ಬೆಂಗಳೂರು(ನ.15): ಬೆಂಗಳೂರಿನ ಇಂದಿರಾನಗರದಲ್ಲಿರವ ಪ್ರತಿಷ್ಠಿತ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(FCRA) ಉಲ್ಲಂಘಿಸಿ ಅಮ್ನೆಷ್ಟಿ ಸಂಸ್ಥೆ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಇಂದು [ಶುಕ್ರವಾರ] ಸಿಬಿಐ ದಿಢೀರ್​​ ಅಮ್ನೆಸ್ಟಿ ಸಂಸ್ಥೆ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ದೆಹಲಿಯಲ್ಲಿರುವ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಕಂಪನಿ ಮೇಲೂ ದಾಳಿಯಾಗಿದೆ.

ಮಯಾಂಕ್ ಅಗರ್ವಾಲ್ ದ್ವಿಶತಕ, JDS ಗೆಲ್ಲದಂತೆ ಕೈ ತಂತ್ರ; ನ.15ರ ಟಾಪ್ 10 ಸುದ್ದಿ!

ಕಳೆದ ವರ್ಷ ಅಕ್ಟೋಬರ್​​​ 25ನೇ ತಾರೀಕಿನಂದು ಜಾರಿ ನಿರ್ದೇಶನಾಲಯ ಅಮ್ನೆಸ್ಟಿ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿತ್ತು. ತನಿಖೆ ನಡೆಸುತ್ತಿದ್ದ ಮಧ್ಯದಲ್ಲೇ ಇಡಿ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಿಡಿಸಿತ್ತು.

ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ ಉಲ್ಲಂಘಿಸಿರುವ ಅಮ್ನೆಷ್ಟಿ ಸಂಸ್ಥೆ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂದು ಆರೋಪಿಸಿತ್ತು. ಇಡಿ ಕೊಟ್ಟ ದೂರಿನ ಮೇರೆಗೆ ಸಿಬಿಐ ಕೇಸ್ ದಾಖಲಿಸಿಕೊಂಡಿತ್ತು.

ಅಮ್ನೆಸ್ಟಿ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ 36 ಕೋಟಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ 10 ಕೋಟಿಯನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಅಮ್ನೆಸ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದು, ಇವರಿಗೆ ಸಂಬಂಧಿಸಿದ ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಆದ್ರೆ, ದಾಳಿ ವೇಳೆ ಏನೆಲ್ಲಾ ಪತ್ತೆಯಾಗಿದೆ ಎನ್ನುವುದು ಇನ್ನು ಮಾಹಿತಿ ಸಿಕ್ಕಿಲ್ಲ.

ಎಲ್ಲಾ ಪರಿಶೀಲನೆ ಮುಗಿಸಿದ ಬಳಿಕ ಏನೆಲ್ಲಾ ಆಯ್ತು..? ದಾಳಿ ವೇಳೆ ಏನೆಲ್ಲಾ ಸಿಕ್ತು ಎನ್ನುವುದನ್ನು ಸಿಬಿಐ ಪತ್ರಿಕಾ ಪ್ರಕಟಣೆ ಹೊರಡಿಸುವ ಸಾಧ್ಯತೆಗಳಿವೆ.