ಬೆಂಗಳೂರು (ಜ. 09): ನಯ ವಂಚಕ ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಇದು ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ವಿಚಾರಣೆ ವೇಳೆ ಯುವರಾಜ್‌ನಿಂದ 75 ಲಕ್ಷ ತೆಗೆದುಕೊಂಡಿದ್ದು ನಿಜ. ಆದರೆ ಆತನ ಬೇರೆ ಕೆಲಸಗಳಿಗೆ ಸಾಥ್ ನೀಡಿಲ್ಲ ಎಂದಿದ್ದಾರೆ. ಇಲ್ಲಿ ಬರೀ 75 ಲಕ್ಷ ಮಾತ್ರವಲ್ಲ, 1 ಕೋಟಿ ರೂ ಪಡೆದಿದ್ದಾರೆ. ಅದನ್ನು ಸಿಸಿಬಿ ಮುಂದೆ ಮುಚ್ಚಿಡಲು ಹೋಗಿ ತಗಲಾಕ್ಕೊಂಡಿದ್ದಾರೆ. 

ಸಿಸಿಬಿ ವಿಚಾರಣೆ ಬಿಗಿಯಾಗುತ್ತಿದ್ದಂತೆ ರಾಧಿಕಾ, ಪ್ರಭಾವಿಗಳಿಂದ ಒತ್ತಡ ಹಾಕಿಸಲು ಪ್ರಾರಂಭಿಸುತ್ತಾರೆ. ಆದರೆ ಇದಕ್ಕೆಲ್ಲಾ ಸಿಸಿಬಿ ಬಗ್ಗುವುದಿಲ್ಲ.

ನಯವಂಚಕ ಯುವರಾಜ್ ಜೊತೆ ಪ್ರಭಾವಿ ರಾಜಕಾರಣಿಗಳ ಫೋಟೊ ಸಿಕ್ಕಿದ್ದು, ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.