ಬೆಂಗಳೂರು(ಅ.05): ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

"

ಐವರು ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.ಡಿಕೆಶಿ ಮಾತ್ರವಲ್ಲದೇ ಸಹೋದರ ಡಿಕೆ ಸುರೇಶ್ ಮನೆ ಮೇಲೂಲ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

"

ಈ ದಾಳಿ ಬೆನ್ನಲ್ಲೇ ಅವರ ವಕೀಲ ವಿಕ್ರಮ್ ಕೂಡಾ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ.

"

ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ತನಿಖೆಗೆ ಅನುಮತಿ ನೀಡಿತ್ತು.

"

ಆದರೆ ಕೆಲ ದಿನಗಳ ಹಿಂದಷ್ಟೇ ಡಿಕೆಶಿ ಈ ಅನುಮತಿ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರಾದರೂ ಇದು ವಜಾಗೊಂಡಿತ್ತು. 

"

ಅರ್ಜಿ ವಜಾ ಬೆನ್ನಲ್ಲೇ ಸಿಬಿಐ ತನಿಖೆ ಚುರುಕುಗೊಳಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇಂದು ಡಿ.ಕೆ ಶಿವಕುಮಾರ್​​ ಮನೆ ಮೇಲೆ ಸಿಬಿಐ ರೇಡ್ ನಡೆದಿದೆ.

ಈಗಾಗಲೇ ED ವಿಚಾರಣೆ ಎದುರಿಸಿ ಹೈರಾಣಾಗಿರೋ ಡಿಕೆಶಿಗೆ ಈ ದಾಳಿ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.