Asianet Suvarna News Asianet Suvarna News

ನನ್ನ ಮೇಲೆ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುತ್ತೆ: ಸಿಎಂ ಸಿದ್ದರಾಮಯ್ಯ

'ನನ್ನ ಮೇಲೆ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅವಕಾಶ ಮಾಡಿಕೊಟ್ಟಿದ್ದಾರೆ. 

Chamundeshwaris blessings will always be on me Says CM Siddaramaiah gvd
Author
First Published Oct 13, 2024, 7:59 AM IST | Last Updated Oct 13, 2024, 7:59 AM IST

ಮೈಸೂರು (ಅ.13): 'ನನ್ನ ಮೇಲೆ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಇಷ್ಟೊಂದು ಬಾರಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕಿದೆ. ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುತ್ತೆ. ದೇವರ ಆಶೀರ್ವಾದ ಇಲ್ಲ ಎನ್ನುವುದಿಲ್ಲ. 

ದೇವರ ಆಶೀರ್ವಾದ ಇರುವುದರಿಂದಲೇ ಇಷ್ಟು ವರ್ಷ ರಾಜಕೀಯದಲ್ಲಿ ಉಳಿದಿರು ವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳುವವರು, ತೆಗಳುವವರು ಇಬ್ಬರೂ ಇರುತ್ತಾರೆ. ಆದರೆ, ಆರೋಗ್ಯಕರ ಚರ್ಚೆ ಆಗಬೇಕು ಎಂದರು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಡ್ಯಾಂಗಳು ತುಂಬಿರುವುದರಿಂದ ಅದ್ದೂರಿಯಾಗಿ ದಸರಾ ಆಚರಿಸಲಾ ಗುತ್ತಿದೆ. ಉತ್ತಮ ಮಳೆ, ಬೆಳೆಯಾಗಿ, ರೈತರು, ಸಾರ್ವಜನಿಕರು ಸುಖ, ಸಮೃದ್ಧಿಯಿಂದ ಇರಲಿ ಎಂದು ದೇವಿಯಲ್ಲಿ ಪ್ರಾರ್ಥಿ ಸಿದ್ದೇನೆ. ದಸರಾ ಅಂದರೆ ದುಷ್ಟ ಶಕ್ತಿಗಳ ಸಂಹಾರ. ಶಿಷ್ಟ ಜನರ ರಕ್ಷಣೆ, ವಿಜಯನಗರದ ಅರಸರು ಜಯದ ಸಂಕೇತವಾಗಿ ದಸರಾ ಮಾಡಿದ್ದರು. 

ರಾಜ್ಯದ ಜನರು ಸುಖ, ಸಮೃದ್ಧಿಯಿಂದ ಇರಲಿ: ಸಿದ್ದರಾಮಯ್ಯ ಪ್ರಾರ್ಥನೆ

ಮೈಸೂರು ಅರಸರು ಅದನ್ನು ಮುಂದು ವರಿಸಿದರು. ಇವತ್ತು ಅದೇ ಸಂಪ್ರದಾಯ ಮುಂದುವರಿದಿದೆ ಎಂದು ಹೇಳಿದರು. ಪತ್ರಿಕೆಗಳಲ್ಲಿ ಸರ್ಕಾರದಿಂದ ಜಾಹೀರಾತು ಕೊಟ್ಟಿರುವ ಸಂಬಂಧ ಪ್ರತಿಕ್ರಿಯಿಸಿ, ಜಾಹೀರಾತನ್ನು ಇವತ್ತಿಗೆ ನೀವು ಹೇಗೆ ವ್ಯಾಖ್ಯಾನ ಮಾಡ್ತೀರೋ ಹಾಗೆ, ನೀವು ಪರವಾಗಿ, ವಿರೋಧವಾಗಿ... ಹೇಗೆ ವ್ಯಾಖ್ಯಾನ ಮಾಡ್ತೀರೋ ಹಾಗೆ ಎಂದರು. ಜಾಹೀರಾತಿನ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಪೋಕ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊದಲು ಅವರನ್ನು ಪಾರ್ಲಿಮೆಂಟ್ ಬೋರ್ಡ್ ನಿಂದ ಕಿತ್ತು ಹಾಕಲು ಹೇಳಿ. ಕೋರ್ಟ್ ಇಲ್ಲದಿದ್ದರೆ ಅವರು ಜೈಲಿನಲ್ಲಿ ಇರಬೇಕಿತ್ತು ಎಂದು ಟಾಂಗ್ ಕೊಟ್ಟರು.

ಸವದತ್ತಿಗೆ ಸಿಎಂ, ಸಚಿವರ ದಂಡು: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸವದತ್ತಿಯ ಸುಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಅ.೧೩ರಂದು ಬೆಳಗ್ಗೆ ೧೧ಕ್ಕೆ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದು, ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆ ವಹಿಸುವರು. 

ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಅಂತ ನಿಮಗ್ಯಾರು ಹೇಳಿದ್ದು?: ಸಚಿವರಿಗೆ ಸಂಪುಟದಲ್ಲಿ ಸಿಎಂ ಕ್ಲಾಸ್‌

ವಿಶೇಷ ಆಮಂತಿತ್ರರಾಗಿ ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ, ನವದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ ಕಾಗೆ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಭಾಗವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಪ್ರಿಯಂಕಾ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲೆಯ ಶಾಸಕರು, ವಿಪ ಸದಸ್ಯರು, ನಿಗಮಗಳ ಅಧ್ಯಕ್ಷರು.ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಕಾರ್ಯನಿರ್ವನಾಧಿಕಾರಿ ಎಸ್‌ಪಿಬಿ ಮಹೇಶ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios