Asianet Suvarna News Asianet Suvarna News

ಬಿಟ್‌ ಕಾಯಿನ್‌ ಶ್ರೀಕಿ ಭಾರೀ ಐಷಾರಾಮಿ ಜೀವನ!

  • ಆನ್‌ಲೈನ್‌ ಗೇಮ್‌ ಕಂಪನಿಗಳು, ಸರ್ಕಾರಿ ವೆಬ್‌ಸೈಟ್‌ಗಳಿಗೆ ಕನ್ನ ಹಾಗೂ ಬಿಟ್‌ ಕಾಯಿನ್‌ ದಂಧೆ ಮೂಲಕ ಕುಖ್ಯಾತಿ 
  • ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಐಷರಾಮಿ ಜೀವನ ಚರಿತ್ರೆ ಸಿಸಿಬಿ ತನಿಖೆಯಲ್ಲಿ ಬಯಲು
CCB Reveal about Hacker Shreeki   life of luxury snr
Author
Bengaluru, First Published Nov 11, 2021, 7:36 AM IST
  • Facebook
  • Twitter
  • Whatsapp

ಬೆಂಗಳೂರು (ನ.11):  ಆನ್‌ಲೈನ್‌ ಗೇಮ್‌ ಕಂಪನಿಗಳು, ಸರ್ಕಾರಿ ವೆಬ್‌ಸೈಟ್‌ಗಳಿಗೆ (website) ಕನ್ನ ಹಾಗೂ ಬಿಟ್‌ ಕಾಯಿನ್‌ (Bitcoin) ದಂಧೆ ಮೂಲಕ ಕುಖ್ಯಾತಿ ಪಡೆದಿರುವ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ (Hacker) ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಐಷರಾಮಿ ಜೀವನ ಚರಿತ್ರೆಯನ್ನು ಸಿಸಿಬಿ ತನಿಖೆಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದೆ.

ಪಂಚಾತಾರ ಹೋಟೆಲ್‌ ( 5 Star Hotel), ರೆಸಾರ್ಟ್‌ಗಳಲ್ಲಿ ತಿಂಗಳುಗಳ ಕಾಲ ವಾಸ್ತವ್ಯ, ಖಾಸಗಿ ವಿಮಾನದಲ್ಲಿ (Flight) ಓಡಾಟ, ರಾಜಕಾರಣಿಗಳು, ಗುತ್ತಿಗೆದಾರರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ವೈದ್ಯರು ಸೇರಿ ಸಮಾಜದ ಗಣ್ಯರ ಮಕ್ಕಳ ಸ್ನೇಹ... ಹೀಗೆ ಶ್ರೀಕಿ ಬಿಂದಾಸ್‌ ಬದುಕು ನಡೆದಿತ್ತು.

ಎರಡು ತಿಂಗಳ ಹಿಂದೆ ಬಿಟ್‌ ಕಾಯಿನ್‌ (Bit coin) ಪ್ರಕರಣದಲ್ಲಿ ಜಾಮೀನು ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬಂದಿದ್ದ ಶ್ರೀಕಿ, ಬಳಿಕ ಪಂಚಾತಾರ ಹೋಟೆಲ್‌ನಲ್ಲಿ ( ವಾಸ್ತವ್ಯ ಹೂಡಿದ್ದು ಗಮನಾರ್ಹ ಸಂಗತಿ.

ಡ್ರಗ್ಸ್‌ ಹಾಗೂ ಬಿಟ್‌ ಕಾಯಿನ್‌ ಪ್ರಕರಣಗಳ ವಿಚಾರಣೆ ವೇಳೆ ಸಿಸಿಬಿ ಮುಂದೆ ಕಾಂಗ್ರೆಸ್‌ ನಾಯಕರಾದ ಶಾಸಕ ಎನ್‌.ಎ.ಹ್ಯಾರಿಸ್‌ ಹಾಗೂ ಮಾಜಿ ಸಚಿವ ರುದ್ರಪ್ಪ ಲಮಾಣಿ ಮಕ್ಕಳು ಸೇರಿದಂತೆ ಗಣ್ಯರ ಮಕ್ಕಳ ಸ್ನೇಹದ ಬಗ್ಗೆ ಶ್ರೀಕಿ ಹೇಳಿಕೊಂಡಿದ್ದ. ಈ ಹೇಳಿಕೆಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾದ ಆರೋಪ ಪಟ್ಟಿಯಲ್ಲಿ ಉಲ್ಲೇಖ ಸಹ ಆಗಿವೆ.

