ಚೆನ್ನೈ, (ಜೂನ್.11): ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಇಂದು (ಗುರುವಾರ) ಕರ್ನಾಟಕಕ್ಕೆ ಸೂಚಿಸಿದೆ. 

 ಜೂನ್ ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.23 ಟಿಎಂಸಿ ನೀರು ಬಿಡುವಂತೆ ತಮಿಳುನಾಡಿನ ಮೆಟ್ಟೂರ್ ಅಣೆಕಟ್ಟಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಜೂನ್ 11ರಂದು ಸೂಚಿಸಿದೆ.

ರಾಜ್ಯದ ಪರ ವಕಾಲತ್ತು ವಹಿಸುತ್ತಿದ್ದ 9 ಮಂದಿಗೆ BSY ಸರ್ಕಾರದಿಂದ ಕೋಕ್, ಸ್ಟ್ರಾಟಜಿ ಏನು?

ಸುಪ್ರೀಂಕೋರ್ಟ್​ ಆದೇಶದಂತೆ 2018ರಲ್ಲಿ ರಚನೆಯಾದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದಿಂದ ಈವರೆಗೂ 6 ಸಭೆಗಳು ನಡೆದಿದ್ದು, ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಭೆಯಲ್ಲಿ ಪ್ರಾಧಿಕಾರ ಪ್ರತಿನಿಧಿಸುವ ನದಿತೀರದ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜೂನ್​ 12ಕ್ಕೆ ಮೆಟ್ಟೂರ್​ ಡ್ಯಾಂ ತೆರೆಯುವ ತಮಿಳುನಾಡು ಪ್ರಸ್ತಾವನೆಯನ್ನು ಪ್ರಾಧಿಕಾರ ಒಪ್ಪಿಕೊಂಡಿದೆ.

ನದಿಯಲ್ಲಿನ ನೀರಿನ ಹರಿವು ಸಾಮಾನ್ಯವಾಗಿದ್ದರೆ ಜೂನ್ ಮತ್ತು ಜುಲೈ ತಿಂಗಳಿಗೆ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್​ನ ಆದೇಶದಂತೆ ಕರ್ನಾಟಕವು ಬಿಲಿಗುಂಡ್ಲು (ಅಂತರ ರಾಜ್ಯ ಗಡಿ)ವಿನಿಂದ ನೀರು ಬಿಡುಗಡೆ ಮಾಡಬೇಕು ಎಂದು ಪ್ರಾಧಿಕಾರ ನಿರ್ದೇಶಿಸಿರುವುದಾಗಿ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ಕುಮಾರ್ ಜೈನ್ ತಿಳಿಸಿದ್ದಾರೆ.