ಬೆಂಗಳೂರು(ಆ.23):  ಡಿ.ಜೆ ಹಳ್ಳಿ‌-ಕೆ.ಜಿ‌ ಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧಿಸಿದಂತೆ ಗನ್‌ಗಳನ್ನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೌದು, ಗಲಭೆಯಲ್ಲಿ ಪೊಲೀಸರು ಫೈರಿಂಗ್‌ಗೆ ಬಳಸಿದ್ದ ಗನ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

"

ತನಿಖಾ ಹಂತದಲ್ಲಿ ಮಹತ್ವದ ಪಾತ್ರವಿರುವ ಹಿನ್ನೆಲೆಯಲ್ಲಿ ಡಿ.ಜೆ ಹಳ್ಳಿ ಠಾಣಾ ಪೊಲೀಸರು ಬಳಸಿದ್ದ 17 ಎಸ್ಎಲ್ಆರ್ ಗನ್‌ಗಳು ಸಿಸಿಬಿ ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಫೈರಿಂಗ್ ನಡೆದ ಸ್ಥಳಗಳನ್ನ ಎಫ್‌ಎಸ್‌ಎಲ್‌ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.  

ಬೆಂಗಳೂರು ಗಲಭೆ : ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸಿಗೆ ಹೊಸ ಟ್ವಿಸ್ಟ್

ಇನ್ನು ಹಲವು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಲಾಗುತ್ತದೆ. KSRP, CAR ಮತ್ತು ಡಿಜೆಹಳ್ಳಿ ಪೊಲೀಸರು ಬಳಸಿದ್ದ ಬಂದೂಕುಗಳನ್ನ ವಶಕ್ಕೆ ಪಡೆಯಲಾಗಿದೆ. ಫೈರಿಂಗ್‌ಗೆ ಬಳಸಿದ್ದ ಪಿಸ್ತೂಲ್ ಮತ್ತು ಗನ್‌ಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗುತ್ತದೆ. ಮುಂದಿನ ತನಿಖಾ ಹಂತದಲ್ಲಿ ಈ ಬಂದೂಕುಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.