 ಸಾವಿರಕ್ಕೆ ಮಾರಾಟವಾಗಿದ್ದು, ಪ್ರತಿ ಕ್ವಿಂಟಲ್‌ಗೆ ಸುಮಾರು . 2 ಸಾವಿರಗಳಷ್ಟುಕಡಿಮೆಯಾಗಿದೆ ಎಂಬುದು ರೈತರ ಆರೋಪವಾಗಿತ್ತು. ಎಪಿಎಂಸಿ ಕಚೇರಿ ನುಗ್ಗಿದ ಸಾವಿರಾರು ರೈತರು, ವರ್ತಕರು ಸೇರಿ ಎಪಿಎಂಸಿ ಸಿಬ್ಬಂದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ವ್ಯಾಪಾರಸ್ಥರು ಎಲ್ಲರೂ ಮಾತಾಡಿಕೊಂಡು ಉದ್ದೇಶಪೂರ್ವಕವಾಗಿ ದರ ಕಡಿತಗೊಳಿಸಿದ್ದಾರೆ ಎಂದು ಈ ವೇಳೆ ರೈತರು ಆರೋಪಿಸಿದರು.