ಚೈತ್ರಾ ಕುಂದಾಪುರ ವಂಚನೆ ಕೇಸ್; ಅಭಿನವ ಹಾಲಸ್ವಾಮಿ ಆಯ್ತು ಇದೀಗ ಮತ್ತೊಬ್ಬ ಸ್ವಾಮೀಜಿ ಹೆಸರು!

ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಉದ್ಯಮಿಯೊಬ್ಬರಿಗೆ ಚೈತ್ರಾ ಕುಂದಾಪುರ ವಂಚಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಮತ್ತೊಬ್ಬ ಸ್ವಾಮೀಜಿಯ ಹೆಸರು ಕೇಳಿಬಂದಿದೆ.

Chaitra Kundapur fraud case Rajasekhara Swajiji of Vajradehi Math Clarification at mangaluru rav

ಮಂಗಳೂರು (ಸೆ.18): ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಉದ್ಯಮಿಯೊಬ್ಬರಿಗೆ ಚೈತ್ರಾ ಕುಂದಾಪುರ ವಂಚಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಮತ್ತೊಬ್ಬ ಸ್ವಾಮೀಜಿಯ ಹೆಸರು ಕೇಳಿಬಂದಿದೆ.

ಚೈತ್ರಾ ಕುಂದಾಪುರ ಆದಾಯ ತೆರಿಗೆ ಇಲಾಖೆಗೆ ಬರೆದ ಪತ್ರದಲ್ಲಿ ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿರುವ ಕರಾವಳಿಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಉಲ್ಲೇಖಿಸಲಾಗಿದೆ. ಬಿಜೆಪಿ ಟಿಕೆಟ್ ವಿಚಾರದಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ನನಗೆ ಫೋನ್ ಮಾಡಿದ್ದರು ಎಂದು ಉಲ್ಲೇಖಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗೋವಧೆಗೆ ಕಾನೂನಿನಲ್ಲಿ ಅವಕಾಶ ಬೇಡ: ಕರಾವಳಿ ಯತಿಗಳ ಆಗ್ರಹ

ಸ್ವಾಮೀಜಿ ಹೇಳೋದೇನು?

ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ವಜ್ರದೇಹಿ ಮಠದ ಸ್ವಾಮೀಜಿ, ನನಗೂ, ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಜುಲೈ ತಿಂಗಳಲ್ಲಿ ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ನನಗೆ ಫೋನ್ ಮಾಡಿದ್ದರು. ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ನನಗೆ ಪ್ರಶ್ನೆ ಮಾಡಿದ್ದರು. ಆದರೆ ನನಗೆ ಆ ವಿಚಾರದ ಬಗ್ಗೆ ಏನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುತ್ತೀರೆಂದು ನಾನು ಅಂದೇ ಕೇಳಿದ್ದೆ. ಆಗ  ಅವರೇ ಫೋನ್ ಮಾಡಿ ಈ ಪ್ರಕರಣದಲ್ಲಿ ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಹೇಳಿದ್ದರು. ನನಗೆ  ಚೈತ್ರಾ ಕುಂದಾಪುರ ಪರಿಚಯವಿದ್ದುದರಿಂದ ಆಕೆಗೆ ಫೋನ್ ಮಾಡಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೇಳಿದ್ದೆ ಎಂದರು.

ಒಂದೂವರೆ ಕೋಟಿ ಇದ್ದುದ್ದು ಮೂರು ಕೋಟಿ ಆಯ್ತಾ ಎಂದಿದ್ದ ಚೈತ್ರಾ:

ಟಿಕೆಟ್ ಡೀಲ್ ಪ್ರಕರಣದ ಬಗ್ಗೆ ನಾನು ಚೈತ್ರಾ  ಕುಂದಾಪುರಗೆ ಕರೆ ಮಾಡಿ ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ಒಂದೂವರೆ ಕೋಟಿ ಇದ್ದಿದ್ದು ಆಗಲೇ ಮೂರು ಕೋಟಿ ಆಯ್ತಾ? ಇನ್ನು ಅದು 4-5 ಕೋಟಿ ಆಗಬಹುದು ಎಂದು ಆಕೆ ಹೇಳಿದ್ದಳು. ಆಗ ನಾನು ಘಟನೆ ಬಗ್ಗೆ ಸತ್ಯ ಹೇಳು ಎಂದಿದ್ದೆ. ಆಕೆ ತನಗೇನೂ ಗೊತ್ತಿಲ್ಲ ಎಂದಿದ್ದರು ಎಂದು ಘಟನೆ ಬಗ್ಗೆ ವಿವರಿಸಿದ ಸ್ವಾಮೀಜಿ.

ಪೊಲೀಸರು ನೋವು ಮಾಡಿದ್ದಾರೆಂದು ಕಣ್ಣೀರಿಟ್ಟ ಚೈತ್ರ ಕುಂದಾಪುರ! ಆದ್ರೂ ಸೆ.23ರವರೆಗೆ ಪೊಲೀಸ್‌ ವಶಕ್ಕೊಪ್ಪಿಸಿದ ಕೋರ್ಟ್‌

ಚಕ್ರವರ್ತಿ ಸೂಲಿಬೆಲೆ ಅವರಿಗೂ ಫೋನ್ ಮಾಡಿದ್ದೆ:

ಈ ಪ್ರಕರಣದ ಬಗ್ಗೆ ತಿಳಿಯಲು ಚಕ್ರವರ್ತಿ ಸೂಲಿಬೆಲೆ ಅವರಿಗೂ ಕರೆ ಮಾಡಿದ್ದೆ. ಅಭಿನವ ಹಾಲಶ್ರೀ ಸ್ವಾಮೀಜಿ, ಸೂಲಿಬೆಲೆ ಜೊತೆಗೆ ಗುರುತಿಸಿದ್ದರಿಂದ ಅವರಿಗೂ ವಿಷಯ ತಿಳಿಸಿದ್ದೆ. ಅಷ್ಟೇ ಅಲ್ಲ, ನಾವು ವಿಶ್ವ ಹಿಂದೂ ಪರಿಷತ್ತಿನಲ್ಲಿ ಗುರುತಿಸಿಕೊಂಡಿದ್ದರಿಂದ ಶರಣ್ ಪಂಪ್ ವೆಲ್ ಅವರಿಗೂ ವಿಷಯ ತಿಳಿಸಿದ್ದೇವೆ. ಆಗ 
'ನಿಮಗೆ ಅವರ ಸಂಪರ್ಕವೇ ಇಲ್ಲಾಂದ್ರೆ ನೀವ್ಯಾಕೆ ಅಷ್ಟು ತಲೆ ಬಿಸಿ ಮಾಡ್ತೀರಿ ಬಿಟ್ಹಾಕಿ' ಎಂದು ಶರಣ್ ಹೇಳಿದ್ದರು. ಈಗ ನನ್ನ ಹೆಸರನ್ನು ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಚೈತ್ರಾ ಕುಂದಾಪುರ ಉಲ್ಲೇಖ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios