ಬೆಂಗಳೂರು(ಜು.28): ಕಳೆದ 2019-20ನೇ ಸಾಲಿನ ಸರಕುಗಳು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸಂಪೂರ್ಣ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 18,628 ಕೋಟಿ ರು. ಬಿಡುಗಡೆಯಾಗಿದೆ.

ಎಲ್ಲಾ ರಾಜ್ಯಗಳಿಗೂ 2019-20ನೇ ಹಣಕಾಸು ಸಾಲಿನ ಜಿಎಸ್‌ಟಿ ಸಂಪೂರ್ಣ ಪರಿಹಾರ ಬಿಡುಗಡೆಯಾಗಿದ್ದು, ಒಟ್ಟು. 1.65 ಲಕ್ಷ ಕೋಟಿ ರು. ಬಿಡುಗಡೆ ಮಾಡಲಾಗಿದೆ.

ರಾಜ್ಯಕ್ಕೆ 4314 ಕೋಟಿ ರು. ಜಿಎಸ್‌ಟಿ ಅನುದಾನ ಬಿಡುಗಡೆ ಮಾಡಿದ ಕೇಂದ್ರ!

ಮಹಾರಾಷ್ಟ್ರ ರಾಜ್ಯಕ್ಕೆ ಅತಿ ಹೆಚ್ಚು ಪರಿಹಾರ ಮೊತ್ತ 19,233 ಕೋಟಿ ರು. ಬಿಡುಗಡೆಯಾಗಿದೆ. ನಂತರ ಕರ್ನಾಟಕ ರಾಜ್ಯಕ್ಕೆ ಹೆಚ್ಚು ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಒಟ್ಟು 18,628 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ಮಾಚ್‌ರ್‍ನಿಂದ ಮೇ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ 10,208 ಕೋಟಿ ರು. ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕಿತ್ತು. ಈ ಹಣ ನೀಡುವಂತೆ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಮಾರ್ಚ್ ತಿಂಗಳಿಗೆ ಸಂಬಂಧಪಟ್ಟಂತೆ 1,460 ಕೋಟಿ ರು. ನೀಡಬೇಕಾಗಿತ್ತು. ಡಿಸೆಂಬರ್‌ ತಿಂಗಳಿನಿಂದ ಫೆಬ್ರವರಿವರೆಗೆ ತ್ರೈಮಾಸಿಕಕ್ಕೆ ಸಂಬಂಧಪಟ್ಟಂತೆ 4,314 ಕೋಟಿ ರು. ಕೇಂದ್ರ ಬಿಡುಗಡೆ ಮಾಡಿತ್ತು.