ಹಣ ಎಗರಿಸುವಲ್ಲಿ ‘ತಾಂತ್ರಿಕ ನಿಪುಣ’:

ಜಯನಗರದ ಶ್ರೀಕಿ ತಾಂತ್ರಿಕವಾಗಿ ನಿಪುಣನಾಗಿದ್ದು, ನೆದರ್ಲೆಂಡ್‌ನಲ್ಲಿ ಆತ ವ್ಯಾಸಂಗ ಮಾಡಿದ್ದ. ಪೋಕರ್‌ ಗೇಮ್‌ಗಳು ಸೇರಿದಂತೆ ದೇಶ-ವಿದೇಶದ ಸರ್ಕಾರಿ ಹಾಗೂ ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಹಣ ಲಪಾಟಿಯಿಸುವಲ್ಲಿ ಶ್ರೀಕಿ ಕುಖ್ಯಾತಿ ಪಡೆದಿದ್ದ.

ಕ್ರಿಪ್ಪೋ ಕರೆನ್ಸಿಗಳಾದ ಬಿಟ್‌ ಕಾಯಿನ್‌, ವೈಎಫ್‌ಎ, ಇಥೆರಿಯಂ ಖಾತೆಗಳಲ್ಲಿ ಕೋಟ್ಯಂತರ ಮೌಲ್ಯದ ಕರೆನ್ಸಿಯನ್ನು ಆತ ದೋಚಿದ್ದ. ಅಲ್ಲದೆ 2019ರಲ್ಲಿ ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ನ್ನು ಹ್ಯಾಕ್‌ ಮಾಡಿ ಆತ .11 ಕೋಟಿ ಹಣ ಎಗರಿಸಿದ್ದ. ಸಿಸಿಬಿ ತನಿಖೆ ವೇಳೆ 3 ಬಿಟ್‌ ಕಾಯಿನ್‌ ಎಕ್ಸ್‌ಚೆಂಜ್‌ ಏಜೆನ್ಸಿಗಳು, 10 ಪೋಕರ್‌ ವೆಬ್‌ಸೈಟ್‌ಗಳು ಹಾಗೂ 3 ಮಾಲ್‌ವೇರ್‌ ಎಕ್ಸ್‌ಪ್ಲೋಟೆಡ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ವಿದೇಶ ಕಂಪನಿಗಳಿಗೆ ಇಂಟರ್‌ಪೋಲ್‌ ಮುಖಾಂತರ ಸಿಸಿಬಿ ಮಾಹಿತಿ ಸಹ ನೀಡಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶ್ರೀಕಿಯಿಂದ .9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ಸಿಸಿಬಿ ವಶಕ್ಕೆ ಪಡೆದಿತ್ತು. ಇನ್ನು ಇ-ಪ್ರಕ್ಯೂರ್‌ಮೆಟ್‌ ವೆಬ್‌ಸೈಟ್‌ ಹ್ಯಾಕ್‌ ಪ್ರಕರಣ ಸಂಬಂಧ ಸಿಐಡಿ ಸೈಬರ್‌ ವಿಭಾಗದ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯಿಂದ ಹಣ ಜಪ್ತಿ ಮಾಡಿದ್ದ ಸಿಐಡಿ ಅಧಿಕಾರಿಗಳು, ಶ್ರೀಕಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ಸಿಐಡಿ ಸಹ ಪ್ರಾಥಮಿಕ ಹಂತದ ಆರೋಪ ಪಟ್ಟಿಸಲ್ಲಿಕೆಗೆ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

