Asianet Suvarna News Asianet Suvarna News

ಕನ್ನಡ ಶಾಲೆಯಿಂದ ಚಂದ್ರಯಾನದವರೆಗೆ: ಗದಗ ಮೂಲದ ವಿಜ್ಞಾನಿ ಸುಧೀಂದ್ರ ಬಿಂದಗಿ ರೋಚಕ ಜರ್ನಿ

ಇಲ್ಲಿನ ವಿಜ್ಞಾನಿ ಸುಧೀಂದ್ರ ವೆಂಕಣ್ಣಚಾರ್ಯ ಬಿಂದಗಿ ಅವರು ಚಂದ್ರಯಾನ 3ರ ಥರ್ಮಲ್ ಡಿಸೈನ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸೋ ಮೂಲಕ ಕರ್ನಾಟಕದ ಜನರು ಹೆಮ್ಮೆಪಡುವಂತೆ ಮಾಡಿದ್ದಾರೆ. ವಿಜ್ಞಾನಿ ಸುಧೀಂದ್ರ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕನ್ನಡದಲ್ಲೇ ಆಗಿತ್ತು ಅನ್ನೋದು ಮತ್ತಷ್ಟು ಹೆಮ್ಮೆ ಪಡುವ ವಿಷಯ.

chandrayaan 3 and isro scientist sudhindra bindagi gvd
Author
First Published Aug 24, 2023, 12:43 PM IST

ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಆ.24): ಇಲ್ಲಿನ ವಿಜ್ಞಾನಿ ಸುಧೀಂದ್ರ ವೆಂಕಣ್ಣಚಾರ್ಯ ಬಿಂದಗಿ ಅವರು ಚಂದ್ರಯಾನ 3ರ ಥರ್ಮಲ್ ಡಿಸೈನ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸೋ ಮೂಲಕ ಕರ್ನಾಟಕದ ಜನರು ಹೆಮ್ಮೆಪಡುವಂತೆ ಮಾಡಿದ್ದಾರೆ. ವಿಜ್ಞಾನಿ ಸುಧೀಂದ್ರ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕನ್ನಡದಲ್ಲೇ ಆಗಿತ್ತು ಅನ್ನೋದು ಮತ್ತಷ್ಟು ಹೆಮ್ಮೆ ಪಡುವ ವಿಷಯ. ಮೂಲತಃ ಗದಗ ಜಿಲ್ಲೆಯ ಸೊರಟೂರು ಗ್ರಾಮದ ಸುಧೀಂದ್ರ ಬಿಂದಗಿ ಅವರು ಅಪ್ಪಟ ಕನ್ನಡಿಗ.. ಗದಗ ನಗರದ ಸರ್ಕಾರಿ ಶಾಲೆ ನಂ2 ರಲ್ಲಿ ಪ್ರಾಥಮಿಕ ಕಲಿತು, ವಿದ್ಯಾದಾನ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ. 

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕನ್ನಡದಲ್ಲೇ ಮುಗಿಸಿದ ಬಿಂದಗಿಯವರು, ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿದ್ದರಿಂದ ಜಗದ್ಗುರು ತೋಂಟದಾರ್ಯ ಕಾಜೇಜಿನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದರು. ಶಾಲಾ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದು ವಿಷಯಗಳನ್ನ ಆಳವಾಗಿ ಮನವರಿಕೆ ಮಾಡಿಕೊಳ್ಳೋದಕ್ಕೆ ಸಹಾಯ ಆಯ್ತು ಅನ್ನೋ ಅವರು, ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗ್ಬೇಕು ಅಂತಾ ಪ್ರತಿಪಾದಿಸುವವರು.  

ಚಂದ್ರ​ಯಾ​ನ-3 ಯಶಸ್ವಿಗೆ ಮಂತ್ರಾ​ಲ​ಯದ ಸುಬು​ಧೇಂದ್ರ ತೀರ್ಥ​ರು ಹರ್ಷ

ಮಾತೃ ಭಾಷೆಯಲ್ಲಿ ಕಲೆಯೋದು ಉತ್ತಮ. ವಿಷಯ ಬಹುಬೇಗ ಹೃದಯಕ್ಕೆ ತಲುಪೋದು ಮಾತೃಭಾಷೆಯಿಂದ ಅನ್ನೋದು ಸುಧೀಂದ್ರ ಅವರ ಬಲವಾದ ನಂಬಿಕೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಉಜ್ವಲ ಭವಿಷ್ಯ ಅನ್ನೋ ನಂಬಿಕೆ ಕೆಲವರಲ್ಲಿದೆ.. ಆದ್ರೆ, ಕನ್ನಡದಲ್ಲಿ ಕಲಿಯೋದ್ರಿಂದ ಕನ್ನಡ ಪ್ರೀತಿ ಜಾಸ್ತಿಯಾಗುತ್ತೆ. ವಿಷಯದ ಮೂಲ ಮಾತೃಭಾಷೆಯಲ್ಲಿ ಉತ್ತಮವಾಗಿ ಅರ್ಥವಾಗುತ್ತೆ.. ಮಕ್ಕಳು ಕೀಳರಿಮೆ ಬಿಡಬೇಕು, ಮಕ್ಕಳಿಗೆ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಕನ್ನಡದಲ್ಲೇ ಸಿಗತಾಗಬೇಕು ಅನ್ನೋದು ಕನ್ನಡ ಪ್ರೇಮಿ ಸುಧೀಂದ್ರ ಮಾತು.

