ಮೈಸೂರು (ನ.03):  ರಸಾಯನಶಾಸ್ತ್ರಜ್ಞ ಮತ್ತು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ವಿಶ್ವದ ಅತ್ಯುನ್ನತ ವಿಜ್ಞಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಅಮೇರಿಕಾದ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾನಿಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಪೊ›.ಕೆ.ಎಸ್‌. ರಂಗಪ್ಪ ಅವರು ಸ್ಥಾನ ಪಡೆದಿರುವುದು ವಿಶೇಷ. ಈ ಸಂಬಂಧ 25 ಪುಟಗಳ ಪಟ್ಟಿಯನ್ನು ಅಮೇರಿಕಾದ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿದೆ.

ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಭಾರತದ ಶೇ. 2 ರಷ್ಟು ವಿಜ್ಞಾನಿಗಳನ್ನು ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾನಿಲಯ ಪಟ್ಟಿಮಾಡಿದೆ. ಈ ಪೈಕಿ ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ಪೊ›.ಕೆ.ಎಸ್‌. ರಂಗಪ್ಪ ಅವರ ಸಾಧನೆಯನ್ನು ಗುರುತಿಸಿ ಸ್ಥಾನ ನೀಡಲಾಗಿದೆ.   ಮೈಸೂರು ವಿವಿಯಲ್ಲಿ ಪ್ರೊ.ಕೆ.ಎಸ್‌. ರಂಗಪ್ಪ ಅವರ ಸಾಧನೆಯನ್ನು ಈ ಸ್ಥಾನದಲ್ಲಿ ಪರಿಗಣಿಸಲಾಗಿದೆ. ವಿಶ್ವದಲ್ಲಿ ರಂಗಪ್ಪ ಅವರು 2,181ನೇ ಸ್ಥಾನದಲ್ಲಿದ್ದು, ಅವರ 438 ಸಂಶೋಧನಾ ಪ್ರಬಂಧಗಳನ್ನು ಪರಿಗಣಿಸಿ ಈ ಸ್ಥಾನ‌ ನೀಡಲಾಗಿದೆ.

ಕೊರೋನಾ ಮಹಾಮಾರಿ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಇದು

ದೇಶದಲ್ಲಿ ಅಂದಾಜು 750 ವಿಶ್ವವಿದ್ಯಾನಿಲಯಗಳಿದ್ದು, (ಸರ್ಕಾರಿ ಸ್ವಾಮ್ಯದ ) ಈ ಪೈಕಿ ಬಹುಶಃ ಮೈಸೂರು ವಿಶ್ವವಿದ್ಯಾನಿಲಯದ ಪೊ›.ಕೆ.ಎಸ್‌. ರಂಗಪ್ಪ ಅವರೊಬ್ಬರೇ ಸ್ಥಾನ ಪಡೆದಿರುವುದು ವಿಶೇಷ. ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ರಂಗಪ್ಪ ಅವರು ಈವರೆಗೆ 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಅಲ್ಲದೆ 11 ಸಂಶೋಧನಾ ಪೇಟೆಂಟ್‌ ಪಡೆದಿದ್ದಾರೆ. ಮಾಲಿಕ್ಯೂಲರ್‌ ಕೆಮಿಸ್ಟ್ರಿಯಲ್ಲಿನ ಇವರ ಸಂಶೋಧನೆ ಈಗ ಚೀನಾ, ಸಿಂಗಾಪುರದಲ್ಲಿ ಕ್ಲಿನಿಕಲ್‌ ಟ್ರಯಲ್‌ ಹಂತದಲ್ಲಿದೆ. ವಿವಿಧ ದೇಶಗಳ 350 ರಿಂದ 400 ಮಂದಿ ಸಂಶೋಧನಾರ್ಥಿಗಳು ರಂಗಪ್ಪ ಅವರ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಅಮೇರಿಕಾದ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿರುವ ವಿಶ್ವದ ಖ್ಯಾತ ವಿಜ್ಞಾನಗಳ ಪಟ್ಟಿಯಲ್ಲಿ ಭಾರತದ ಶೇ. 2 ರಷ್ಟುವಿಜ್ಞಾನಗಳ ಪೈಕಿ ಆರ್ಗಾನಿಕ್‌ ಕೆಮಿಸ್ಟ್ರಿ ವಿಭಾಗದಲ್ಲಿ ಸ್ಥಾನ ಪಡೆದಿರುವುದು ಸಂತೋಷ ತಂದಿದೆ. ನನ್ನ ಪಾಲಿಗೆ ವಿಶ್ವದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಲಭಿಸಿದಷ್ಟೆಖುಷಿಯಾಗಿದೆ. ಕಳೆದ 40 ವರ್ಷಗಳಿಂದ ನಾನು ನಡೆಸಿದ ಸಂಶೋಧನೆಗಳಿಗೆ ಲಭಿಸಿದ ನಿಜವಾದ ಮಾನ್ಯತೆ ಇದು.

- ಪ್ರೊ.ಕೆ.ಎಸ್‌. ರಂಗಪ್ಪ, ವಿಶ್ರಾಂತ ಕುಲಪತಿ