Asianet Suvarna News Asianet Suvarna News

ಸಿಎಂ ಬಿಎಸ್‌ವೈ ಜೊತೆ ಅಮೆರಿಕ ಕಾನ್ಸಲ್ ಜನರಲ್ ಸಭೆ, ಮಹತ್ವದ ಚರ್ಚೆ..!

ಚನ್ನೈನಲ್ಲಿರುವ ಅಮೆರಿಕ ದೂತಾವಾಸದ  ಕಾನ್ಸಲ್ ಜನರಲ್ ಜ್ಯುಡಿತ್ ರೇವಿನ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಅಭಿನಂದಿಸಿದ್ದಾರೆ.

Chennai Judith Ravin thankful to Yediyurappa virtual chat about Karnataka rbj
Author
Bengaluru, First Published Sep 16, 2020, 10:46 PM IST

ಬೆಂಗಳೂರು, (ಸೆ.16): ಚನ್ನೈನಲ್ಲಿರುವ ಅಮೆರಿಕ ದೂತಾವಾಸದ  ಕಾನ್ಸಲ್ ಜನರಲ್ ಜ್ಯುಡಿತ್ ರೇವಿನ್ ಅವರು ಇಂದು (ಬುಧವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವರ್ಚುಯಲ್ ಸಭೆ ನಡೆಸಿದರು. 
 
ಬೆಂಗಳೂರಿನಲ್ಲಿ ಯು.ಎಸ್.ರಾಯಭಾರಿ ಕಚೇರಿಯನ್ನು ತೆರೆಯಬೇಕೆನ್ನುವುದು ನಮ್ಮ ಬಹು ದಿನಗಳ ಬೇಡಿಕೆಯಾಗಿದ್ದು, ಕಚೇರಿಯ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಚೀನಾ-ಪಾಕ್‌ ಡೀಲ್‌, ಡಿಕೆಶಿ ಮಗಳವಿವಾಹಕ್ಕೆ ಡೇಟ್ ಫಿಕ್ಸ್: ಇಲ್ಲಿದೆ ಸೆ. 16ರ ಟಾಪ್ 10 ಸುದ್ದಿ!

ಭಾರತದಲ್ಲಿರುವ 100 ಅಮೆರಿಕಾ ಸಂಸ್ಥೆಗಳ ಪೈಕಿ ಸಿಸ್ಕೋ, ಐ.ಬಿ.ಎಂ, ಇಂಟೆಲ್, ಜಿ.ಇ, ಹೆಚ್.ಪಿ, ಒರಾಕಲ್, ಯು.ಟಿ.ಸಿ ಸೇರಿದಂತೆ  90 ಕಂಪನಿಗಳು ಬೆಂಗಳೂರಿನಲ್ಲಿಯೇ ನೆಲೆಸಿವೆ ಎಂದು ಮುಖ್ಯಮಂತ್ರಿಗಳು ಅವರು ತಿಳಿಸಿದರು.  ಕರ್ನಾಟಕ ಬಂಡವಾಳ ಸ್ನೇಹಿ ರಾಜ್ಯವಾಗಿದ್ದು, ಅಮೆರಿಕದಿಂದ ಹೆಚ್ಚಿನ ಬಂಡವಾಳವನ್ನು ಸ್ವಾಗತಿಸುತ್ತೇವೆ ಎಂದರು.   

ನವೋದ್ಯಮ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಕಾನ್ಸಲ್ ಜನರಲ್ ಅವರು  ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಯೋಗ,  ಆರ್ಥಿಕ ವ್ಯವಹಾರಗಳ ವಿಸ್ತರಣೆ, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ಸಂಶೋಧನೆ, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸೇವೆ ಸೇರಿದಂತೆ   ಜ್ಯುಡಿತ್ ರೇವಿನ್ ಅವರು ಚರ್ಚಿಸಿದರು. 

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು

Follow Us:
Download App:
  • android
  • ios