ಕನ್ನಡ ಶಾಲೆಯಿಂದ ಇಸ್ರೋ, ಚಂದ್ರಯಾನದವರೆಗೆ: ಸುರತ್ಕಲ್ NITK (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಕರ್ನಾಟಕ )ಯಲ್ಲಿ ಬಿಟೆಕ್ ಪದವಿ ಪಡೆದ ಸುಧೀಂದ್ರ ಅವರು, 1986 ರಲ್ಲಿ‌ ಇಸ್ರೊ ಸೇರಿಕೊಂಡರು. ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ 37 ವರ್ಷ ಸುದೀರ್ಘ ಸೇವೆ ಸಲ್ಲಿಸಿರುವ ಸುಧೀಂದ್ರ ಬಿಂದಗಿ ಅವರು, ಚಂದ್ರಯಾನ ಸೇರಿದಂತೆ ವಿವಿಧ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದಾರೆ. ಡಿಸೈನ್ ಇಂಜಿನಿಯರ್ ಅಂತಾ ಸೇವೆ ಆರಂಭಿಸಿದ್ದ ಸುಧೀಂದ್ರ ಅವರು INSAT 2A, INSAT 2E GSAT ಸೇರಿದಂತೆ  45 ಉಪಗ್ರಹಗಳ ವಿನ್ಯಾಸ ವಿಶ್ಲೇಷಣೆ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಪ್ರೊಜೆಕ್ಟ್ ಮ್ಯಾನೇಜರ್: ಡೆಪ್ಯೂಡಿ ಡೈರೆಕ್ಟರ್, ಸೆಕ್ಷನ್ ಹೆಡ್, ಥರ್ಮಲ್ ಸಮೂಹದ ನಿರ್ದೇಶಕನಾಗಿ, ಸಮೂಹ ನಿರ್ದೇಶಕನಾಗಿದ್ದಾಗ ಸೇವೆ ಸಲ್ಲಿಸಿದ್ದಾರೆ. ಥರ್ಮಲ್ ವಿಭಾಗದ ನಿರ್ದೇಶಕರಾಗಿದ್ದಾಗ 150 ವಿಜ್ಞಾನಿಗಳನ್ನ ಹೆಡ್ ಮಾಡಿದ್ದು, ಕನ್ನಡ ಮೀಡಿಯಂನಲ್ಲಿ ಓದಿ ವಿಜ್ಞಾನಿಯಾದ ಸುಧೀಂದ್ರ ಅವರು.

ಉಷ್ಣತೆ ಕಾಪಾಡುವ ಥರ್ಮಲ್ ಸೆಕ್ಷನ್ ನಿಭಾಯಿಸಿದ್ದ ಸುಧೀಂದ್ರ: ಚಂದ್ರಯಾನ ಸೇರಿದಂತೆ ಬಾಹ್ಯಾಕಾಶದಲ್ಲಿ ಕೆಲಸ ಮಾಡುವ ಯಂತ್ರಗಳಿಗೆ ಉಷ್ಣ ನಿಯಂತ್ರಣ ಬಹು ಮುಖ್ಯವಾದ ವಿಷಯ. ಬಾಹ್ಯಾಕಾಶ, ಚಂದ್ರನ ಮೇಲ್ಮೈ ಮೇಲೆ ಕೆಲಸ ಮಾಡುವ ಯಂತ್ರಗಳಿಗೆ ಭೂಮಿಯ ವಾತಾವರಣ ಮಾದರಿಯಲ್ಲಿ ಉಷ್ಣಾಂಶ ಬೇಕಾಗುತ್ತದೆ. ಥರ್ಮಲ್ ಡಿಸೈನ್, ಥರ್ಮಲ್ ಕಂಟ್ರೋಲ್ ಫ್ಯಾಬ್ರಿಕೇಷನ್, ಇಂಪ್ಲಿಮೆಂಟೇಷನ್, ಟೆಸ್ಟಿಂಗ್ ವಿಭಾಗಗಳು ಉಷ್ಣಾಂಶ ವಿಷಯವಾಗಿ ಕೆಲಸ ಮಾಡುತ್ವೆ. ಈ ವಿಭಾಗಗಳ ಮುಖ್ಯಸ್ಥರಾಗಿ ಸುಧೀಂದ್ರ ಕೆಲಸ ನಿರ್ವಹಿಸಿದ್ದಾರೆ. ಚಂದ್ರಯಾನ, ಮಂಗಳಯಾನಗಳಂತಹ ಪ್ರತಿಷ್ಠಿತ ಪ್ರಾಜೆಕ್ಟ್ ಗಳಿಗೆ ಕೆಲಸ ಮಾಡಿದ ಅನುಭವ ಸುಧೀಂದ್ರ ಅವರದ್ದು.

