13 ವರ್ಷದ ಕ್ಯಾನ್ಸರ್‌ ಪೀಡಿತ ಬಾಲಕನ IPS ಕನಸು ನನಸು ಮಾಡಿದ ಬೆಂಗಳೂರು ಪೊಲೀಸರು!

ಕ್ಯಾನ್ಸರ್‌ನಿಂದ ಬಳಲುತ್ತಿರುವ 13 ವರ್ಷದ ಬಾಲಕನ, ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಮೋಸಿನ್ ರಾಜ್‌ ಎಂಬ 13 ವರ್ಷದ ಬಾಲಕ ಐಪಿಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ. ಆದರೆ, ಚಿಕ್ಕ ವಯಸ್ಸಿನಲ್ಲೇ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಂಸ್ಥೆ, ಪೊಲೀಸರೊಂದಿಗೆ ಮಾತನಾಡಿ ಬಾಲಕನ ಆಸೆ ಈಡೇರಲು ಸಹಕರಿಸಿವೆ.

Cancer affected boy Master Mohsina Rajas wish comes true to be a police officer for a day rav

ಬೆಂಗಳೂರು (ಮಾ.3): ಕ್ಯಾನ್ಸರ್‌ನಿಂದ ಬಳಲುತ್ತಿರುವ 13 ವರ್ಷದ ಬಾಲಕನ, ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಮೋಸಿನ್ ರಾಜ್‌ ಎಂಬ 13 ವರ್ಷದ ಬಾಲಕ ಐಪಿಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ. ಆದರೆ, ಚಿಕ್ಕ ವಯಸ್ಸಿನಲ್ಲೇ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಂಸ್ಥೆ, ಪೊಲೀಸರೊಂದಿಗೆ ಮಾತನಾಡಿ ಬಾಲಕನ ಆಸೆ ಈಡೇರಲು ಸಹಕರಿಸಿವೆ.

 

ಬೆಂಗಳೂರು: ಅಂಧ ವ್ಯಕ್ತಿಯ ಕೈಹಿಡಿದು ರಸ್ತೆ ದಾಟಿಸಿ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್ !

ಬಾಲಕನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ದಕ್ಷಿಣ ವಿಭಾಗದ ಪ್ರಭಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಒಂದು ದಿನದ ಮಟ್ಟಿಗೆ ಬಾಲಕನಿಗೆ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ. ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನ (cancer-stricken boy) ಕನಸು ಈಡೇರಲು ನೆರವಾದ ಪೊಲೀಸರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

ಕ್ಯಾಮೆರಾ ಫ್ಲಾಶಲ್ಲಿ ಪತ್ತೆಯಾಯ್ತು, ಮಗುವಿಗೆ ಕ್ಯಾನ್ಸರ್ ಇರೋ ವಿಷಯ!

Latest Videos
Follow Us:
Download App:
  • android
  • ios