ಗಣ್ಯರ ಮಕ್ಕಳ ಜತೆ ಶ್ರೀಕಿ ಸ್ನೇಹ:

ಆನ್‌ಲೈನ್‌ ಗೇಮಿಂಗ್‌ ಹಾಗೂ ಡ್ರಗ್ಸ್‌ ದಂಧೆಯಲ್ಲಿ ಬಿಟ್‌ ಕಾಯಿನ್‌ ಚಲಾವಣೆಗೆ ಶ್ರೀಕಿಗೆ ಗಣ್ಯರ ಮಕ್ಕಳು ನೆರವು ಪಡೆದಿದ್ದರು ಎಂಬ ಆರೋಪ ಬಂದಿದೆ. ಮೋಜಿನ ಜೀವನ ಕಡೆ ಆಕರ್ಷಿತನಾಗಿದ್ದ ಶ್ರೀಕಿ ಸಹ ಹಣದಾಸೆಗೆ ಶ್ರೀಮಂತರ ಮಕ್ಕಳಿಗೆ ಸಾಥ್‌ ಕೊಟ್ಟಿದ್ದ. ಪೋಕರ್‌ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ತನ್ನ ಸ್ನೇಹಿತರಾದ ಸುನೀಶ್‌ ಶೆಟ್ಟಿ, ಪ್ರಸಿದ್‌್ಧ ಶೆಟ್ಟಿ, ಸುಜಯ್‌, ಹೇಮಂತ್‌ ಮುದ್ದಪ್ಪ ಹಾಗೂ ರಾಬಿನ್‌ ಖಂಡೇಲ್‌ ವಾಲ್‌ ಜತೆ ಸೇರಿ ಆತ ಹ್ಯಾಕ್‌ ಮಾಡುತ್ತಿದ್ದ. ಡ್ರಗ್ಸ್‌ ಮಾರಾಟದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿಗೆ ಶ್ರೀಕಿ ನೆರವು ನೀಡಿದ್ದ ಎಂದು ಮೂಲಗಳು ಹೇಳಿವೆ.

ವೆಬ್‌ಸೈಟ್‌ಗಳಲ್ಲಿ ದತ್ತಾಂಶವನ್ನು ಕದ್ದು ಆತ, ಗೇಮಿಂಗ್‌ ವೆಬ್‌ಸೈಟ್‌ಗೆ ಅಕ್ರಮವಾಗಿ ಬಳಸುತ್ತಿದ್ದ. ಬೆಂಗಳೂರಿನ ಪಂಚಾತಾರ ಹೋಟೆಲ್‌ಗಳು ಹಾಗೂ ನಗರ ಹೊರವಲಯದ ರೆಸಾರ್ಟ್‌ಗಳೇ ಹ್ಯಾಕಿಂಗ್‌ಗೆ ಶ್ರೀಕಿಯ ಅಡ್ಡೆಗಳಾಗಿದ್ದವು. ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ಬಿಟ್‌ ಕಾಯಿನ್‌ಗಳನ್ನು ಕಳವು ಮಾಡಿ ಬಿಟ್‌ ಕಾಯಿನ್‌ ಟ್ರೇಡರ್‌ ರಾಬಿನ್‌ ಖಂಡೇಲ್‌ವಾಲ್‌ ಹಾಗೂ ಇತರೆ ಟ್ರೇಡರ್‌ಗಳಿಗೆ ಮಾರುತ್ತಿದ್ದ. ಆನಂತರ ಟ್ರೇಡರ್‌ಗಳಿಂದ ತನ್ನ ಸಹಚರರ ಬ್ಯಾಂಕ್‌ ಖಾತೆಗೆ ಹಾಗೂ ಹವಾಲ ಮುಖಾಂತರ ಹಣ ಸ್ವೀಕರಿಸಿ ಶ್ರೀಕಿ ಐಷರಾಮಿ ಜೀವನ ನಡೆಸುತ್ತಿದ್ದ. ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಮತ್ತು ಮಾಹಿತಿ ಪಡೆಯಲು ಪ್ರೈವೇಟ್‌ ಕೀಗಳನ್ನು ಕಳವು ಮಾಡಲು, ವರ್ಗಾವಣೆ ಮಾಡಿಕೊಳ್ಳಲು ಕೆಲವು ಹ್ಯಾಕಿಂಗ್‌ ಟೂಲ್‌ಗಳನ್ನು ಹಾಗೂ ವೆಬ್‌ಸೈಟ್‌ಗಳನ್ನು ಆತ ಬಳಸಿದ್ದಾನೆ. ಡಾರ್ಕ್ ವೆಬ್‌ ಸೈಟ್‌ಗಳಲ್ಲಿ ವಿದೇಶದಲ್ಲಿ ಡ್ರಗ್ಸ್‌ ಕದ್ದಿರುವ ಬಿಟ್‌ ಕಾಯಿನ್‌ಗಳನ್ನು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇಡಿಯಿಂದ 1.44 ಕೋಟಿ ರು. ಆಸ್ತಿ ಜಪ್ತಿ:

ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಪೋರ್ಟಹಾಲ್‌ ಹ್ಯಾಕ್‌ ಪ್ರಕರಣ ಸಂಬಂಧ ಹ್ಯಾಕರ್‌ ಶ್ರೀಕಿಗೆ ಸೇರಿದ 1.44 ಕೋಟಿ ರು ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. 2019ರಲ್ಲಿ ಇ-ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದ ಶ್ರೀ, .11.55 ಕೋಟಿ ಅನ್ನು ಇತರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ನೀಡಿದ ವರದಿ ಆಧರಿಸಿ ಶ್ರೀಕಿ ಹಾಗೂ ಆತನ ವಂಚನೆ ಕೃತ್ಯಕ್ಕೆ ನೆರವು ನೀಡಿದ ಆರೋಪದ ಮೇರೆಗೆ ನಿಮ್ಮಿ ಎಂಟರ್‌ಪ್ರೈಸಸ್‌ ಮತ್ತು ಇತರರ 1.44 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದ್ದರು.

ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕಿ, ಸರ್ಕಾರದ ಪೋರ್ಟಲ್‌ಗಳನ್ನು ಹ್ಯಾಕ್‌ ಮಾಡಿ ಅದರಲ್ಲಿನ ಹಣವನ್ನು ಸ್ವಯಂ ಸೇವಾ ಸಂಸ್ಥೆಗಳಾದ ನಾಗಪುರದ ಉದಯ್‌ ಗ್ರಾಮ ವಿಕಾಶ್‌ ಸಂಸ್ಥೆ ಹಾಗೂ ಉತ್ತರ ಪ್ರದೇಶದ ನಿಮ್ಮಿ ಎಂಟರ್‌ಪ್ರೆಸಸ್‌ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದ. ತರುವಾಯ ಆನಂತರ ಎನ್‌ಜಿಒ ಕಡೆಯಿಂದ ಖರೀದಿದಾರ ನೆಪದಲ್ಲಿ ಹಣವನ್ನು ಶ್ರೀಕಿ ಸ್ವೀಕರಿಸಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಲ್ಲೂ ಬಿಟ್‌ ಕಾಯಿನ್‌ ದಂಧೆ!

ಬೆಂಗಳೂರು: ವಿದೇಶಲ್ಲಿ ಬಿಟ್‌ಕಾಯಿನ್‌ ವ್ಯವಹಾರದಲ್ಲಿ ಆದ ನಷ್ಟವನ್ನು ಹ್ಯಾಕಿಂಗ್‌ ಮಾಡಿ ಸರಿದೂಗಿಸಿಕೊಂಡೆ ಎಂದು ಪೊಲೀಸರ ಮುಂದೆ ಶ್ರೀಕಿ ಹೇಳಿದ್ದಾನೆ.

