ಎನ್‌ಇಪಿ ರದ್ದು ಮಾಡುವ ಮುನ್ನ ಸಿಎಂ ಓದಲಿ: ಎಲ್ಲಿ ದೋಷವಿದೆ ಹೇಳಲಿ: ಬಿಸಿ ನಾಗೇಶ್ ಗರಂ
ಮುಂಬರುವ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರು (ಆ.18) :ಮುಂಬರುವ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎನ್ ಇಪಿ ರದ್ದು ಮಾಡುವುದು ಒಪ್ಪುವಂತದ್ದಲ್ಲ. ಮಂತ್ರಿಗಳ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ. ಅವರು ಹೇಳ್ತಾರೆ, ಮುಖ್ಯಮಂತ್ರಿಗಳಿಗೆ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಆಸಕ್ತಿ ಇದೆ ಹಾಗಾಗಿ ಪರಿಷ್ಕರಣೆ ಮಾಡ್ತಾ ಇದ್ದೇವೆ ಎಂದು. ಅಂದರೆ ಇವರು ಮಕ್ಕಳಿಗೋಸ್ಕರ ಮಕ್ಕಳಿಗೋಸ್ಕರ ಶಿಕ್ಷಣ ನೀಡುತ್ತಿಲ್ಲ. ಸಿದ್ದರಾಮಯ್ಯನವರಿಗೆ ಆಸಕ್ತಿ ಇಲ್ಲ ಎಂದು ಪರಿಷ್ಕರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ರಿಸರ್ಚ್ ಟೀಂನಿಂದ ಬಂದ ಪಠ್ಯವನ್ನು ಸೇರಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕೂಡ ರಾಜಕೀಯಗೊಳಿಸುತ್ತಿರುವ ಸರ್ಕಾರ ಯಾವುದಾದರೂ ಇದ್ದರೆ ಈ ಕೆಟ್ಟ ಸರ್ಕಾರ ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಎನ್‌ಇಪಿ ರದ್ದತಿ ನಿರ್ಧಾರ ಕೈಬಿಡಿ, ಇಲ್ಲದಿದ್ರೆ ಹೋರಾಟ: ಬೊಮ್ಮಾಯಿ
ಸಿದ್ದರಾಮಯ್ಯ ಮೊಮ್ಮಗ ಎಲ್ಲಿ ಓದ್ತಿದ್ದಾನೆ?
ಎನ್ ಇ ಪಿ ಯನ್ನು ರದ್ದು ಮಾಡಿರುವ ಸರ್ಕಾರ ಮೊದಲು ಅದನ್ನು ಓದಿ ಯಾವ ದೋಷವಿದೆ ಅಂತಾ ಹೇಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಓದಬೇಕು. ಎನ್ ಇಪಿ ಬೇಡ ಎನ್ನುವ ರಾಜಕಾರಣಿಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು,ಸಿದ್ದರಾಮಯ್ಯ ಮೊಮ್ಮಗ ಓದುತ್ತಿರುವ ಶಾಲೆ ಸಿಬಿಎಸ್ ಸಿ, ಉಳ್ಳವರು ಮಕ್ಕಳು ಸಿಬಿಎಸ್‌ಸಿಯಲ್ಲಿ ಓದಬಹುದು ಆದರೆ ಬಡಮಕ್ಕಳು ಮಾತ್ರ ಸ್ಟೇಟ್ ಸಿಲಬಸ್ ನಲ್ಲಿ ಓದಬೇಕಾ? ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿಗಳ ಒಡೆತನದ್ದಾಗಿದೆ.ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಇದರ ಹಿಂದಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸರ್ಕಾರದಲ್ಲಿ ಶಿಕ್ಷಣ ಸಚಿವರು ಯಾರು ಅನ್ನೋದೇ ಗೊತ್ತಾಗ್ತಿಲ್ಲ. ಮಧು ಬಂಗಾರಪ್ಪ ಶಿಕ್ಷಣ ಸಚಿವರಾ? ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಶಿಕ್ಷಣ ಸಚಿವರಾ? ನಿರಂಜನ್ ಆರಾಧ್ಯ ಶಿಕ್ಷಣ ಸಚಿವರ ಗೊತ್ತಿಲ್ಲ ಒಂದೂ ಗೊತ್ತಾಗ್ತಿಲ್ಲ. ಯಾಕೆಂದರೆ ಒಬ್ಬ ವ್ಯಕ್ತಿ ಸರ್ಕಾರದ ಶಿಕ್ಷಣ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ
ಮುಂದಿನ ಶೈಕ್ಷಣಿಕ ವರ್ಷಕ್ಕೆ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