ಉಡುಪಿ, (ನ.25): ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಸಿಡಬ್ಲ್ಯುಸಿ ನಮ್ಮ ಭೂಮಿ ಸಂಸ್ಥೆಯ ಸಂಸ್ಥಾಪಕರಾದ ಬಿ.ದಾಮೋದರ ಆಚಾರ್ಯ ನಿಧನರಾಗಿದ್ದಾರೆ.

 63 ವರ್ಷದ ಬಿ.ದಾಮೋದರ ಆಚಾರ್ಯ ಅವರು ಇಂದು (ಬುಧವಾರ) ಬೆಂಗಳೂರಿನಲ್ಲಿ ವಿಧಿವಶರಾಗಿದ್ದು, ಹುಟ್ಟೂರು ಕುಂದಾಪುರ ತಾಲ್ಲೂಕಿನ ಬಸ್ರೂರಿನ ಮೂಡುಕೆರೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಲಸಿಕೆ ಸಂಗ್ರಹ ಸಿದ್ಧತೆ ಹೇಗಿದೆ?

ಹಳ್ಳಿಬಿಟ್ಟು ಪಟ್ಟಣಕ್ಕೆ ವಲಸೆ ಬಂದು ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದ ಮಕ್ಕಳ ಹಕ್ಕುಗಳ ರಕ್ಷಣೆಗೆ ದಾಮೋದರ ಆಚಾರ್ಯ ಅವರು ಬೆಂಗಳೂರಿನಲ್ಲಿ 'ಗ್ರಾಮಾಶ್ರಮ' ಸಂಸ್ಥೆ ಆರಂಭಿಸಿದ್ದರು. 

ಕುಂದಾಪುರದ ಕನ್ಯಾನದಲ್ಲಿ 'ನಮ್ಮ ಭೂಮಿ' ಸಂಸ್ಥೆ ಹುಟ್ಟುಹಾಕಿ ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಸ್ವಉದ್ಯೋಗ ತರಬೇತಿ ನೀಡುತ್ತಿದ್ದರು.