‘ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ಮುಗಿಸಿದ ಬಳಿಕ ನೆದರ್ಲೆಂಡ್‌ ದೇಶದ ರಾಜಧಾನಿ ಅಮ್‌ಸ್ಟರ್‌ಡ್ಯಾಂಗೆ ತೆರಳಿದೆ. ಅಲ್ಲಿ ಬಿಟ್‌ ಕಾಯಿನ್‌ ನೆಟ್‌ ವರ್ಕ್ ವಿಸ್ತರಿಸಿದೆ. ಆಗ saಠಿಟs.್ಞಜಿ ಹೆಸರಿನ ಅಧಿಕೃತವಾದ ಬಿಟ್‌ ಕಾಯಿನ್‌ ಎಕ್ಸ್‌ಚೆಂಜ್‌ ಏಜೆನ್ಸಿಯನ್ನು ನನ್ನ ಗೆಳೆಯರಾದ ಟಿಮ್‌ ಕಾಮರ್‌ ಹಾಗೂ ಇಡ್ಯು ಡೆರಿಸ್ಸೇನ್‌ ನಿರ್ವಹಿಸುತ್ತಿದ್ದರು. ಆ ವೇಳೆ ನನಗೆ ವಾಲಿಡ್‌ ಅಟ್ಟಡ್ಲ್ಯುಲ್‌ ಹೆಸರಿನ ಚಾಲಕನ ಪರಿಚಯವಾಯಿತು. ಆತ ನನ್ನನ್ನು ನೆದರ್ಲೆಂಡ್‌ ಸುತ್ತಾಡಿಸಿದ. ಪ್ರತಿ ದಿನ 50000 ದಿಂದ 1 ಲಕ್ಷ ಯೂರೋ ಕರೆನ್ಸಿ ವಹಿವಾಟು ನಡೆಸಿದೆ. ಇದರಿಂದ ನನಗೆ ಶೇ.3 ರಿಂದ 5 ರಷ್ಟುಆದಾಯ ಸಿಗುತ್ತಿತ್ತು. ಹೀಗಿರುವಾಗ ಒಂದು ದಿನ ಮರೆತು ಕಾರಿನಲ್ಲಿ ನನ್ನ ಸೋದರನ ಮನೆ ಬೀಗ ಕೀಗಳನ್ನು ಬಿಟ್ಟು ಬಂದಿದ್ದೆ. ಆ ಕೀ ಬಳಿಸಿ ಚಾಲಕ, ನನ್ನ ಸೋದರನ ಮನೆಯಲ್ಲಿ ಲ್ಯಾಪ್‌ಟಾಪ್‌, ಪಾಸ್‌ ಪೋರ್ಟ್‌ ಹಾಗೂ ಹಣ ಕಳ್ಳತನ ಮಾಡಿದ್ದ. ಈ ಕಳ್ಳತನ ಪ್ರಕರಣದಲ್ಲಿ ಚಾಲಕನ ಬಂಧನವಾಯಿತು. ಆದರೆ ನನ್ನ ಲ್ಯಾಪ್‌ಟಾಪ್‌ ನನಗೆ ಸಿಗಲಿಲ್ಲ. ಇದರಿಂದ ನನಗೆ ಭಾರಿ ನಷ್ಟವಾಯಿತು. ಬಿಟ್‌ ಕಾಯಿನ್‌ನಲ್ಲಿ ಸುಮಾರು 3ಮಿಲಿಯನ್‌ ಡಾಲರ್‌ ನಷ್ಟವಾಯಿತು’ ಎಂದು ಶ್ರೀಕಿ ಹೇಳಿದ್ದಾನೆ.

ಆಮೇಲೆ ಇಟಲಿ, ಸ್ವೀಡನ್‌, ಸ್ವಿಜರ್ಲೆಂಡ್‌, ಫ್ರಾನ್ಸ್‌ ಹಾಗೂ ಜರ್ಮನಿಗೆ ಹ್ಯಾಕಿಂಗ್‌ ನೆಟ್‌ವರ್ಕ್ ವಿಸ್ತರಿಸಿದೆ. ಆಗ ನಷ್ಟವಸೂಲಿ ಆಯಿತು ಎಂದಿದ್ದಾನೆ.

Follow Us:
Download App:
  • android
  • ios