Asianet Suvarna News Asianet Suvarna News

ಬೆಂಗಳೂರು ಕಾವೇರಿ ನೀರುಗಳ್ಳರಿಗೆ ಜಲಮಂಡಳಿ ಬಿಗ್ ಶಾಕ್ ; ಅಕ್ರಮ ನೀರಿನ ಸಂಪರ್ಕಕ್ಕೆ ದಂಡ ಅಷ್ಟೇ ಅಲ್ಲ, ಜೈಲೂಟ ಫಿಕ್ಸ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆ ಕಾವೇರಿ ನೀರುಗಳ್ಳರಿಗೆ ಬೆಂಗಳೂರು ಜಲಮಂಡಳಿ ಬಿಗ್ ಶಾಕ್ ನೀಡಿದೆ. ಇನ್ಮುಂದೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆದರೆ ದಂಡ ಅಷ್ಟೇ ಅಲ್ಲ, ಜೈಲು ಶಿಕ್ಷೆಯೂ ಆಗುತ್ತೆ!

Cauvery water theft case FIR along with fine bwssb warn at bengaluru rav
Author
First Published Dec 11, 2023, 12:51 PM IST

ಬೆಂಗಳೂರು (ಡಿ.11): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆ ಕಾವೇರಿ ನೀರುಗಳ್ಳರಿಗೆ ಬೆಂಗಳೂರು ಜಲಮಂಡಳಿ ಬಿಗ್ ಶಾಕ್ ನೀಡಿದೆ. ಇನ್ಮುಂದೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆದರೆ ದಂಡ ಅಷ್ಟೇ ಅಲ್ಲ, ಜೈಲು ಶಿಕ್ಷೆಯೂ ಆಗುತ್ತೆ!

ಬೆಂಗಳೂರಿನಲ್ಲಿ ಅನಧಿಕೃತ ಕಾವೇರಿ ನೀರಿನ ಸಂಪರ್ಕ ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ರೂ ಕಾವೇರಿ ನೀರು ಕಳ್ಳತನ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಹೆಚ್ಚಿನ ಕಾವೇರಿ ನೀರಿನ ಸಂಪರ್ಕಗಳಿವೆ. ಆದರೆ ಇವುಗಳಲ್ಲಿ ಅನಧಿಕೃತ ಸಂಪರ್ಕಗಳು ಹೆಚ್ಚಾಗಿವೆ. ಹೀಗಾಗಿ ಅಕ್ರಮ ನೀರಿನ ಸಂಪರ್ಕ ಪಡೆದ ಸಿಲಿಕಾನ್ ಸಿಟಿ ಜನರ ಮೇಲೆ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾದ ಜಲಮಂಡಳಿ.

ಬೆಂಗಳೂರು ಜನರಿಗೆ ಕುಡಿಯಲು ಕಾವೇರಿ ನೀರು ಉಳಿಸಿ: ನೀರಾವರಿ ನಿಗಮಕ್ಕೆ ಬಿಡಬ್ಲ್ಯೂಎಸ್‌ಎಸ್‌ಬಿ ಮನವಿ

ಬೆಂಗಳೂರು ನಗರದಲ್ಲಿ ಸಾವಿರಾರು ಮಂದಿ ಅನಧಿಕೃತ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಶೇ 35 ರಷ್ಟು ನೀರು ಲೆಕ್ಕಕ್ಕೆ ಸಿಗ್ತಿಲ್ಲ. ಅನಧಿಕೃತ ಸಂಪರ್ಕಗಳನ್ನ ಪತ್ತೆಗೆ ವಿಶೇಷ ತಂಡ ರಚನೆ ಇದ್ರೂ ಇಷ್ಟು ದಿನ ಜಲಮಂಡಳಿ ಇಂಜಿನಯರ್ಸ್ ಕೇವಲ ದಂಡ ಹಾಕಿ ಬಿಡುತ್ತಿತ್ತು. ಇನ್ಮುಂದೆ ಅನಧಿಕೃತ ಸಂಪರ್ಕ ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾದ ಜಲಮಂಡಳಿ. ದಂಡ ಅಷ್ಟೇ ಅಲ್ಲ ಎಫ್‌ಐಆರ್ ಹಾಕಿ ಜೈಲೂಟ ಫಿಕ್ಸ್ ಮಾಡಲಾಗುತ್ತೆ.

 

ಬೆಂಗಳೂರಿನ ಅರ್ಧ ಭಾಗಕ್ಕೆ ನಾಳೆ ನೀರೂ ಇಲ್ಲ, ಕರೆಂಟೂ ಇಲ್ಲ: ನಿಮ್ಮ ಏರಿಯಾ ಇದೆನಾ ನೋಡಿ

ಅನಧಿಕೃತ ನೀರಿನ ಸಂಪರ್ಕ ಪಡೆದವರ ಮೇಲೆ ಮುಲಾಜಿಲ್ಲದೆ ಎಫ್ ಐಆರ್ ದಾಖಲಿಸುವಂತೆ ಜಲಮಂಡಳಿ  ಎಲ್ಲಾ ಇಂಜಿನಿಯರ್ ಗಳಿಗೆ ಖಡಕ್ ಸೂಚನೆ ನೀಡಿದ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್. ಅನಧಿಕೃತ ನೀರಿನ ಸಂಪರ್ಕ ಪಡೆದಿದ್ರೆ ಎಫ್ಐಆರ್ ದಾಖಲು ಮಾಡಲು ಅಧಿಕಾರಿಗಳಿಗೆ ಕಟ್ಟಿನಿಟ್ಟಿನ ಸೂಚನೆ

Follow Us:
Download App:
  • android
  • ios