ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ಗೆ ಟ್ವಿಸ್ಟ್‌ ಕೊಟ್ಟ ಚೈತ್ರಾ ಕುಂದಾಪುರ. ಇಂದಿರಾ ಕ್ಯಾಂಟೀನ್‌ ಬಿಲ್‌ಗಾಗಿ ಚೈತ್ರಾ ಅವರನ್ನು ಲಾಕ್‌ ಮಾಡಿಸಲಾಗಿದೆಯೇ ಎಂಬ ಅನಮಾನ ವ್ಯಕ್ತವಾಗುತ್ತಿದೆ.

ಬೆಂಗಳೂರು (ಸೆ.14): ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ಪಡೆದು ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿತವಾಗಿರುವ ಎ1 ಆರೋಪಿ ಚೈತ್ರಾ ಕುಂದಾಪುರ ಇಡೀ ಕೇಸ್‌ಗೆ ಟ್ವಿಸ್ಟ್‌ ಸಿಗುವ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಟಿಕೆಸ್‌ ವಂಚನೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಪೈಕಿ ಚೈತ್ರಾ ಕುಂದಾಪುರ (Chaitra Kundapura) ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್‌ ಮಾಡಲಾಗಿದೆ. ಇನ್ನು ವಿಚಾರಣೆಗಾಗಿ ಇಂದು ಬೆಳಗ್ಗೆ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನ ಪೊಲೀಸರು, ಸಿಸಿಬಿ ಕಚೇರಿಗೆ ಕರೆದು ಕೊಂಡು ಬಂದಿದ್ದಾರೆ. ಕಾರಿನಿಂದ ಕೆಳಗೆ ಇಳಿಯುವಾಗ ಮಾತನಾಡಿದ ಚೈತ್ರ ಮಾಧ್ಯಮಗಳ ಕ್ಯಾಮರಾ ಮುಂದೆ ಮಾತನಾಡಿದ ಚೈತ್ರಾ , ಸ್ವಾಮೀಜಿ ಅರೆಸ್ಟ್ ಆಗ್ಲಿ ಎಲ್ಲಾ ಸತ್ಯ ಹೊರಗಡೆ ಬರುತ್ತದೆ. ದೊಡ್ಡದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ (Indira Canteen) ಬಿಲ್ ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಭಯಾಕ ಟ್ವಿಸ್ಟ್‌ ನೀಡಿದ್ದಾರೆ. 

ಪೊಲೀಸರು ನೋವು ಮಾಡಿದ್ದಾರೆಂದು ಕಣ್ಣೀರಿಟ್ಟ ಚೈತ್ರ ಕುಂದಾಪುರ! ಆದ್ರೂ ಸೆ.23ರವರೆಗೆ ಪೊಲೀಸ್‌ ವಶಕ್ಕೊಪ್ಪಿಸಿದ ಕೋರ್ಟ್‌

ಹಲವು ಅನುಮಾನಕ್ಕೆ ಕಾರಣವಾಯ್ತು ಚೈತ್ರಾ ಹೇಳಿಕೆ: ಇನ್ನು ವಂಚನೆ ಕೇಸ್‌ ಆರೋಪಿ ಚೈತ್ರಾ ಕುಂದಾಪುರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂದಿರಾ ಕ್ಯಾಂಟಿನ್ ಬಿಲ್ ಗಾಗಿ ಈ ಪ್ಲಾನ್ ಮಾಡಲಾಗಿದೆ ಎಂದು ಚೈತ್ರಾ ಕುಂದಾಪುರ ಆರೋಪ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಬಿಜೆಪಿ ಟಿಕೆಟ್‌ ಆಸೆಗಾಗಿ 5 ಕೋಟಿ ರೂ. ಕಳೆದುಕೊಂಡ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Pujari) ಮೇಲೆಯೇ ಚೈತ್ರಾ ನೇರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ 2017 ರಿಂದ ಗೋವಿಂದ ಬಾಬು ಪೂಜಾರಿ ಇಂದಿರಾ ಕ್ಯಾಂಟಿನ್ ಗುತ್ತಿಗೆ ಪಡೆದು ನಡೆಸುತ್ತಿದ್ದಾರೆ. ಗೋವಿಂದ ಬಾಬುಗೆ ಸರ್ಕಾರದಿಂದ ಅಂದಾಜು 35 ಕೋಟಿ ರೂಪಾಯಿ ಹಣ ಬರಬೇಕಿತ್ತು.

98 ಇಂದಿರಾ ಕ್ಯಾಂಟೀನ್‌ ಗುತ್ತಿಗೆ ಪಡೆದಿರುವ ಗೋವಿಂದಬಾಬು: ಇನ್ನು ರಾಜ್ಯದಲ್ಲಿ ಚೆಫ್ ಟಾಕ್ (cheftak) ಎಂಬ ಕ್ಯಾಟರಿಂಗ್ ಸಂಸ್ಥೆ ನಡೆಸುತ್ತಿರುವ ಗೋವಿಂದ ಬಾಬು, ಈಗ ಬರೋಬ್ಬರಿ 98 ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆಯನ್ನು ಹೊಂದಿದ್ದಾರೆ. ಇನ್ನು ಸರ್ಕಾರದಿಂದ ಸುಮಾರು 35 ಕೋಟಿ ರೂ. ಹಣ ಬಿಡುಗಡೆ ಮಾಡುವುದಕ್ಕಾಗಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಲಾಕ್‌ ಮಾಡಿಸು ಎಂದು ಡೀಲ್‌ ಕೊಟ್ಟಿದ್ದಾರೆಯೇ ಎಂಬ ಅನುಮಾವೂ ಕೂಡ ಕಂಡುಬರುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಹಣಕ್ಕೆ ಈ ಪ್ಲಾನ್ ಮಾಡಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರಾ? ಎಂಬುದನ್ನು ಕಾದುನೋಡಬೇಕಿದೆ.

ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ನಲ್ಲಿ ಸ್ವಾಮೀಜಿ ಪಾಲೆಷ್ಟು ಗೊತ್ತಾ?

ಸ್ವಾಮೀಜಿ ಅರೆಸ್ಟ್‌ ಆದರೆ ದೊಡ್ಡವರ ಹೆಸರು ಹೊರಗೆ ಬರುತ್ತದೆ: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಚೈತ್ರಾ ಕುಂದಾಪುರ ಅಂಡ್‌ಗ್ಯಾಂಗ್‌ ವತಿಯಿಂದ ಕೋಟ್ಯಂತರ ರೂ, ಹಣವನ್ನು ಪಡೆಯಲಾಗಿದೆ. ಈ ವಂಚನೆಯ ತಂಡದೊಂದಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಕೂಡ 1.50 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಕೇಳಿಬಂದಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ಅಜ್ಞಾತ (Halasri swamiji) ಸ್ಥಳಕ್ಕೆ ತರಳಿದ್ದಾರೆ. ವಿಜಯನಗರ ಜಿಲ್ಲೆಯ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಈಗ ಚೈತ್ರಾ ಕುಂದಾಪುರ ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.