ರಾಜ್ಯದಲ್ಲಿ ಸೀಡಿ ಪ್ರಕರಣ ಸಾಕಷ್ಟು ಸದ್ದಾಗುತ್ತಿದ್ದು ಇದೇ ವೇಳೆ ಸೀಡಿ ಲೇಡಿ ತನೆಗೆ ರಕ್ಷಣೆ ನೀಡಬೇಕೆಂದು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾಳೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕಿ ಸೀಡಿ ಲೇಡಿ ಸಹಾಯಕ್ಕೆ ಬದ್ಧ ಎಂದಿದ್ದಾರೆ. 

ಬೆಂಗಳೂರು (ಮಾ.26): ಸಿ.ಡಿ. ಪ್ರಕರಣದ ತನಿಖೆಯ ವರದಿ ಏನೇ ಬಂದರೂ ಯುವತಿಗೆ ರಕ್ಷಣೆ ನೀಡಲು ಯಾವುದೇ ಹಿಂದೇಟು ಹಾಕುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ವಿಡಿಯೋದಲ್ಲಿ ಯುವತಿ ಏನು ಹೇಳಿದ್ದಾಳೆ ಎಂಬುದು ಗಮನಕ್ಕೆ ಬಂದಿಲ್ಲ. ಯುವತಿಗೆ ರಕ್ಷಣೆ ನೀಡುವುದಾಗಿ ಸದನದಲ್ಲಿಯೇ ತಿಳಿಸಲಾಗಿದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಆಕೆಗೆ ರಕ್ಷಣೆ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಸೀಡಿ ಕೇಸ್ : ರಮೇಶ್ ಜಾರಕಿಹೊಳಿಗೆ ಈಗ ಉಲ್ಟಾ ...

ನಮ್ಮಿಂದ ರಕ್ಷಣೆ ನೀಡುವ ಕೆಲಸ ಮಾಡಲಾಗುವುದು. ಹೆಣ್ಣು ಮಗಳಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಸರ್ಕಾರ ಯುವತಿಗೆ ರಕ್ಷಣೆ ನೀಡುವಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.

ಪೋಷಕರಿಗೆ ರಕ್ಷಣೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಗೆ ಅನ್ಯಾಯ ಆಗಿದೆಯಾ ಅಥವಾ ಇಲ್ಲವೋ ಎಂಬುದು ಎಸ್‌ಐಟಿ ತನಿಖೆ ಬಳಿಕ ತಿಳಿಯಲಿದೆ. ಆದರೆ ಯುವತಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಅದನ್ನು ಮಾಡುತ್ತೇವೆ. ತನಿಖಾ ತಂಡವೂ ಸಹ ಯುವತಿಯ ಹುಡುಕಾಟದಲ್ಲಿದೆ. ಮಹಿಳಾ ಇಲಾಖೆಯಿಂದ ರಕ್ಷಣೆ ಕೇಳಿದರೆ ನಮ್ಮ ಕಡೆಯಿಂದಲೂ ರಕ್ಷಣೆ ನೀಡಲು ಸಿದ್ಧ ಎಂದು ಹೇಳಿದರು.