ನಿವೃತ್ತಿಗೆ ಮುನ್ನ ದೇಶಕ್ಕೆ ಚಂದ್ರಯಾನ ಗಿಫ್ಟ್: ಇಸ್ರೊ ಥರ್ಮಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಸುಧೀಂದ್ರವರು ಜುಲೈ 21 ನಿವೃತ್ತಿಹೊಂದಿದ್ದಾರೆ.. ಜುಲೈ 14 ತಾರೀಕು ಚಂದ್ರಯಾನ 3 ಉಡಾವಣೆ ನಂತ್ರ ನಿವೃತ್ತಿಯಾಗಿದೆ. ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವ ದಿನ ಸುಧೀಂದ್ರ ನಿವೃತ್ತರಾಗಿದ್ರು. ಆದ್ರೂ ಚಂದ್ರಯಾನಕ್ಕೆ ಕೆಲಸ ಮಾಡಿದ ತೃಪ್ತಿ ಅವರಲ್ಲಿದೆ..

ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್‌

ವಿಜ್ಞಾನಿ  ಬೆಳವಣಿಗೆಗೆ ಕಾರಣವಾಗಿದ್ದು ಗದಗ ವಾತಾವರಣ: ವೀರನಾರಾಯಣ ದೇವಸ್ಥಾನದ ಅಗ್ರಹಾರದಲ್ಲಿ ಬೆಳದಿರುವ ಸುಧೀಂದ್ರ ಅವರಿಗೆ ದೈವ ಬಲವೂ ಸಾಥ್ ನೀಡಿದೆ‌. ದೇವಸ್ಥಾನ ವಾತಾವರಣ ಬದುಕಿನಲ್ಲಿ ಶಿಸ್ತು ಕಲಿಸಿದ ಎನ್ನುವ ಸುಧೀಂದ್ರ ಅವರು ಶಾಲಾ ವಾತಾವರಣವೂ ವ್ಯಕ್ತಿತ್ವ ರೂಪಿಸಲು ಕಾರಣವಾಯ್ತು ಎನ್ನುತ್ತಾರೆ. 2 ನಂಬರ್ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಮಕಾಂದಾರ್ ಗುರುಗಳು ದಿನ ನಿತ್ಯ ತಂದೆ ತಾಯಿಗೆ ನಮಸ್ಕರಿಸಿ ಶಾಲೆಗೆ ಬರುವಂತೆ ಹೇಳಿತ್ತಿದ್ದರು. ಇದ್ರಿಂದಾಗಿ ಜೀವನದಲ್ಲಿ ಮೌಲ್ಯಗಳು ಬೆಳೆಯಲು ಕಾರಣವಾಯ್ತು ಅಂತಾ ಶಾಲಾ ಶಿಲ್ಷಕರನ್ನೂ ಸುಧೀಂದ್ರ ನೆನೆಸಿಕೊಳ್ಳುತ್ತಾರೆ‌. ವಿದ್ಯಾ ದಾನ ಸಮಿತಿಯ ಬಿಟಿ ಕುಲಕರ್ಣಿ, ಬುರ್ಲಿ, ಹುಲಗಿ ಗುರುಗಳು ಹೇಳಿದ ಪಾಠ. ಶಾಲಾ ಬ್ಯಾಂಕ್ ಉಳಿತಾಯ ಯೋಜನೆ. ಬ್ಯಾಂಕ್ ವ್ಯವಸ್ಥೆ ಕಲಿಸುವಂತೆ ಮಾಡಿತು ಅನ್ನೋವಾಗ ಸುಧೀಂದ್ರ ಬಾಲ್ಯದ ದಿನಗಳಿಗೆ ಜಾರಿದ್ರು. ಬುಧವಾರ ಯಶಸ್ವಿಯಾದ ಚಂದ್ರಯಾನ 3 ಯೋಜನೆಯ ವಿಜ್ಞಾನಿಗಳಲ್ಲಿ ಸುಧೀಂದ್ರ ಕೂಡ ಒಬ್ಬರು ಎಂಬುದು ಗದಗ ಜಿಲ್ಲೆಗೆ ಹೆಮ್ಮೆಯ ವಿಷಯ.

Follow Us:
Download App:
  • android
  • ios